Advertisement
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ, ಮುಸ್ಲಿಂ, ರಾಮ ಮಂದಿರದಂಥ ವಿಷಯಗಳೇ ಇವರ ಪ್ರಚಾರದ ವಿಷಯಗಳಾಗಿವೆ. ವಿವಾದಾತ್ಮಕ ವಿಷಯಗಳ ಹೊರತಾಗಿ ಅಭಿವೃದ್ಧಿ ಹಾಗೂ ರಚನಾತ್ಮಕ ವಿಷಯದ ಚರ್ಚೆಗೆ ಬಿಜೆಪಿ ನಾಯಕರು ಸಿದ್ಧರಿಲ್ಲ ಎಂದು ದೂರಿದರು.
Related Articles
Advertisement
ದೇಶಕ್ಕೆ ಇಂದಿರಾ ಗಾಂಧಿ, ಯುಪಿಎ ಸರ್ಕಾರಗಳು ಅನುಪಮ ಕೊಡುಗೆ ನೀಡಿವೆ. ಆದರೆ ಬಿಜೆಪಿ-ಎನ್‍ಡಿಎ ಸರ್ಕಾರದಲ್ಲಿ ಫಸಲ ಭಿಮಾ ಯೋಜನೆಯಲ್ಲಿ ಕಂಪನಿಗಳು ಉದ್ಧಾರ ಆಗಿವೆ. ಅಂಬಾನಿ, ಅದಾನಿ ಅಭಿವೃದ್ಧಿ ಆಗಿದ್ದಾರೆ. ನಿಜಕ್ಕೂ ದೇಶವನ್ನು ಅಭಿವೃದ್ಧಿ ಮಾಡಿದ್ದರೆ ಇಷ್ಟೊಂದು ಅಬ್ಬರದ ಪ್ರಚಾರವೇಕೆ. ಅಭಿವೃದ್ಧಿ ಆಧಾರಿತವಾಗಿ ಮೋದಿ, ಬಿಜೆಪಿ ನಾಯಕರು ಚರ್ಚೆಗೆ ಬರಲು ಸಿದ್ಧರಿಲ್ಲ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷದ ಚಂಬು ಪ್ರತಿಭಟನೆಗೆ ದೇವೇಗೌಡರು ಮೋದಿ ಅಕ್ಷಯ ಪಾತ್ರೆ ಎಂದಿರುವ ಬಗ್ಗೆ ಹಿರಿಯರಾದ ಅವರ ಬಗ್ಗೆ ಮಾತನಾಡಲಾರೆ. ಅವರೀಗ ಬಿಜೆಪಿ ಜೊತೆ ಸೇರಿದ್ದು, ಅಂಥ ಹೇಳಿಕೆ ನೀಡುವುದು ಸಹಜ. ಎಂದರು.
ರಾಜ್ಯದ ಜನರು ಕಾಂಗ್ರೆಸ್ ಪರ ನಿಲ್ಲುತ್ತಾರೆ, ವಿಜಯಪುರ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 18-20 ಸ್ಥಾನ ಗೆಲ್ಲುವುದು ಖಚಿತ ಎಂದ ಸಚಿವ ಲಾಡ್, ವಿಜಯಪುರ ಕ್ಷೇತ್ರದ ಹಿರಿಯ ಸಂಸದ ರಮೇಶ ಜಿಗಜಿಣಗಿ ಸತತ ಆರು ಬಾರಿ ಗೆದ್ದಿದ್ದು, ಮಾಡಿದ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು.
ವಿಜಯಪುರ ಕ್ಷೇತ್ರದ ಕಾಂಗ್ರೆಸ್ ರಾಜು ಆಲಗೂರ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಶಾಸಕ ವಿಠ್ಠಲ ಕಟಕಧೋಂಡ, ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಅಬ್ದುಲ್ ಹಮೀದ್ ಮುಶ್ರೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.