Advertisement

ಯಡಿಯೂರಪ್ಪ ನುಡಿದಂತೆ ನಡೆದುಕೊಂಡಿದ್ದಾರೆ, ನಮ್ಮಲ್ಲಿ ಗುಂಪುಗಾರಿಕೆಯಿಲ್ಲ: ಎಸ್.ಟಿ.ಸೋಮಶೇಖರ್

12:40 PM Jun 01, 2020 | Team Udayavani |

ಶಿವಮೊಗ್ಗ: ನಮ್ಮ ಶಾಸಕರು  ಮೂರು ತಿಂಗಳ ನಂತರ ಎಲ್ಲೋ ಒಂದು ಕಡೆ ಸೇರಿದ್ದಾರೆ. ಅದರಲ್ಲಿ ಗುಂಪುಗಾರಿಕೆ ಏನಿಲ್ಲ. ಯಾವುದೇ ಆ ರೀತಿಯ ಸಭೆಗಳು ನಡೆದಿಲ್ಲ. ಇದೆಲ್ಲಾ ನೂರಕ್ಕೆ ನೂರು ಸುಳ್ಳು ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

Advertisement

ಸರ್ಕಾರದ ವಿರುದ್ಧ ಅಸಮಾಧಾನ ಸಭೆ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ನಮ್ಮನ್ನೆಲ್ಲಾ ಮಂತ್ರಿ ಮಾಡಿತ್ತೇವೆ ಎಂದಿದ್ದರು. ಅದರಂತೆ ಮಂತ್ರಿ ಮಾಡಿದ್ದಾರೆ ಎಂದರು.

ನಾನು, ಬಸವರಾಜ್ ಎಲ್ಲರೂ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡ್ತಿದ್ದೇವೆ. ಮಂತ್ರಿಯಾಗಲು ಇನ್ನೂ ಮೂರು ಜನ ಬಾಕಿ ಇದ್ದಾರೆ. ಅವರಿಗೆ ಕೊಡಿ ಎಂದು ಕೇಳಿದ್ದೆವು. ಅವಾಗಲೂ ಅವರ ಜೊತೆಗೆ ಇದ್ದೆವು. ಈಗಲೂ ಅವರ ಜೊತೆಗೆ ಇರುತ್ತೇವೆ ಎಂದು ಎಸ್.ಟಿ ಸೋಮಶೇಖರ್  ಹೇಳಿದ್ದಾರೆ.

ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಸೇರಿ ಹಲವರು ಸೇರಿ ನಡೆಸಿದ ರಹಸ್ಯ ಸಭೆ ಸದ್ಯ ರಾಜ್ಯ ರಾಜಕಾರಣದ ಸಂಚಲನ ಉಂಟು ಮಾಡಲು ಕಾರಣವಾಗಿದೆ. ಅದರಲ್ಲೂ ಬಸನ ಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next