Advertisement

ಸಿದ್ದರಾಮೋತ್ಸವದಂತಹ 10 ಕಾರ್ಯಕ್ರಮ ಮಾಡುವ ಶಕ್ತಿ ಬಿಜೆಪಿಗಿದೆ: ಸಚಿವ ಎಸ್.ಟಿ ಸೋಮಶೇಖರ್

11:31 AM Aug 10, 2022 | Team Udayavani |

ಮೈಸೂರು:  ಸಿದ್ದರಾಮೋತ್ಸವದಂತಹ 10 ಕಾರ್ಯಕ್ರಮ ಮಾಡುವ ಶಕ್ತಿ ಬಿಜೆಪಿಗೆ ಇದೆ. ಸಿದ್ದರಾಮೋತ್ಸವ ನೋಡಿ ನಾವು ಏಕೆ ಭಯ ಬೀಳಬೇಕು. ಸಿದ್ದರಾಮೋತ್ಸವದಲ್ಲಿ ಎಷ್ಟು ಜನ ಸೇರಿದ್ದರು ಎಂದು ಕಾಂಗ್ರೆಸ್ ನಾಯಕರು ಸತ್ಯ ಹೇಳಲಿ. ಎಷ್ಟು ಖುರ್ಚಿ ಹಾಕಿದ್ದರು ಎಂಬ ಲೆಕ್ಕಾ ನಮ್ಮ ಬಳಿ ಇದೆ. ಕಾಂಗ್ರೆಸ್ ನಾಯಕರಿಗೆ ತಾಕತ್ ಇದ್ದರೆ ಆ ಸಂಖ್ಯೆಯ ಬಗ್ಗೆ ಸತ್ಯ ಹೇಳಲಿ. ನಮ್ಮಲ್ಲಿ ಒಂದೇ ನಾಯಕತ್ವ. ಅದು ಮೋದಿ ನಾಯಕತ್ವ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕಾಂಗ್ರೆಸ್ ನವರು ನಮಗೆ ಒಬ್ಬರೇ ನಾಯಕರು ಎಂದು ಹೇಳಲಿ ನೋಡೊಣಾ. ಜಮೀರ್ ಅಹಮದ್ ಒಕ್ಕಲಿಗರಿಗಿಂತ ಮುಸ್ಲಿಂಮರೇ ಹೆಚ್ಚಿದ್ದಾರೆ ಎಂದು ಹೇಳುತ್ತಾರೆ. ಅದಕ್ಕೆ ಕಾಂಗ್ರೆಸ್ ನಲ್ಲಿ ಕೆಲವರು ಪ್ರೋತ್ಸಾಹ ಕೊಡುತ್ತಾರೆ. ಇನ್ನೂ ಎರೆಡು ವರ್ಷ ಬಿಟ್ಟರೆ ಜಮೀರ್ ಅಹಮದ್ ದೇಶದಲ್ಲಿ ಮುಸ್ಲಿಂಮರೇ ಹೆಚ್ಚಿದ್ದಾರೆ ಎಂದು ಹೇಳಬಹುದು. ಕಾಂಗ್ರೆಸ್ ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರು.

ಇದನ್ನೂ ಓದಿ: ಸಿಎಂ ಬದಲಾವಣೆ ಸುದ್ದಿಯ ಮೂಲ ಸ್ವತಃ ಬಿಜೆಪಿಯೇ : ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆಯಾಗುತ್ತಾರೆ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರ‌ಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಕಾಂಗ್ರೆಸ್ ಕೃಪಾ ಪೋಷಿತ ನಾಟಕ ಮಂಡಳಿ ಸೃಷ್ಟಿಸಿರುವ ದೊಡ್ಡ ಸುಳ್ಳು ಇದು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಗೆ ಡಿ.ಕೆ ಶಿವಕುಮಾರ್ ಟೋಪಿ ಹಾಕುತ್ತಿದ್ದಾರೆ. ಡಿ.ಕೆ.ಶಿಗೆ ಸಿದ್ದರಾಮಯ್ಯ ಟೋಪಿ ಹಾಕುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಸಿದ್ದರಾಮೋತ್ಸವದ ಕಿಡಿ ಈಗ ಬೆಂಕಿಯಾಗಿ ಹೊತ್ತಿ ಉರಿಯುತ್ತಿದೆ. ಈ ವಿಚಾರ ಡೈವರ್ಟ್ ಮಾಡಲು ಸಿಎಂ ಬದಲಾವಣೆ ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ನ ತಟ್ಟೆಯಲ್ಲಿ ಹೆಗ್ಗಣ ಬಿದಿದ್ದೆ. ಅವರ ನಮ್ಮ ತಟ್ಟೆಯಲ್ಲಿರುವ ನೋಣದ ಬಗ್ಗೆ ಚಿಂತೆ. ಅವರ ತಟ್ಟೆಯನ್ನು ಅವರು ನೋಡಿಕೊಳ್ಳಲಿ. ಬಿಜೆಪಿಯಲ್ಲಿ ಮೂರನೇ ಸಿಎಂ ಪ್ರಸ್ತಾಪವೇ ಇಲ್ಲಾ. ಬೊಮ್ಮಾಯಿ ಬದಲಾವಣೆ ಯಾವುದೇ ಕಾರಣಕ್ಕೂ ಆಗುವುದಿಲ್ಲ ಎಂದು ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next