Advertisement

ಶ್ರೀಕಂಠೇ ಶ್ವರನ ರಥೋತ್ಸವ ನಡೆಸಲೇ ಬೇಕು

05:39 PM Mar 20, 2021 | Team Udayavani |

ನಂಜನಗೂಡು: ಇತಿಹಾಸ ಪ್ರಸಿದ್ಧ ಶ್ರೀ ಕಂಠೇ ಶ್ವರಸ್ವಾಮಿಯ ಪಂಚ ಮಹಾ ರಥೋ ತ್ಸವ ರದ್ದತಿ ತೀರ್ಮಾನ ಹಿಂಪಡೆಯಬೇಕು. ನೀವೇ ಮುಂದೆ ನಿಂತು ರಥೋತ್ಸವ ನಡೆಸಿ ಇಲ್ಲವೇ ನಮಗೆ ಅವಕಾಶ ನೀಡಿ ಎಂದು ಶ್ರೀಕಂಠೇಶ್ವರನ ಭಕ್ತ ಮಂಡಳಿಯು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕಿತು.

Advertisement

ಸಚಿವ ಎಸ್‌.ಟಿ.ಸೋಮಶೇಖರ್‌ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದು ಹೊರಬರು ತ್ತಿದ್ದಂತೆ ಏಕಾಏಕಿ ಅವರಿಗೆ ಮುತ್ತಿಗೆ ಹಾಕಿದ ಭಕ್ತರು, ಈ ಬಾರಿ ಜಾತ್ರೆ ನಡೆಸಲೇ ಬೇಕು. ನಮ್ಮ ಆರಾಧ್ಯ ದೈವ ನಂಜುಂಡಪ್ಪನ ರಥೋತ್ಸವ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿ ಎಂದು ಪಟ್ಟು ಹಿಡಿದರು. ಯುವ ಬ್ರಿಗೇಡ್‌ ನಾಯಕ, ಶ್ರೀಕಂ ಠೇಶ್ವರ ಭಕ್ತಮಂಡಳಿ ಸಂಚಾ ಲಕ ಎಸ್‌.ಚಂದ್ರಶೇಖರ್‌ ಮಾತನಾಡಿ, ಕೊಟ್ಟೂರು, ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಬೆಟ್ಟ, ಹೊರನಾಡು, ಮುಡುಕುತೊರೆ ಸೇರಿದಂತೆ ವಿವಿಧ ಕಡೆ ಸ್ಥಳೀಯರೇ ಸಹಸ್ರಾರು ಸಂಖ್ಯೆಯಲ್ಲಿ ರಥೋತ್ಸವವನ್ನು ಅದ್ಧೂರಿಯಾಗಿ ನಡೆಸಿದ್ದಾರೆ. ಸರ್ಕಾರ ಬೇರೆ ಕಡೆ ಅನುಮತಿ ನೀಡಿ, ಈ ಭವರೋಗವೈದ್ಯನ ರಥೋತ್ಸವಕ್ಕೆ ಮಾತ್ರ ಅಡ್ಡಿ ಮಾಡುತ್ತಿರುವುದು ಸರಿಯಲ್ಲ, ಜಾತ್ರೆ ಜರುಗಲೇ ಬೇಕು ಎಂದು ಆಗ್ರಹಿಸಿದರು.

ಭಾರೀ ತೂಕದ ಪಂಚ ರಥಗಳನ್ನು ಎಳೆಯಲು 500ಕ್ಕೂ ಹೆಚ್ಚು ಸ್ವಯಂ ಸೇವಕರು ಸಿದ್ಧರಿದ್ದಾರೆ. ಕೊರೊನಾ ತಪಾ ಸಣೆ ಮಾಡಿಸಿ ಕೊಂಡೇ ರಥ ಎಳೆಯಲಾ ಗುವುದು. ದೇವಾಲಯ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ ಸಹಯೋಗದಲ್ಲಿ ಕೋವಿಡ್‌ ಮಾರ್ಗಸೂಚಿ ಪ್ರಕಾರವೇ ರಥೋತ್ಸವ ನಡೆಸಬೇಕು ಎಂದರು. ಕೃಷ್ಣ ಜೋಯ್ಸ ಮಾತನಾಡಿ, ಸರ್ಕಾರ ಸುಲಲಿತವಾಗಿ ನಡೆಯ ಬೇಕಾದರೆ ದೈವಿ ಕೃಪೆಯೂ ಅಗತ್ಯ. ಹಕೀಂ ನಂಜುಂಡನ ರಥೋತ್ಸವ ನಡೆಸಿ ಸರ್ಕಾರದ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕೆ ಆತನೇ ದಾರಿ ತೋರುತ್ತಾನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್‌.ಟಿ.ಸೋಮಶೇಖರ್‌, ಕೋವಿಡ್‌ ನಿಯಮಾವಳಿಯಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರು ವುದರಿಂದ ಈ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್‌ ಅವರ ಬಳಿ ಒಮ್ಮೆ ಚರ್ಚಿಸಿ ಸಲಹೆ ಪಡೆದು ಮುಂದಿನ ನಿರ್ಧಾರ ಪ್ರಕಟಿಸಲಾಗುವುದು. ಜಿಲ್ಲಾಧಿಕಾರಿಗಳ ಆದೇಶವೇ ಅಂತಿಮವಲ್ಲ ಎಂದು ಹಾರಿಕೆ ಉತ್ತರ ನೀಡಿ ಸ್ಥಳದಿಂದ ತೆರಳಿದರು.

ಈ ಸಂದರ್ಭದಲ್ಲಿ ಭಕ್ತರಾದ ಪರಮೇಶಿ, ಪ್ರವೀಣ, ನೀಲಕಂಠ, ಶಿವಕುಮಾರ್‌, ಸತೀಶ, ಸುನಿಲ್‌, ಅನಿಲ್‌ಕುಮಾರ್‌ ನಾಯರ್‌, ಕೀರ್ತಿರಾಜ್‌, ಬಸವರಾಜು, ಉಮೇಶ್‌ ಮೋದಿ, ಅರ್ಜುನ್‌, ಶರತ್‌, ಚರಣ್‌ರಾಜ್‌, ಭಾಗ್ಯರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next