Advertisement

ಮಾಧ್ಯಮದವರೊಂದಿಗೆ ಸಚಿವ ರೇವಣ್ಣ ಸಿಡುಕು

11:31 PM Jul 14, 2019 | Team Udayavani |

ಧರ್ಮಸ್ಥಳ: ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಭಾನುವಾರ ಕರಾವಳಿಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಅರ್ಪಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ರೇವಣ್ಣ, ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Advertisement

ಅಲ್ಲಿ ಅವರು ಪ್ರಸಾದ ಸ್ವೀಕರಿಸುತ್ತಿದ್ದುದನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮ ಸಿಬ್ಬಂದಿಯೊಂದಿಗೆ ಸಿಡುಕು ಪ್ರದರ್ಶಿಸಿದ ರೇವಣ್ಣ, ಚಿತ್ರೀಕರಣ ಮಾಡದಂತೆ ತಡೆದರಲ್ಲದೆ ಚಿತ್ರೀಕರಿಸಿದ್ದನ್ನು ಅಳಿಸುವಂತೆ ತಮ್ಮ ಜತೆಗಿದ್ದ ಪೊಲೀಸರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next