Advertisement

ಸ್ವತಃ ಮಾಸ್ಕ್ ಧರಿಸದೆ ಜನರಿಗೆ ಮಾಸ್ಕ್ ವಿತರಿಸಿದ ಸಚಿವ ಶ್ರೀರಾಮುಲು

05:50 PM Apr 05, 2020 | keerthan |

ರಾಯಚೂರು: ಇತರರಿಗೆ ಮಾದರಿಯಾಗಬೇಕಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಾವೇ ಮಾಸ್ಕ್ ಧರಿಸದೆ  ಜನರಿಗೆ ಮಾಸ್ಕ್ ವಿತರಿಸುವ ಮೂಲಕ ನಿಯಮ ಉಲ್ಲಂಘಿಸಿದರು.

Advertisement

ರಾಯಚೂರಿಗೆ ಭೇಟಿ ನೀಡಲು ಆಗಮಿಸುವ ವೇಳೆ ಸಿಂಧನೂರಿನ ಬಿಜೆಪಿ ಕಚೇರಿಯಲ್ಲಿ  ಜನರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ವಿತರಿಸಿದರು. ಈ ವೇಳೆ ಖದ್ದು ತಾವೆ ಮಾಸ್ಕ್ ಧರಿಸಿರಲಿಲ್ಲ.

ಸಚಿವರು ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳದೇ ವಿತರಣೆ ಮಾಡಿದರು. ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯವಲ್ಲದಿದ್ದರೂ ಜನರಿಗೆ ಮಾದರಿಯಾಗಬೇಕಾದ ಸಚಿವರೇ ಸಾರ್ವಜನಿಕ ಸ್ಥಳದಲ್ಲಿ ನಿಯಮ ಉಲ್ಲಂಘಿಸಿರುವುದು ಚರ್ಚೆಗೆ ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next