Advertisement
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಳ್ಳಾರಿಯ ಜನಾರ್ದನ ರೆಡ್ಡಿ ಯಾವುದೇ ಹೊಸ ಪಕ್ಷ ಕಟ್ಟುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ತಾವು ಸಹ ಜನಾರ್ಧನ್ ರೆಡ್ಡಿಯರೊಂದಿಗೆ ಚರ್ಚೆ ನಡೆಸಿದ್ದು, ಅವರು ಯಾವುದೇ ಹೊಸ ಪಕ್ಷ ಕಟ್ಟುವುದಿಲ್ಲ ಎಂದು ತಿಳಿಸಿದರು.
Related Articles
Advertisement
ಕೆಪಿಸಿಸಿ ಅಧ್ಯಕ್ಷ ತಮ್ಮ ಸ್ಥಾನವನ್ನು ನಿರ್ವಹಿಸಲು ಒದ್ದಾಡುತ್ತಾರೆ ಎಂದು ಪರಮೇಶ್ವರ್ ನೀಡಿದ ಹೇಳಿಕೆಗೆ ಉತ್ತರಿಸಿದ ಅವರು ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಮ್ಮ ಸ್ಥಾನವನ್ನು ನಿಭಾಯಿಸಲು ಒದ್ದಾಡುತ್ತಿಲ್ಲ ಬದಲಾಗಿ ಪರದಾಡುತ್ತಿದ್ದಾರೆ ಇನ್ನು ದಲಿತ ಮುಖ್ಯಮಂತ್ರಿ ವಿಷಯಕ್ಕೆ ಪರಮೇಶ್ವರ್ ಹಾಗೂ ಅವರ ತಂಡ ಒದ್ದಾಡುತ್ತಿದ್ದರೆ ಮತ್ತೊಂದೆಡೆ ಕಾಲೆಳೆಯಲು ಸಿದ್ಧರಾಮಯ್ಯನವರು ಸಹ ಕುರುಬ ಎನ್ನುವ ಕಾರ್ಡನ್ನು ಇಟ್ಟುಕೊಂಡು ಅವರು ಸಹ ಒಂದು ಪಾತ್ರವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದರಲ್ಲಿ ಬಹಳ ತೊಂದರೆಗೆ ಸಿಲುಕಿಕೊಂಡಿರುವುದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರೆ ಹಾಗಾಗಿ ಏನೋ ಮಾಡಲು ಹೋಗಿ ಏನೋ ಮಾಡಿದೆ ಎನ್ನುವ ಸ್ಥಿತಿಗೆ ಡಿ.ಕೆ ಶಿವಕುಮಾರ್ ಬಂದು ನಿಂತಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷವನ್ನ ಕಾಂಗ್ರೆಸ್ ಪಕ್ಷದವರೇ ಸೋಲಿಸಲಿದ್ದಾರೆ. ಹಾಗೆ ಸಿದ್ದರಾಮಯ್ಯನವರು ರಾಜ್ಯದಲ್ಲಿ ಚುನಾವಣೆಗೆ ನಿಲ್ಲಲು ಜಾಗವೇ ಇಲ್ಲದಂತಾಗಿದೆ. ಕೋಲಾರ, ಮೈಸೂರು ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಜಾಗಕ್ಕಾಗಿ ಅಲೆಯುತ್ತಿದ್ದಾರೆ. ಇನ್ನು ಸಿದ್ದರಾಮಯ್ಯನವರಿಗೆ ಬಿಜೆಪಿಯ ಭಯವಿಲ್ಲ. ಕಾಂಗ್ರೆಸ್ ನವರ ಭಯವೇ ಹೆಚ್ಚಾಗಿದೆ. ಯಾಕೆಂದರೆ ಪರಮೇಶ್ವರ್ ರವರನ್ನ ಸೋಲಿಸಿದ್ದು ತಾನೇ ಎಂದು ಗೊತ್ತಿದೆ ಹಾಗಾಗಿ ಪರಮೇಶ್ವರ್ ಟೀಮ್ ಸಹ ತನ್ನನ್ನ ಸೋಲಿಸಲಿದ್ದಾರೆ ಎನ್ನುವ ಭಯ ಸಿದ್ದರಾಮಯ್ಯನವರನ್ನು ಕಾಡುತ್ತಿದೆ ಎಂದರು.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಸದ್ಯ ಯಡಿಯೂರಪ್ಪನವರು ಗುಜರಾತ್ ಗೆ ತೆರಳಿದ್ದು ಗುಜರಾತ್ ಮುಖ್ಯಮಂತ್ರಿಯ ಆಯ್ಕೆಯ ಜವಾಬ್ದಾರಿಯನ್ನ ಯಡಿಯೂರಪ್ಪನವರಿಗೆ ನೀಡಲಾಗಿದೆ ಹಾಗಾಗಿ ಸದ್ಯ ಅವರು ಗುಜರಾತ್ ನಲ್ಲಿ ಇದ್ದು ಅವರು ಯಾವಾಗ ಸಮಯ ಸಿಗುತ್ತೋ ಆಗ ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಯಡಿಯೂರಪ್ಪನವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕ ಅವರನ್ನು ಯಾರು ಸಹ ಕಡೆಗಣಿಸಿಲ್ಲ ಎಂದರು.