Advertisement

ಫೆ.20ರಂದು ರಾಜ್ಯದ 227 ಕಡೆ ‘ಹಳ್ಳಿ ಕಡೆ ನಡೆಯಿರಿ’ ಕಾರ್ಯಕ್ರಮ: ಸಚಿವ ಅಶೋಕ್

02:44 PM Feb 16, 2021 | Team Udayavani |

ಬೆಂಗಳೂರು: ಇದೇ ತಿಂಗಳ 20ರಂದು ರಾಜ್ಯದ ಒಟ್ಟು 227 ಕಡೆ ‘ಹಳ್ಳಿ ಕಡೆ ನಡೆಯಿರಿ’ ಕಾರ್ಯಕ್ರಮ ನಡೆಯಲಿದೆ. ಹಳ್ಳಿಗಳಿಗೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಭೇಟಿ ನೀಡಿ ಜನರ ಕಷ್ಟಸುಖ ಆಲಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಲಾಗಿದೆ. ಜನರ ಮನೆ ಬಾಗಿಲಿಗೆ ಇಲಾಖೆ ಕರೆದೊಯ್ಯುವ ನಿಟ್ಟಿನಲ್ಲಿ ಎಲ್ಲರೂ ಪ್ರತಿ ಮೂರನೇ ಶನಿವಾರ ಹಳ್ಳಿಯಲ್ಲಿ 24 ಗಂಟೆ ಇರಬೇಕು. ಪಿಂಚಣಿ, ಖಾತೆ ಸಹಿತ ಸಮಸ್ಯೆ ಸರಿಪಡಿಸುವುದು ಇದರ ಉದ್ದೇಶ ಎಂದರು.

ಇದನ್ನೂ ಓದಿ:ಬೆಳಗಾವಿ ಜೆಡಿಎಸ್ ನ ಅಶೋಕ್ ಪೂಜಾರಿಗೆ ‘ಕೈ; ಆಹ್ವಾನ ನೀಡಿದ ಸತೀಶ ಜಾರಕಿಹೊಳಿ

ದೊಡ್ಡಬಳ್ಳಾಪುರ ತಾಲ್ಲೂಕು ಹೊಸಹಳ್ಳಿ ಗ್ರಾಮದಲ್ಲಿ ನಾನು ಗ್ರಾಮ ವಾಸ್ತವ್ಯ ಮಾಡುತ್ತೇನೆ. ಆ ಊರಿನ ಹಾಸ್ಟೆಲ್ ​ನಲ್ಲಿ ರಾತ್ರಿ ಕಳೆಯುತ್ತೇನೆ. ದಿನವಿಡೀ ಗ್ರಾಮದಲ್ಲಿಯೇ ಇದ್ದು ಜನರ ಸಮಸ್ಯೆ ಆಲಿಸುತ್ತೇನೆ ಎಂದು ಅಶೋಕ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next