Advertisement

ಕಠಿನ ಕ್ರಮಕ್ಕೆ ಸಚಿವ ಪ್ರಮೋದ್‌ ಆಗ್ರಹ

09:10 AM Jan 06, 2018 | |

ಉಡುಪಿ: ಕಾಟಿಪಳ್ಳದ ಹಿಂದೂ ಸಂಘಟನೆ ಕಾರ್ಯಕರ್ತ ದೀಪಕ್‌ ರಾವ್‌ ಅವರ ಹತ್ಯೆ ಆರೋಪಿಗಳು ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಅವರಿಗೆ ಕಠಿನ ಶಿಕ್ಷೆ ಯಾಗಬೇಕು. ಈ ಹತ್ಯೆ ಅತ್ಯಂತ ದುಃಖದಾಯಕ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಜೀವಕ್ಕೂ ಬೆಲೆ ಇದೆ. ಇಂತಹ ಘಟನೆಗಳು ಮುಂದೆ ನಡೆಯದಂತೆ ಸಮಾಜ, ಪೊಲೀಸರು ಎಚ್ಚೆತ್ತು ಕೊಳ್ಳಬೇಕು ಎಂದರು. 

Advertisement

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಘಟನೆಗಳು ನಡೆದಾಗ ರಾಜಕೀಯ ಲಾಭ ಪಡೆಯಲು ಮುಂದಾಗು ವವರಿಗೆ ಅದು ತಿರುಗುಬಾಣವಾಗಲಿದೆ. ತಾತ್ಕಾಲಿಕವಾಗಿ ಜನರನ್ನು ದಾರಿ ತಪ್ಪಿಸಬಹುದು. ಆದರೆ ರಾಜಕಾರಣಿಗಳಿಗಿಂತ ಜನರು ಬುದ್ಧಿವಂತರಾಗಿದ್ದಾರೆ. ಹಾಗಾಗಿ ಸತ್ಯವನ್ನು ತುಂಬಾ ಕಾಲ ಅಡಗಿಸಿಡಲು ಸಾಧ್ಯವಿಲ್ಲ. ಚುನಾವಣೆಗೆ ಇನ್ನೂ ದಿನಗಳಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next