ಹುಬ್ಬಳ್ಳಿ: ಆರೋಗ್ಯಯುತ ಹಾಗೂ ಸಮೃದ್ಧ ಭಾರತ ನಿರ್ಮಾಣದ ಐತಿಹಾಸಿಕ ಆಯವ್ಯಯವಾಗಿದೆ ಎಂದು ಕೇಂದ್ರ ಸಂಸದೀಯ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಯವ್ಯಯದಲ್ಲಿ ಆರು ಮುಖ್ಯ ಆಧಾರಸ್ತಂಭಗಳನ್ನು ಪರಿಚಯಿಸಿದ ಅರ್ಥಸಚಿವರು ಮುಂಬರುವ ವರ್ಷಗಳಲ್ಲಿ ಆರೋಗ್ಯ ಹಾಗೂ ಸಮೃದ್ಧ ಭಾರತವಾಗಿ ಆತ್ಮ ನಿರ್ಭರ ದೇಶವಾಗಿ ಹೊರಹೊಮ್ಮುವುದೆಂಬುದನ್ನು ವಿಸ್ತ್ರತವಾಗಿ ವಿವರಿಸಿದ್ದಾರೆ. ಕೃಷಿ ಹಾಗೂ ರೈತರಿಗೆ ಸಮೃದ್ಧಿಯ ಹೆಬ್ಟಾಗಿಲು ತೆರೆದಿಡಲಾಗಿದೆ. ಮೂಲ ಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ದಾಖಲೆಯ ಅನುದಾನ ನೀಡುವ ಮೂಲಕ ಹೊಸ ಶಕೆ ಆರಂಭಕ್ಕೆ ನಾಂದಿ ಹಾಡಿದ್ದಾರೆ. 11,500 ಹೆದ್ದಾರಿ ನಿರ್ಮಾಣದ ಘೋಷಣೆ ಮಾಡಲಾಗಿದೆ.
ರೈಲ್ವೆ ಅಭಿವೃದ್ಧಿಗಾಗಿ 1.10 ಲಕ್ಷ ಕೋಟಿ ರೂ. ಬಂಡವಾಳ ಅನುದಾನ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ 15 ತ Ìರಿತ ಆರೋಗ್ಯ ಕೇಂದ್ರ, ಮಿಷನ್ ಪೋಷಣೆ, ವೈರಾಲಜಿ ಸಂಸ್ಥೆಗಳ ಆರಂಭ, ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರದ ಸ್ಥಾಪನೆ, ಕೋವಿಡ್ ಲಸಿಕೆಗಾಗಿ 35,000 ಕೋಟಿ ರೂ. ಅನುದಾನ ತೆಗೆದಿರಿಸಲಾಗಿದೆ. ಈಗಾಗಲೇ 13,000 ಕಿಮೀಗಳ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿರುವಾಗ 11,500 ಕಿಮೀ ಅಂತರದ ಹೊಸ ಹೆದ್ದಾರಿ ನಿರ್ಮಾಣಕ್ಕೆ 1.18 ಲಕ್ಷ ಕೋಟಿ ರೂ. ಅನುದಾನ ಇತ್ಯಾದಿ ಕ್ರಮಗಳು ಸಮೃದ್ಧ ಭಾರತ ನಿರ್ಮಾಣಕ್ಕೆ ಮುಖ್ಯವಾಗಿವೆ.
ಕೃಷಿ ಸಾಲದ ಮೊತ್ತವನ್ನು 16.50 ಲಕ್ಷ ಕೋಟಿ ರೂ. ವೃದ್ಧಿಸಿದ್ದು, ಒಟ್ಟಾರೆ ದೇಶದ ಕೃಷಿ ಹಾಗೂ ತನ್ಮೂಲಕ ರೈತರ ಜೀವನವನ್ನು ಪ್ರಗತಿಗೊಳಿಸಿದೆ. ಆಹಾರ ಧಾನ್ಯ ಖರೀದಿಗೆ 1,72,081 ಕೋಟಿ ರೂ. ಹೆಚ್ಚಸಲಾಗಿದೆ. ಭತ್ತ ಮತ್ತು ಗೋದಿ ಖರೀದಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಕೋವಿಡ್ ಸಂಬಂಧ ಲಸಿಕೆ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.
ಇದನ್ನೂ ಓದಿ :
ಬೈಕ್ ಗೆ ಬೊಲೆರೋ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
ರೈತರ ಆದಾಯ ದ್ವಿಗುಣಗೊಳಿಸಲು ದೂರದೃಷ್ಟಿಯ ಯೋಜನೆ, ಯುವಕರಿಗೆ ಉದ್ಯೋಗಾವಕಾಶ ಹೆಚ್ಚಳಕ್ಕೆ ವಿಶೇಷ ಯೋಜನೆ, ಆರೋಗ್ಯ ಕ್ಷೆ àತ್ರ ಬಲಪಡಿಸಲು 64,180 ಕೋಟಿ ರೂ. ಮೀಸಲಿಡಲಾಗಿದೆ. ಆರೋಗ್ಯ ಕೃಷಿ ಹಾಗೂ ಮೂಲಸೌಲಭ್ಯಗಳಿಂದ ಭರಿತವಾದ ಹೊಸ ಭಾರತ ನಿರ್ಮಾಣ ಹಾಗೂ ತನ್ಮೂಲಕ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ಆತ್ಮನಿರ್ಭರ ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಹೊಸ ಶಕೆಯ ಆರಂಭಕ್ಕೆ ನಾಂದಿ ಹಾಡಲಿದೆ ಎಂದು ಬಣ್ಣಿಸಿದ್ದಾರೆ.