ಬೆಂಗಳೂರು : ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ವಿಧೇಯಕ 2020 ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಆಗಿರುವುದು ಸಂತಸ ತಂದಿದೆ ಹಾಗೂ ಗೋಹತ್ಯೆ ನಿಷೇಧಕ್ಕೆ ಸಹಾಯ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಕರುನಾಡಿನಲ್ಲಿ ಗೋಹತ್ಯೆ ನಿಷೇಧದ ಬಹುದಿನದ ಕನಸು ನನಸಾಗಿದೆ. ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ಉಭಯ ಸದನದ ಎಲ್ಲ ಶಾಸಕರಿಗೆ, ಪಕ್ಷದ ರಾಜ್ಯಾಧ್ಯಕ್ಷರಿಗೆ ಹಾಗೂ ರಾಜ್ಯದ ಸಮಸ್ತ ಗೋಪಾಲಕರು ಹಾಗೂ ಗೋ ಸಂರಕ್ಷಕರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:10 ಕೋಟಿ ವೆಚ್ಚದಲ್ಲಿ ಎರಡು ಗುರುಕುಲ ನಿರ್ಮಾಣ
ಈ ಮೊದಲು ಸುಮಾರು 75ಕ್ಕೂ ಹೆಚ್ಚು ದೇಸಿ ತಳಿಗಳಿದ್ದವು. ಆದರೆ ಸಮರ್ಪಕವಾಗಿ ಗೋವುಗಳ ಸಂರಕ್ಷಣೆ ಆಗದೇ ಇರುವುದರಿಂದ ಕೇವಲ 35 ದೇಸಿ ತಳಿಗಳು ಉಳಿದುಕೊಂಡಿವೆ ಎಂದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗುವುದರಿಂದ ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಬಲ ಬಂದಂತಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.