Advertisement

ಕಂದುರೋಗ ಲಸಿಕಾ ಕಾರ್ಯಕ್ರಮಕ್ಕೆ ಚವ್ಹಾಣ ಚಾಲನೆ

07:24 PM Sep 07, 2021 | Team Udayavani |

ಔರಾದ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಹತ್ವದ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯ ಕ್ರಮದಡಿ ರಾಜ್ಯ ಮಟ್ಟದ ಕಂದುರೋಗ ಲಸಿಕಾ ಕಾರ್ಯಕ್ರಮಕ್ಕೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಹಸುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

Advertisement

ಸಚಿವರ ಸ್ವಗ್ರಾಮ ಘಮಸುಬಾಯಿ ತಾಂಡಾದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪಶು ಇಲಾಖೆ ವತಿಯಿಂದಸಾಮೂಹಿಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ ಹಸು ಮತ್ತು ಎಮ್ಮೆಗಳ 4-8 ತಿಂಗಳ ಹೆಣ್ಣು ಕರುಗಳಿಗೆ ಮಾತ್ರ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದು ಜಾನುವಾರುಗಳನ್ನು ಕಂದು ರೋಗದಿಂದ
ರಕ್ಷಿಸಿಕೊಳ್ಳುವಂತೆ ವಿನಂತಿಸಿದರು.

ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಎತ್ತು, ಆಕಳಿನಂತಹ ಜಾನುವಾರುಗಳು ಸಹಕಾರಿಯಾಗಿವೆ. ಹೀಗಾಗಿ ಗೋವುಗಳನ್ನು ದೇವರ ಸಮಾನ ವೆಂದು ಕಾಣುತ್ತೇವೆ . ಹೀಗಾಗಿ ಜಾನುವಾರುಗಳಿಗೆ ದೇಶದಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಗೋಮಾತೆ ರಕ್ಷಣೆಯಾಗಬೇಕು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಇಲಾಖೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎನ್ನುವ ವಿಶ್ವಾಸ ತಾವು ಹೊಂದಿರುವುದಾಗಿ ತಿಳಿಸಿದರು.

ಇದನ್ನೂ ಓದಿ:ಭಾರತದ ಅಂತಾರಾಷ್ಟ್ರೀಯ ಗಡಿ ಪ್ರದೇಶಕ್ಕೆ ಚೀನಾದಿಂದ ಹೊಸ ಕಮಾಂಡರ್‌

ತಾವು ಪಶುಪಾಲನಾ ಇಲಾಖೆ ಸಚಿವರಾದ ಬಳಿಕ ಪಶುಪಾಲನಾ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಸೇರಿದಂತೆ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಂಬಡ್ತಿ ನೀಡಲಾಗಿದೆ. ರಾಜ್ಯದ
ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಗೋಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಿಶೀಲನೆ ನಡೆಸಲಾಗಿದ್ದು, ಈಗ ಮತ್ತೆ ರಾಜ್ಯಾದ್ಯಂತ ಎರಡನೇ ಬಾರಿಗೆ ವಿವಿಧ ಜಿಲ್ಲೆಗಳ ‌ ಭೇಟಿ ಕಾರ್ಯಕ್ರಮ ಹಾಕಿಕೊಳ್ಳುವುದಾಗಿ ಸಚಿವರು ಹೇಳಿದರು.

Advertisement

ಸಮಾರಂಭದಲ್ಲಿ ಪಶುಪಾಲನಾ ಇಲಾಖೆ ನಿರ್ದೇಶಕ ಡಾ| ಮಂಜುನಾಥ ಪಾಳೆಗಾರ, ಅಪರ ನಿರ್ದೇಶಕ ಡಾ| ತಿಪ್ಪೇಸ್ವಾಮಿ, ಜಂಟಿ ನಿರ್ದೇಶಕ
ಡಾ| ಶಿವಣ್ಣ, ಉಪ ನಿರ್ದೇಶಕ ಡಾ| ರವಿ ಬೂರೆ ಇತರರಿದ್ದರು. ಡಾ| ನರಸಪ್ಪ ನಿರೂಪಿಸಿದರು.

ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಪಶು ವೈದ್ಯರ ಪಾತ್ರ ಗಮನಾರ್ಹ. ಅಧಿಕಾರಿಗಳು, ಪಶು ವೈದ್ಯರು ನೊಟೀಸ್‌ ಪಡೆದುಕೆಲಸ ಮಾಡುವ ಮಟ್ಟಕ್ಕೆ ಇಳಿಯದೇ ತಮ್ಮ ಜವಾಬ್ದಾರಿ ಅರಿತು ಸರಿಯಾದ ಸಮಯಕ್ಕೆಕಚೇರಿಗೆ ಆಗಮಿಸಿ ಕಾರ್ಯ ಪ್ರವೃತ್ತರಾಗಬೇಕು.
-ಪ್ರಭು ಚವ್ಹಾಣ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next