Advertisement

ಗೋವಿನ ಖರ್ಚು 30 ರೂ.ಗೆ ಹೆಚ್ಚಿಸಲು ಚಿಂತನೆ

01:39 AM Dec 13, 2021 | Team Udayavani |

ಉಡುಪಿ: ಗೋಶಾಲೆಗಳಲ್ಲಿರುವ ಒಂದು ಗೋವಿನ ಖರ್ಚಿಗೆ ಸರಕಾರ ದಿನಕ್ಕೆ 17 ರೂ.ನಂತೆ ನೀಡುತ್ತಿದೆ. ಇದು ಗೋವುಗಳ ನಿರ್ವಹಣೆಗೆ ಸಾಲುತ್ತಿಲ್ಲ. ಇದನ್ನು 30 ರೂ.ಗೆ ಹೆಚ್ಚಿಸುವ ಚಿಂತನೆ ಸರಕಾರದ ಮುಂದಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್‌ ತಿಳಿಸಿದ್ದಾರೆ.

Advertisement

ಶ್ರೀಕೃಷ್ಣ ಮಠ, ಪರ್ಯಾಯ ಅದಮಾರು ಮಠದ ವತಿಯಿಂದ ವಿಶ್ವಾರ್ಪಣಮ್‌ ಕಾರ್ಯಕ್ರಮದ ಅಂಗವಾಗಿ ರಾಜಾಂಗಣದದಲ್ಲಿ ರವಿ ವಾರ ಜರಗಿದ ರಾಜ್ಯಮಟ್ಟದ ದೇಶೀ ಗೋಪಾಲಕ, ಕೃಷಿಕಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಅಧಿವೇಶನ ಮುಗಿದ ಬಳಿಕ ರಾಜ್ಯದಲ್ಲಿ ಗೋಶಾಲೆಗಳು ಉದ್ಘಾಟನೆಗೊಳ್ಳಲಿವೆ. ಪ್ರತಿ ಜಿಲ್ಲೆಯಲ್ಲೂ ಗೋಮಾಳ, ಸರಕಾರಿ ಗೋಶಾಲೆ ಆರಂಭಿಸುತ್ತೇವೆ. 50ರಿಂದ 100 ಎಕರೆ ಪ್ರದೇಶದಲ್ಲಿ ಗೋ ಶಾಲೆ ನಿರ್ಮಾಣ ಮಾಡಲಾಗುವುದು ಎಂದರು.

ಶಿಕ್ಷಣದಲ್ಲಿ ಗೋಪಾಠ
ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಯುವ ಪೀಳಿಗೆಗೆ ಗೋವು ದೊಡ್ಡ ಸಂಪತ್ತು ಎನ್ನುವುದನ್ನು ತಿಳಿಸಬೇಕು. ಶಿಕ್ಷಣದಲ್ಲಿ ಗೋವುಗಳ ಬಗ್ಗೆ ಪಾಠ ಅಳವಡಿಸಬೇಕು ಎಂದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶಾಸಕ ಕೆ. ರಘುಪತಿ ಭಟ್, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ, ಗೋ ಸೇವಾ ಗತಿವಿಧಿ ಪ್ರಾಂತ ಸಂಯೋಜಕ ಪ್ರವೀಣ ಸರಳಾಯ, ಪಶುಸಂಗೋಪಲನ ಇಲಾಖೆ ಹಿರಿಯ ಅಧಿಕಾರಿ ಡಾ| ಜಯಪ್ರಕಾಶ್‌, ಉಪ ನಿರ್ದೇಶಕ ಡಾ| ಶಂಕರ ಶೆಟ್ಟಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ಗೋವಿಂದ ರಾಜ್‌ ಸ್ವಾಗತಿಸಿದರು. ಬ್ರಹ್ಮಾವರ ಜಾನುವಾರು ಅಧಿಕಾರಿ ಶ್ರೀನಿವಾಸ ರಾವ್‌ ವಂದಿಸಿದರು. ಡಾ| ಟಿ.ಎಸ್‌. ರಮೇಶ್‌ ನಿರೂಪಿಸಿದರು.

ತಾಲೂಕಿಗೊಂದು ಪಶು ಸಂಜೀವಿನಿ
ಗೋಮಾತೆ, ಪಶುಗಳ ಸಂರಕ್ಷಣೆಗೆ ಬಿಜೆಪಿ ಸರಕಾರ ಬದ್ಧವಾಗಿದ್ದು, ಅನಾರೋಗ್ಯ, ಅವಘಡ ಸೇರಿದಂತೆ ಜಾನುವಾರುಗಳ ಶ್ರುಶೂಷೆಗೆ ರಾಜ್ಯದ ಪ್ರತಿ ತಾಲೂಕಿಗೊಂದು ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಅನ್ನು ಸರಕಾರ ನೀಡಲಿದೆ ಎಂದು ಸಚಿವರು ತಿಳಿಸಿದರು. ರಾಜ್ಯಾದ್ಯಂತ ಒಟ್ಟು 275 ಆ್ಯಂಬುಲೆನ್ಸ್‌ ನೀಡಲಾಗುವುದು 1962 ಸಹಾಯವಾಣಿಗೆ ಕರೆ ಮಾಡಿದಲ್ಲಿ ಆ್ಯಂಬುಲೆನ್ಸ್‌ ಸ್ಥಳದಲ್ಲಿರುತ್ತದೆ. ಪ್ರಥಮ ಭಾರಿಗೆ ಪ್ರಾಣಿ ಸಹಾಯವಾಣಿ ಕೇಂದ್ರ ತೆರೆದಿದ್ದು, ಕಳೆದ 3 ತಿಂಗಳಲ್ಲಿ 30 ಸಾವಿರ ಕರೆಗಳು ಬಂದಿವೆ. ಶೇ. 75ರಷ್ಟು ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸಿದ್ದೇವೆ ಎಂದು ಸಚಿವರು ತಿಳಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next