Advertisement

ಪಾರದರ್ಶಕವಾಗಿ ಮನೆ ಹಂಚಲು ಸಚಿವ ಪಾಟೀಲ ಸೂಚನೆ

03:27 PM Jul 04, 2017 | |

ವಿಜಯಪುರ: ಮನೆಗಳ ವಿತರಣೆಗಾಗಿ ಗ್ರಾಮ ಸಭೆ ನಡೆಸಿ ಪಾರದರ್ಶಕವಾಗಿ ಅರ್ಹ ಫಲಾನುಭವಿ ಆಯ್ಕೆ ಮಾಡುವಂತೆ ಸೂಚಿಸಿ ಅನರ್ಹರಿಗೆ ಮನೆ ನೀಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಸೋಮವಾರ ವಿಜಯಪುರ ತಾಲೂಕಿನ ಕಾಖಂಡಕಿ ಜಿಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಫಲಾನುಭವಿಗಳ ಜೊತೆ ಸಂವಾದ ನಡೆಸಿದ ಅವರು, ಆಧಾರ್‌ ಕಾರ್ಡ್‌ ಪಡೆಯಲು ಶಿರಬೂರ ಗ್ರಾಮದಲ್ಲಿ ಬಾಗಲಕೋಟೆ ಜಿಲ್ಲೆಯ ಪಿನ್‌ ಕೋಡ್‌ ನಮೂದಾಗಿದ್ದು, ಒಂದು ತಿಂಗಳಲ್ಲಿ ಲೋಪ ಸರಿಪಡಿಸುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಶಿರಬೂರ ಗ್ರಾಮದಲ್ಲಿ ನಿರಂತರ ಜ್ಯೋತಿ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದಾಗ ಟಿಸಿ ಸುಟ್ಟು ಸುಮಾರು 4 ದಿನ ಕಳೆದರೂ ದುರಸ್ತಿ ಮಾಡಿಲ್ಲ ಎಂದು ದೂರಿದರು. ಆಗಸ್ಟ್‌ 15ರೊಳಗೆ ಜಿಲ್ಲೆಯ ಎಲ್ಲೆಡೆ ವಿದ್ಯುತ್‌ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಅಧಿ ಕಾರಿಗಳಿಗೆ ಎಚ್ಚರಿಸಿದರು. 10 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ಸರ್ಕಾರದಿಂದ ಯಾವುದೇ ಸಹಾಯಧನ ಸೌಲಭ್ಯ ದೊರಕಿಲ್ಲ. ಅ ಧಿಕಾರಿಗಳು ಸಂಘ ನೋಂದಣಿ ಬಳಿಕ ಸೌಲಭ್ಯ ಕಲ್ಪಿಸುವುದಾಗಿ ನೆಪ ಹೇಳುತ್ತಿದ್ದಾರೆ ಎಂದು ಮಹಿಳೆಯರು ದೂರಿದಾಗ, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅ ಧಿಕಾರಗಳಿಗೆ ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿರುವ ಸಾಮೂಹಿಕ ಶೌಚಾಲಯ ನಿರ್ವಹಣೆ ಸೂಕ್ತವಾಗಿಲ್ಲ. ಪರಿಣಾಮ ಪ್ರತಿ ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಇದಕ್ಕಾಗಿ ಫಲಾನುಭವಿಗಳಿಗೆ ಸರ್ಕಾರದ ಆರ್ಥಿಕ ನೆರವಿನ ಜೊತೆಗೆ ಬಿಪಿಎಲ್‌ ಕುಟುಂಬಗಳಿಗೆ ಶಾಸಕರ ನಿಧಿ ಯಿಂದ ನೆರವು ನೀಡುವುದಾಗಿ ಭರವಸೆ ನೀಡಿದರು. ಸಂಗಾಪುರ ಎಸ್‌.ಎಚ್‌. ಗ್ರಾಮಸ್ಥರು, ಶಾಲೆಯಲ್ಲಿ ಸಮರ್ಪಕ ವಿದ್ಯುತ್‌, ಶೌಚಾಲಯ ಹಾಗೂ ಶಿಕ್ಷಕರ ಕೊರತೆ ಇದೆ ಎಂದು
ಅಹವಾಲು ಸಲ್ಲಿಸಿದಾಗ, ಶಿಕ್ಷಣ ಇಲಾಖೆ ಅ ಧಿಕಾರಿಗಳು ಪ್ರಥಮ ಆದ್ಯತೆ ಮೇಲೆ ಸದರಿ ಶಾಲೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೇ ಸಂಗಾಪುರ-ಕಂಬಾಗಿ 2 ಕಿ.ಮೀ. ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಅನುಮತಿ ಇಲ್ಲದ ಮದ್ಯದ ಅಂಗಡಿಗಳನ್ನು ತಕ್ಷಣ ತೆರವುಗೊಳಿಸಬೇಕು. ಸಬ್‌ ರಜಿಸ್ಟರ್‌
ಕಚೇರಿಯಲ್ಲಿ ಉತಾರ, ನೋಂದಣಿ ಸೇರಿದಂತೆ ಎಲ್ಲ ರೀತಿಯ ದಾಖಲೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬಬಲಾದ ಪುನರ್ವಸತಿ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಘಟಕ, ಸ್ಮಶಾನ ನಿರ್ಮಿಸಬೇಕು. ಕೆಂಗಲಗುತ್ತಿ ಗ್ರಾಮದಿಂದ ಮಮದಾಪುರ, ಕೊಡಬಾಗಿ ಹಾಗೂ ಹಣಮಾಪುರ-ಬಿದರಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕ, ಖಾಜಿಪೀರ್‌ ದರ್ಗಾ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

ಸರ್ಕಾರಿ ವೈದ್ಯರು, ನರ್ಸ್‌ಗಳು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಬಬಲಾದ, ಕೆಂಗಲಗುತ್ತಿ ಗ್ರಾಮಸ್ತರು ದೂರಿದಾಗ,
ನಾಳೆಯೇ ಪರಿಶೀಲಿಸಿ, ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲೆಕ್ಕಾ ಧಿಕಾರಿಗಳು ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದಾಗ, ಬೇರೆಡೆಗೆ ವರ್ಗಾಯಿಸಲು ಸೂಚಿಸಿದರು. ಗುಣದಾಳ ಗ್ರಾಪಂ ಸುವರ್ಣ ಗ್ರಾಮ ಎಂದು ಘೋಷಿಸಬೇಕು. ಸಂಗಾಪುರವರೆಗೆ ರಸ್ತೆ ಡಾಂಬರೀಕರಣ, ಸರ್ಕಾರಿ ಪಿಯು ಕಾಲೇಜ್‌ 
ಮಂಜೂರಿ ಮಾಡಿಸಬೇಕು. ಬಸ್‌ ನಿಲ್ದಾಣ ದುರಸ್ತಿ ಮಾಡಿಸಿ ಸೂಕ್ತ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಜನರು ಮನವಿ ಮಾಡಿಕೊಂಡಾಗ ಸಚಿವರು ಸೂಕ್ತ ಕ್ರಮದ ಭರವಸೆ ನೀಡಿದರು. 

Advertisement

ವಿದ್ಯುತ್‌ ಸಮಸ್ಯೆ ನಿವಾರಣೆಗೆ ಬಬಲೇಶ್ವರ ಕ್ಷೇತ್ರದಲ್ಲಿ 5 ಶಾಖಾ ಧಿಕಾರಿ ಕಚೇರಿಗಳು ಮಂಜೂರಾಗಿದ್ದು, ಅಧಿ ಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಲೋಪ ಕಂಡು ಬಂದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಶ್ರೀಶೈಲ ಹೆಬ್ಟಾಳಟ್ಟಿ, ಉಮೇಶ ಮಲ್ಲಮ್ಮನವರ, ಅಪ್ಪುಗೌಡ ಪಾಟೀಲ, ಮಲ್ಲು ದಳವಾಯಿ, ರಾಮಲಿಂಗ 
ಕೊಕಟನೂರ, ಪ್ರಕಾಶ ಸೊನ್ನದ, ಹನುಮಂತಗೌಡ ಬಿರಾದಾರ, 
ವಿದ್ಯಾರಾಣಿ ತುಂಗಳ, ತಹಶೀಲ್ದಾರ್‌ ಎಂ.ಎನ್‌. ಬಳಿಗಾರ,
ತಾಪಂ ಇಒ ಸಿ.ಡಿ. ದೇವರಮನಿ ಇದ್ದರು. ಉಪ ತಹಶೀಲ್ದಾರ್‌
ಎ.ಎಂ. ಗಿರಿನಿವಾಸ ಸ್ವಾಗತಿಸಿದರು. ಕಂದಾಯ ನಿರೀಕ್ಷಕ
ಜಿ.ಪಿ.ಡೋಬಳೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next