Advertisement

ಕೆಒಎಫ್ ಸಂಸ್ಥೆಗೆ ಸಚಿವ ಬಿ.ಸಿ. ಪಾಟೀಲ್‌ ಭೇಟಿ‌

05:47 AM Jun 03, 2020 | Lakshmi GovindaRaj |

ಬೆಂಗಳೂರು: ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ “ಎಣ್ಣೆಕಾಳು ಬೀಜ ದಾಸ್ತಾನು ಹಾಗೂ ಪೂರೈಕೆ’ (ನೆಲಗಡಲೆ) ಕುರಿತು ಚರ್ಚೆ ನಡೆಸಲು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಕೆಒಎಫ್ ಸಂಸ್ಥೆಗೆ ಭೇಟಿ ನೀಡಿದರು.

Advertisement

ಈ  ಸಂದರ್ಭದಲ್ಲಿ ಕೆಒಎಫ್ ಮತ್ತು ಪ್ರಾದೇಶಿಕ ಎಣ್ಣೆಬೀಜ ಒಕ್ಕೂಟಗಳಿಂದ ಸುಮಾರು 27283 ಕ್ವಿಂಟಲ್‌ ಶೇಂಗಾ ಬಿತ್ತನೆ ಬೀಜವನ್ನು ರಾಜ್ಯದ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿದ್ದು, ಇದರಲ್ಲಿ 2360 ಕ್ವಿಂಟಲ್‌ ಶೇಂಗಾ  ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿರುವುದನ್ನು ಸಚಿವರು ಗಮನಿಸಿದರು. ಕೆಒಎಫ್ ಸಂಸ್ಥೆಯ ಇತರೆ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಣ್ಣೆ ಬೀಜಗಳ ಪ್ಯಾಕೆಟ್‌ಗಳನ್ನು ಬಿಡುಗಡೆಗೊಳಿಸಿದರು.  ಮಹಾಮಂಡಳಿ ಅಧ್ಯಕ್ಷ ಮತ್ತು ಸಂಸದ ಅಣ್ಣಾಸಾಹೇಬ್‌ ಶಂಕರ್‌ ಜೊಲ್ಲೆ, ಉಪಾಧ್ಯಕ್ಷ ಶಂಕ್ರಪ್ಪಗೌಡ ಪೊಲೀಸ್‌ ಪಾಟೀಲ್‌, ಕೆಒಎಫ್ ನಿರ್ದೇಶಕ ಮತ್ತು ಶಾಸಕ ವೆಂಕಟರಾವ್‌ ನಾಡಗೌಡ, ನಿರ್ದೇಶಕರುಗಳು  ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next