Advertisement

ವಾರದಲ್ಲಿ ಮಲೇಷಿಯಾ ಮರಳು ರಾಜ್ಯಕ್ಕೆ: ವಿನಯ

07:10 AM Aug 16, 2017 | |

ಧಾರವಾಡ: ಮರಳಿನ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ಇನ್ನು ಒಂದೇ ವಾರದಲ್ಲಿ ಮಲೇಷಿಯಾದಿಂದ ರಾಜ್ಯಕ್ಕೆ ಮರಳು ಬರಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು.

Advertisement

ಇಲ್ಲಿನ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮರಳಿನ ಕೊರತೆ
ನೀಗಿಸಲು ಹೊರ ದೇಶಗಳಿಂದ ಮರಳು ತರಿಸಲಾಗುತ್ತಿದೆ. ಈ ಪೈಕಿ ಮಲೇಶಿಯಾದಿಂದ ಮರಳು ಅತಿ ಕಡಿಮೆ ದರದಲ್ಲಿ 
ಲಭ್ಯವಾಗಿದೆ.

ದೇಶದಲ್ಲಿನ ಮರಳನ್ನು ಹಾಗೆಯೇ ಉಳಿಸಿಕೊಳ್ಳುವುದು ಮತ್ತು ರಾಜ್ಯದಲ್ಲಿ ಮರಳಿಗೆ ಉಂಟಾಗಿರುವ ಕೊರತೆ ನೀಗಿಸಲು ಸರ್ಕಾರ ಮೊದಲ ಬಾರಿಗೆ ವಿದೇಶದಿಂದ ಮರಳು ತರುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಅನೇಕ ಖಾಸಗಿ ಕಂಪನಿಗಳು ಮರಳು ನೀಡಲು ಮುಂದೆ ಬಂದಿವೆ. ಇದರಿಂದ ಮರಳನ್ನು ಗುಡ್ಡೆ ಹಾಕಿಕೊಂಡು ಮಾರುಕಟ್ಟೆ
ನಿಯಂತ್ರಿಸುವವರ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ.

ಈಗಾಗಲೇ ಈ ಬಗ್ಗೆ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಎಲ್ಲ ಪತ್ರ ವ್ಯವಹಾರ ಮುಗಿಸಿದ್ದು, ವಾರದಲ್ಲಿ ಮಲೇಷಿಯಾದಿಂದ ಮರಳು ರಾಜ್ಯಕ್ಕೆ ತಲುಪಲಿದೆ ಎಂದು ಹೇಳಿದರು.

Advertisement

ಎಂ. ಸ್ಯಾಂಡ್‌ ಲಭ್ಯ: ಉತ್ಪಾದಕ ಮರಳು (ಎಂ. ಸ್ಯಾಂಡ್‌) ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ರಾಜ್ಯಕ್ಕೆ ಬೇಕಾಗಿರುವ 24 ದಶಲಕ್ಷ ಮೆಟ್ರಿಕ್‌ ಟನ್‌ ಪೈಕಿ 13 ದಶಲಕ್ಷ ಮೆಟ್ರಿಕ್‌ ಟನ್‌ ಎಂ.ಸ್ಯಾಂಡ್‌ ರೂಪದಲ್ಲಿ ಲಭ್ಯವಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next