Advertisement

ಭೂಸನೂರ ಪರ ಸಚಿವ ಸಿ.ಸಿ. ಪಾಟೀಲ ಪ್ರಚಾರ

11:42 AM Oct 16, 2021 | Shwetha M |

ಗೋಲಗೇರಿ: ಹೊನ್ನಳ್ಳಿ, ಗೋಲಗೇರಿ, ಸಾಸಾಬಾಳ, ಬ್ರಹ್ಮದೇವನಮಡು ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಭರ್ಜರಿ ಪ್ರಚಾರ ಮಾಡಿದರು.

Advertisement

ಗೋಲಗೇರಿಯಲ್ಲಿ ಮಾತನಾಡಿದ ಸಚಿವರು, ರಮೇಶ ಭೂಸನೂರಗೆ ಮತ ನೀಡಿದರೆ ಸಿಂದಗಿ ಕ್ಷೇತ್ರ ಸಂಪೂರ್ಣ ಅಭಿವೃದ್ಧಿಯಾಗುತ್ತದೆ. ರಾಜ್ಯದಲ್ಲಿ ಬೊಮ್ಮಾಯಿ ಮತ್ತು ಕೇಂದ್ರದಲ್ಲಿ ಮೋದಿಯವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಿ ಎಂದರು.

ಅಭ್ಯರ್ಥಿ ರಮೇಶ ಭೂಸನೂರ ಮಾತನಾಡಿ, ನಾನು ಸಿಂದಗಿ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕನಾಗಿದ್ದೇನೆ. ಹಲವಾರು ಜನ ಪರ ಕೆಲಸಗಳನ್ನು ಹಾಗೂ ಸರ್ಕಾರದ ಸೌಲಭ್ಯಗಳನ್ನು ಕ್ಷೇತ್ರಕ್ಕೆ ಒದಗಿಸಿದ್ದೇನೆ. ಬಡವರಿಗೆ, ದೀನ-ದಲಿತರಿಗೆ ಬೆಂಬಲ ನೀಡುವ ಪಕ್ಷವೇ ನಮ್ಮ ಬಿಜೆಪಿ ಎಂದರು.

ಈ ವೇಳೆ ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಸಂತೋಷ ಪಾಟೀಲ ಡಂಬಳ, ಶರಣಪ್ಪ ಕಣಮೇಶ್ವರ, ಸಿದ್ದು ಪಾಟೀಲ, ಶ್ರೀಕಾಂತ ಸೋಮಜಾಳ ಮಾತನಾಡಿದರು. ಪ್ರಭುಗೌಡ ಪಾಟೀಲ (ಡಂಬಳ,) ಶಿವಣ್ಣ ಮಾರಲಭಾವಿ, ಭೀಮರಾಯ ಸುಣಗಾರ, ಶಿಲ್ಪಾ ಕುದರಗೊಂಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next