Advertisement

ಕಾರ್ಕಳ ಉತ್ಸವ ಪ್ರತಿವರ್ಷ ನಡೆಯಲಿ: ಸಚಿವ ಆನಂದ್‌ ಸಿಂಗ್‌

12:53 AM Mar 19, 2022 | Team Udayavani |

ಕಾರ್ಕಳ: ಹಿಂದೂ ಸಾಮ್ರಾಜ್ಯದಲ್ಲೆ ಅತೀ ದೊಡ್ಡ ಉತ್ಸವ ವಿಜಯನಗರದ ಹಂಪಿ ಉತ್ಸವವು ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ಅದೇ  ಕಲ್ಪನೆಯಲ್ಲಿ ಕಾರ್ಕಳ ಉತ್ಸವ ಆರಂಭಿಸಿದ್ದಾರೆ. ಹಂಪಿ ಉತ್ಸವ ಮೂರು ದಿನ ನಡೆದರೆ ಸಚಿವ ಸುನಿಲ್‌ ಆರಂಭದಲ್ಲಿಯೇ  ಹತ್ತು ದಿನ ನಡೆಸುವ ಮೂಲಕ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದಾರೆ. ಕಾರ್ಕಳ ಉತ್ಸವ ದಸರಾ ಉತ್ಸವದಂತೆ ಪ್ರತಿ ವರ್ಷ ನಡೆಯಲಿ ಎಂದು  ಜೀವಿಶಾಸ್ತ್ರ, ಪರಿಸರ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.

Advertisement

ಸುನಿಲ್‌ ಛಲಗಾರ :

ಸ್ವರಾಜ್‌ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂಸ್ಕೃತಿ ರಕ್ಷಣೆ ನಮ್ಮ ಧರ್ಮ. ಸುನಿಲ್‌ ಅವರಲ್ಲಿ ಶ್ರದ್ಧೆ, ನಿಷ್ಠೆ ಇರುವುದನ್ನು  ಕಂಡಿದ್ದೇನೆ. ಅವರೊಬ್ಬ ಛಲಗಾರ ಎಂದರು.

ಥೀಂ ಪಾರ್ಕ್‌ಗೆ 1.5 ಕೋ.ರೂ. :

ಬೈಲೂರಿನ ಪರಶುರಾಮ ಥೀಂ ಪಾರ್ಕ್‌ ಅಭಿವೃದ್ಧಿಗೆ 1.5 ಕೋ.ರೂ.ಗಳನ್ನು ಇದೇ ಸಂದರ್ಭ  ಸಚಿವ ಆನಂದ್‌ ಸಿಂಗ್‌ ಅವರು ಘೋಷಿಸಿದರು. ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಉಪಸ್ಥಿತರಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ. ಸೋಮಶೇಖರ್‌, ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ ಮಾತನಾಡಿದರು.

Advertisement

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾಕೇಶವ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ| ಎನ್‌. ಮಂಜುಳಾ, ಜಿÇÉಾಧಿಕಾರಿ ಕೂರ್ಮಾರಾವ್‌ ಎಂ., ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಎಸ್‌ಪಿ ಎನ್‌. ವಿಷ್ಣುವರ್ಧನ್‌, ಅರಣ್ಯ ಇಲಾಖೆ ಅಧಿಕಾರಿ ಮನೋಜ್‌ ಕುಮಾರ್‌, ಉದ್ಯಮಿ ರಘುವೀರ್‌ ಶೆಟ್ಟಿ, ಕ್ಯಾ| ಗಣೇಶ್‌ ಕಾರ್ಣಿಕ್‌ ಉಪಸ್ಥಿತರಿದ್ದರು. ಸಹಾಯಕ ಕಮಿಷನರ್‌ ರಾಜು ಸ್ವಾಗತಿಸಿ, ಸಂಗೀತಾ ನಿರೂಪಿಸಿದರು.

ವೈಭವದ ಮೆರವಣಿಗೆ :

ಉತ್ಸವ ಮೆರವಣಿಗೆ ಅತ್ಯಂತ ವೈಭವದಿಂದ ನಡೆಯಿತು. ನಾಡಿನ ಹಾಗೂ ಹೊರರಾಜ್ಯಗಳ ಕಲಾವಿದರ ತಂಡ ಹಾಗೂ ತಾಲೂಕಿನ 34  ಗ್ರಾ.ಪಂ.ಗಳ, ಶಿಕ್ಷಣ ಸಂಸ್ಥೆಗಳ ವಿಶೇಷ

ವೇಷಭೂಷಣಗಳು ಸೇರಿ 250ಕ್ಕೂ ಹೆಚ್ಚಿನ 10 ಸಾವಿರಕ್ಕೂ ಮಿಕ್ಕಿದ ಕಲಾವಿದರ ವೇಷಭೂಷಣ ಒಳಗೊಂಡ ಮೆರವಣಿಗೆ ಬಂಡಿಮಠದಿಂದ  ಸ್ವರಾಜ್‌ ಮೈದಾನದ ವರೆಗೆ ಸಾಗಿತು.

ಬಂಡಿಮಠದಲ್ಲಿ  ಸಂಸದೆ ಶೋಭಾ ಕರಂದ್ಲಾಜೆ ಡೋಲು ಬಡಿದು ಚಾಲನೆನೀಡಿದರು. ಕ್ಯಾ| ಗಣೇಶ್‌ ಕಾರ್ಣಿಕ್‌, ಡಾ| ಎಂ.ಎನ್‌. ರಾಜೇಂದ್ರಕುಮಾರ್‌, ಡಾ| ಮೋಹನ ಆಳ್ವ ಅವರು ಉಪಸ್ಥಿತರಿದ್ದರು. ಕಬಡ್ಡಿ ಆಟಗಾರ ಸುಕೇಶ್‌  ಅವರನ್ನು ಸಮ್ಮಾನಿಸಲಾಯಿತು.

ಮಳೆಯ ಸಿಂಚನ :

ಉತ್ಸವ ಮೆರವಣಿಗೆ ಸ್ವರಾಜ್‌ ಮೈದಾನ ತಲುಪಿದ ತತ್‌ಕ್ಷಣವೇ ಮಳೆಯ ಸಿಂಚನವಾಯಿತು. ಬಿಸಿಲಿನ ತಾಪವೂ ಇದ್ದಿದ್ದರಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಕಲಾವಿದರಿಗೆ ಮಳೆಯು ಖುಷಿ ಕೊಟ್ಟಿತ್ತಾದರೂ, ಬೃಹತ್‌ ವೇದಿಕೆ, ಲೈಟಿಂಗ್ಸ್‌ಗೆ ತೊಂದರೆಯಾಯಿತು. ಬೆಳಗ್ಗೆ  ಕೃಷಿ, ಫ‌ಲಪುಷ್ಪ ಪ್ರದರ್ಶನ ಉದ್ಘಾಟನೆಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next