ಕೆ.ಆರ್.ಪೇಟೆ: “ನಾನು ಶಾಸಕನಾದ ನಂತರ ಕೆ.ಆರ್ .ಪೇಟೆಯಲ್ಲಿ ಗೂಂಡಾಗಿರಿ ನಿಯಂತ್ರಣಕ್ಕೆ ಬಂದಿದೆ. ತಾಲೂಕಿನಲ್ಲಿ ಆರು ಜನ ಶಾಸಕರಿಲ್ಲ, ತಾಲೂಕಿಗೆ ಇರುವವನು ನಾನೊಬ್ಬನೇ ಶಾಸಕ. ಕ್ಷೇತ್ರದ ಜನತೆ ಆಶೀರ್ವಾದದ ಬಲದಿಂದ ಸತತವಾಗಿ 3 ಬಾರಿ ಶಾಸಕನಾಗಿ ಜನತೆಯ ಸೇವೆ ಮಾಡುತ್ತಿದ್ದೇನೆ’ ಎಂದು ಸಚಿವ ನಾರಾಯಣಗೌಡ ಹೇಳಿದರು.
ತಾಲೂಕಿನ ಬೂಕನಕೆರೆ ಹೋಬಳಿ ವಿಠಲಾಪುರ ಗ್ರಾಪಂ ವ್ಯಾಪ್ತಿಯ ಮಡುವಿನಮ್ಮ ದೇಗುಲ ಬಯಲಿನಲ್ಲಿ ನಡೆದ ತಮ್ಮ ಅಭಿಮಾನಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
3 ಬಾರಿ ಗೆಲ್ಲಿಸಿದ್ದಾರೆ: ನನ್ನ ರಾಜಕೀಯ ವಿರೋಧಿ ಗಳು ನಾನು ಮುಂಬೈಗೆ ಓಡಿಹೋಗುತ್ತೇನೆ, ಜನರ ಕೈಗೆ ಸಿಗಲ್ಲ ಎಂದೆಲ್ಲಾ ಅಪಪ್ರಚಾರ ನಡೆಸಿದ್ದಾರೆ. ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸವನ್ನಿಟ್ಟು ಸತತ ವಾಗಿ 3ಬಾರಿ ಗೆಲ್ಲಿಸಿದ್ದಾರೆ. ಜನತೆಯ ಆಶೀರ್ವಾದ ವಿದ್ದರೆ ಮತ್ತೂಮ್ಮೆ ಶಾಸಕನಾಗಿ ಇತಿಹಾಸ ನಿರ್ಮಿಸುವ ಜತೆಗೆ ನಾನು ಸಚಿವನಾಗಿ ಮಂಜೂರು ಮಾಡಿಸಿ ತಂದಿರುವ 1700ಕೋಟಿ ರೂ.ಗಳಿಗೂ ಹೆಚ್ಚಿನ ಅಭಿ ವೃದ್ಧಿ ಕೆಲಸ ಅನುಷ್ಠಾನಗೊಳ್ಳಲಿವೆ ಎಂದು ತಿಳಿಸಿದರು.
ತಂದೆ-ತಾಯಿಯನ್ನು ಕಾಣುತ್ತೇನೆ: ಹಾಗೆಯೇ ಉಳಿಕೆ ಕೆಲಸವನ್ನು ಮುಂದುವರೆಸಿ ಕೆ.ಆರ್.ಪೇಟೆ ಯನ್ನು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುತ್ತೇನೆ. ನನ್ನ ರಾಜಕೀಯ ವಿರೋಧಿ ಗಳ ಟೀಕೆ-ಟಿಪ್ಪಣೆಗಳಿಗೆ ಅಭಿವೃದ್ಧಿ ಮೂಲಕ ಉತ್ತರ ನೀಡುತ್ತೇನೆ. ಕ್ಷೇತ್ರದ ಜನತೆ, ನನ್ನ ಅಭಿಮಾನಿಗಳು ರಾಜಕಾರಣದಲ್ಲಿ ಮುಂದುವರಿಯಿರಿ ಎಂದರೆ ರಾಜಕಾರಣ ಮಾಡ್ತೀನಿ ಇಲ್ಲದಿದ್ದರೆ ಒಬ್ಬ ಸಾಮಾನ್ಯ ಸೇವಕನಂತೆ ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸಿ ಕೆಲಸ ಮಾಡ್ತೀನಿ. ಈ ಮೂಲಕ ಕ್ಷೇತ್ರದ ಜನರಲ್ಲಿ ನನ್ನ ತಂದೆ-ತಾಯಿಯನ್ನು ಕಾಣುತ್ತೇನೆಂದರು.
ಎರಡೂ ಬಗೆಯ ಊಟ: ತಾಲೂಕಿನ ಎಲ್ಲಾ ಹೋಬ ಳಿಗಳಲ್ಲಿ ನನ್ನ ಅಭಿಮಾನಿಗಳು ಜನಸಾಮಾನ್ಯರು ಹಾಗೂ ಕಾರ್ಯಕರ್ತರೊಂದಿಗೆ ಕಷ್ಟಸುಖವನ್ನು ಹಂಚಿಕೊಳ್ಳಲು ಸಭೆ ನಡೆಸುತ್ತಿದ್ದಾರೆ. ತಾಲೂಕಿನ ಸಂತೇಬಾಚಹಳ್ಳಿ ಹೋಬಳಿ ಗವಿರಂಗನಾಥ ಕ್ಷೇತ್ರದಲ್ಲಿ ನಡೆದಿದ್ದು, ಶೀಳನೆರೆ ಹೋಬಳಿ ಅಭಿಮಾನಿಗಳ ಸಭೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದಿದೆ. ಅತಿಥಿ ಸತ್ಕಾರ ಮಾಡುವುದು, ಊಟ ಹಾಕಿ ಆತಿಥ್ಯ ನೀಡುವುದು ನಾನು ನನ್ನ ಜೀವನದಲ್ಲಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ. ಮಾ.12ರಂದು ಅಕ್ಕಿಹೆಬ್ಟಾಳು ಹೋಬಳಿಯಲ್ಲಿ ಸಭೆ ನಡೆಯಲಿದೆ. ಮಾಂಸಾಹಾರಿ ಊಟ ಜನಸಾಮಾನ್ಯರಿಗೆ ಇಷ್ಟವಾದ್ದರಿಂದ ಬಾಡೂಟ ಮತ್ತು ಸಸ್ಯಾಹಾರಿ ಊಟ ಸೇರಿ ಎರಡೂ ಬಗೆಯ ಊಟದ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಉತ್ತರಿಸಿದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಬಿ.ಜವರಾಯಿ ಗೌಡ, ಜಿಲ್ಲಾ ತೋಟದ ಬೆಳೆಗಾರರ ಸಂಘ ಹಾಫ್ ಕಾಮ್ಸ್ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ಸೋಮನಹಳ್ಳಿ ಗ್ರಾಪಂ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಕಾಂತರಾಜು, ಬೂಕನಕೆರೆ ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಉಪಾಧ್ಯಕ್ಷೆ ಜ್ಯೋತಿಮಂಜು, ಮುಖಂಡರಾದ ದೊದ್ದನಕಟ್ಟೆ ಪಾಂಡು, ಬಳ್ಳೇಕೆರೆ ಪ್ರವೀಣ್, ಮನುಶರತ್, ಸಚಿವರ ಆಪ್ತಸಹಾಯಕ ದಯಾನಂದ ಮತ್ತಿತರರು ಉಪಸ್ಥಿತರಿದ್ದರು.