Advertisement

ಆಸಿಡ್ ದಾಳಿಗೆ ತುತ್ತಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ ಮುರುಗೇಶ್ ನಿರಾಣಿ

05:32 PM May 01, 2022 | Team Udayavani |

ಬೆಂಗಳೂರು: ದುಷ್ಟರ್ಮಿಯೊಬ್ಬನಿಂದ ಆಸಿಡ್ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿರುವ ಸಂತ್ರಸ್ಥೆ ‌ಯುವತಿಯ ವೈದ್ಯಕೀಯ ವೆಚ್ಚಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ವೈಯಕ್ತಿಕವಾಗಿ  1ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

Advertisement

ಮೊದಲ ಹಂತದಲ್ಲಿ ಯುವತಿಯ ವೈದ್ಯಕೀಯ ವೆಚ್ಚಕ್ಕೆ 1 ಲಕ್ಷ ‌ ಪರಿಹಾರವನ್ನು ವೈಯಕ್ತಿಕವಾಗಿ ನೀಡಲಾಗುವುದು. ಅಗತ್ಯವಿದ್ದರೆ ಮುಂದಿನ  ದಿನಗಳಲ್ಲಿ ಅವರ ಕುಟುಂಬ ವರ್ಗದವರಿಗೆ ಆರ್ಥಿಕ ನೆರವು ನೀಡುವ ಆಶ್ವಾಸನೆಯನ್ನು ನಿರಾಣಿ ಅವರು ನೀಡಿದ್ದಾರೆ.

ಆಸಿಡ್ ದಾಳಿಗೆ ಒಳಗಾದ ಯುವತಿಯ ಕುಟುಂಬದವರು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದಾರೆ ಎಂಬುದನ್ನು ತಿಳಿದು ತುಂಬಾ ಬೇಸರವಾಯಿತು. ಹೀಗಾಗಿ ವೈದ್ಯಕೀಯ ನೆರವಿಗೆ ವೈಯುಕ್ತಿಕವಾಗಿ ನೆರವು ನೀಡುತ್ತಿದ್ದೇನೆಂದು ಹೇಳಿದ್ದಾರೆ.

ಅತಿ  ಶೀಘ್ರದಲ್ಲೇ ಕುಟುಂಬದವರಿಗೆ ಚಕ್ ನೀಡಲಾಗುವುದು. ಸರ್ಕಾರದಿಂದಲೂ ನೆರವು ಕೊಡಿಸಲು ಎಲ್ಲಾ ‌ರೀತಿಯಲ್ಲೂ  ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಇದು ಅತ್ಯಂತ ಹೇಯ ಕೃತ್ಯ  :

Advertisement

ಯಾವುದೇ ನಾಗರಿಕ ಸಮಾಜದಲ್ಲಿ ಇಂತಹ ಅಮಾನವೀಯ ಘಟನೆಯನ್ನು ಸಹಿಸಲು ಸಾಧ್ಯವೇ ಇಲ್ಲ. ಇದೊಂದು ಅತ್ಯಂತ ಹೇಯ‌ ಕೃತ್ಯ ಎಂದು ನಿರಾಣಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ‌ಮರುಕಳಿಸಬಾರದು ಎಂದರೆ ಈ ದುಷ್ಕತ್ಯ ಎಸಗುವವರಿಗೆ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕು. ಇದರಿಂದ ಮುಂದಿನವರಿಗೂ ಎಚ್ಚರಿಕೆಯ ಪಾಠವಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಎಷ್ಟು‌ ಸಾಧ್ಯವೋ ಅದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು. ತಪ್ಪಿತಸ್ಥರು ಯಾರೇ ಇದ್ದರೂ ಸರ್ಕಾರ ಖಂಡಿತವಾಗಿಯೂ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಿದೆ ಎಂದು ಸಚಿವ ‌ನಿರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ‌ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next