Advertisement
ವಿಶ್ವ ದುಬೈಎಕ್ಸ್ ಪೋ – 2020 ನಲ್ಲಿ ” ಕರ್ನಾಟಕದಲ್ಲಿ ಅಂತರಿಕ್ಷೆ , ರಕ್ಷಣೆ ಹಾಗೂ ವೈಮಾನಿಕ ವಲಯದಲ್ಲಿರು ಅವಕಾಶಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು, ಈ ವಲಯದಲ್ಲಿ ರಾಜ್ಯವು ಸಾಧಿಸಿರುವ ‘ಪ್ರಗತಿಯ ಚಿತ್ರಣವನ್ನು’ ತೆರೆದಿಟ್ಟರು.
Related Articles
Advertisement
“ಕರ್ನಾಟಕದಲ್ಲಿ ಸುಮಾರು 2000 ಎಸ್‌ಎಂಇಗಳ ಪ್ರಬಲ ನೆಲೆಯನ್ನು ಹೊಂದಿದೆ, ಇದು ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ಉಪ-ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತದೆ. ಈ ವಲಯಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ಮತ್ತು ಬೆಂಬಲ ಕೊಟ್ಟ ಪರಿಣಾಮ, ರಾಜ್ಯದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸುವುದರ ಜೊತೆಗೆ ವಿಸ್ತರಣೆಯನ್ನು ಮತ್ತಷ್ಟು ಹೆಚ್ಚಿಸಲು ಅನುಕೂಲವಾಗಿದೆ. ಪರಿಣಾಮ ಹೆಚ್ಚು ಉದ್ಯಮೆದಾರರಿಗೆ ನಮ್ಮ ರಾಜ್ಯದ ಕಡೆ ಆಕರ್ಷಿತವಾಗಿದೆ ಎಂದು ನಿರಾಣಿ ಅವರು ಪ್ರಶಂಸಿದರು.
“ಭಾರತೀಯ ಸ್ಟಾರ್ಟ್ ಅಪ್‌ಗಳು ಅನುಭವಗಳಿಂದ ಕಲಿಯುತ್ತಾರೆ. ಭವಿಷ್ಯದಲ್ಲಿ ಅವರ ನಿರ್ಧಾರಗಳಿಗೆ ಇದು ಮಾರ್ಗದರ್ಶನ ನೀಡಲು ಉತ್ತಮ ವೇದಿಕೆಯಾಗಲಿದೆ” ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಈ ವೇದಿಕೆಯಲ್ಲಿ ಆರಂಭವಾದ ಸಂವಾದಗಳು, ವಿಚಾರಗಳ ವಿನಿಮಯವು ಮುಂದುವರಿಯುತ್ತದೆ. ದುಬೈ ಎಕ್ಸ್‌ಪೋ 2020 ಅನ್ನು ವಿವಿಧ ರಾಜ್ಯಗಳು, ಉದ್ದಿಮೆದಾರರು ಮತ್ತು ಇತರ ಪಾಲುದಾರರನ್ನು ಭೇಟಿಯಾಗಿ ಸಂವಾದಿಸಲು ಮತ್ತು ಸಹಯೋಗಿಸಲು ವೇದಿಕೆ ಒದಗಿಸಿದ್ದಕ್ಕಾಗಿ ಸಚಿವರು ಪ್ರಶಂಸಿಸಿದರು.