Advertisement

ಹೊಸಕೋಟೆ ಈಗ ರಾಮರಾಜ್ಯ

11:33 AM Mar 16, 2023 | Team Udayavani |

ಹೊಸಕೋಟೆ: ತಾಲೂಕು ಕಸಬಾ ಚೀಮಂಡಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಭೆ ಯಲ್ಲಿ ಗ್ರಾಮದ ಮಾಜಿ ತಾಪಂ ಸದಸ್ಯ ರಾಜೇಂದ್ರ ಮತ್ತು ಗ್ರಾಪಂ ಸದಸ್ಯೆ ನಂದಿನಿರಾಜಗೋಪಾಲ್‌ ಮತ್ತು ಚಂದ್ರಪ್ರಸಾದ್‌ ಮುಂದಿನ ಚುನಾವಣೆ ಯಲ್ಲಿ ವಿಜಯಿಯಾಗಲಿ ಎಂದು ಸಚಿವ ಎಂಟಿಬಿ ನಾಗರಾಜ್‌ ಅವರಿಗೆ ಬೆಳ್ಳಿ ಗದೆ ಮತ್ತು ಬಿಲ್ಲು ಬಾಣ ನೀಡಿದರು.

Advertisement

ಈ ವೇಳೆ ಮಾತನಾಡಿ, ಕೆಲವೇ ದಿನಗಳು ಚುನಾವಣೆಗೆ ಬಾಕಿ ಉಳಿದಿದ್ದು ನಮ್ಮ ಪಕ್ಷದ ಸಾಕಷ್ಟು ಬಿಜೆಪಿ ಮುಖಂಡರುಗಳು ತಯಾರಿ ಮಾಡಿಕೊಂಡಿದ್ದಾರೆ. ನಮಗೆ ಬಿಲ್ಲು, ಬಾಣ, ಗದೆ ನೀಡುವ ಮೂಲಕ ಈ ಚುನಾವಣೆಯ ಕುರುಕ್ಷೇತ್ರ ಎಂಬ ಯುದ್ಧವನ್ನು ಸಾರಿದ್ದಾರೆ. 2004ರಲ್ಲಿ ನಾನು ಮೊದಲ ಬಾರಿಗೆ ಹೊಸಕೋಟೆಗೆ ಬಂದಾಗ ಈ ಕ್ಷೇತ್ರ ರಾವಣ ರಾಜ್ಯದಂತಿತ್ತು. ಭ್ರಷ್ಟಾಚಾರ, ಭೂಕಬಳಿಕೆ, ದೌರ್ಜನ್ಯ, ಕೊಲೆ, ಸುಲಿಗೆ ಮುಗಿಲು ಮುಟ್ಟಿದ್ದವು. ರಾವಣರಾಜಯದಂತಿದ್ದ ಈ ತಾಲ್ಲೂಕನ್ನು ರಾಮರಾಜ್ಯ ಮಾಡಲು 18 ವರ್ಷಗಳು ಬೇಕಾಯಿತು. ಇದಕ್ಕೆ ತಾಲೂಕಿನ ಜನತೆ ನೀಡಿದ ಪ್ರೀತಿ ಅಭಿಮಾನ ನಮಗೆ ವರದಾನವಾಗಿದೆ. ಈ ಭಾರಿ ಕ್ಷೇತ್ರಕ್ಕೆ ನನ್ನ ಮಗ ನಿತಿನ್‌ ಪುರುಷೋತ್ತಮ್‌ ಕಣಕ್ಕೆ ಇಳಿಸಬೇಕು ಎಂದು ವರಿಷ್ಠರಿಗೆ ತಿಳಿಸಿದ್ದೇನೆ ಕ್ಷೇತ್ರದ ಜನರ ಅಭಿಪ್ರಾಯ ಆಗಿದೆ. ಈಗಾಗಲೇ ನಮ್ಮ ವರಿಷ್ಠರ ಗಮನಕ್ಕೂ ತಂದಿದ್ದೇನೆ. ಅವರು ಯಾವ ತೀರ್ಮಾನ ತೆಗದುಕೊಳ್ಳುತ್ತಾರೂ ನೋಡೋಣ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಪ್ರತಿ ಚುನಾವಣೆಯಲ್ಲೂ ಚೀಮಂಡಹಳ್ಳಿ ಗ್ರಾಮ ನಮಗೆ ಅತಿ ಹೆಚ್ಚನ ಮತಗಳನ್ನು ನೀಡುತ್ತಾ ಬಂದಿದ್ದಾರೆ. ಈ ಬಾರಿಯು ಸಹ ಇನ್ನು ಹೆಚ್ಚು ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಹೆಲಿಕ್ಯಾಪ್ಟರ್‌ ಮೂಲಕ ಹೂ ಮಳೆ ಸುರಿಸಿ, ಸಚಿವ ನಾಗರಾಜ್‌ ಮತ್ತು ನಿತಿನ್‌ ಪುರುಷೋತ್ತಮ್‌ ರವರಿಗೆ ಚೀಮಂಡಹಳ್ಳಿ ಗ್ರಾಮಸ್ಥರು ಮಾಡಿದರು ಕಾರ್ಯಕರ್ತರು ಹಷೋದ್ಗಾರ ಮಾಡಿ ಜೈಕಾರದ ಘೋಷಣೆ ಮೊಳಗಿಸಿದರು.

ಕಾರ್ಯಕ್ರಮದಲ್ಲಿ ನಿತಿನ್‌ ಪುರುಷೋತ್ತಮ್‌, ಬಿಜೆಪಿ ಅಧ್ಯಕ್ಷ ಕೆ.ಸತೀಶ್‌, ತಾಪಂ ಮಾಜಿ ಸದಸ್ಯ ರಾಜೇಂದ್ರ, ಗ್ರಾಪಂ ಸದಸ್ಯರಾದ ನಂದಿನಿರಾಜಗೋಪಾಲ್‌, ಚಂದ್ರಪ್ರಸಾದ್‌, ಸೋಮಶೇಖರ್‌, ಹೇಮಂತ್‌ ಕುಮಾರ್‌, ಅಬಕಾರಿ ಶ್ರೀನಿವಾಸಯ್ಯ, ಹುಲ್ಲೂರಪ್ಪ, ಜಯರಾಜ್‌, ಚೌಡಪ್ಪ, ಜಿ.ಆರ್‌.ಮುನಿಯಪ್ಪ, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ಹೊಸಕೋಟೆಗೆ ಮೆಟ್ರೋ ತರುವ ಕನಸು : ಬೆಂಗಳೂರು ನಗರಕ್ಕೆ ಹೊಂದಿಕೊಂಡಿ ಅತಿವೇಗವಾಗಿ ಬೆಳೆಯುತ್ತಿದೆ. ಅನೇಕ ಕೈಗಾರಿಕೆಗಳು, ಶಾಲಾ ಕಾಲೇಜುಗಳು ಅಪಾರ್ಟ್‌ಮೆಂಟ್‌, ಮಾಲ್‌ಗ‌ಳು, ತಲೆ ಎತ್ತಿ ಜನ ಪ್ರತಿ ದಿನ ಲಕ್ಷಾಂತರ ಜನ ಪ್ರಯಾಣಿಸಲು ತೊಂದರೆಯಾಗಿದೆ. ಈಗಾಗಲೇ ಸಿಎಂ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಅದರ ಪ್ರತಿಫ‌ಲ 2500 ಕೋಟಿ ಹಣ ಬಿಡುಗಡೆಗೆ ಒಪ್ಪಿದ್ದಾರೆ. ಕಾವೇರಿ 5ನೇ ಹಂತ 65 ಕೋಟಿ ಹಣವನ್ನು ಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next