Advertisement

Udupi ಶ್ರೀ ಪುತ್ತಿಗೆ ಮಠಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭೇಟಿ

12:32 AM Nov 02, 2023 | Team Udayavani |

ಉಡುಪಿ: ಶ್ರೀಕೃಷ್ಣ ಮಠದ ಭಾವೀ ಶ್ರೀ ಪುತ್ತಿಗೆ ಪರ್ಯಾಯೋತ್ಸವ ಸ್ವಾಗತ ಸಮಿತಿಯ ಮಹಾ ಪೋಷಕ ರಾದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸಮಿತಿಯ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್‌ ಬುಧವಾರ ಮಹಾ ಪೋಷಕ ಪತ್ರವನ್ನು ಹಸ್ತಾಂತರಿಸಿದರು.

Advertisement

ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ ಪ್ರಸಾದ ನೀಡಿ, ಪರ್ಯಾಯೋತ್ಸವ ಯೋಜನೆಯ ಮನವಿ ಪತ್ರ ಸಲ್ಲಿಸಿದರು.

ಬಳಿಕ ಸಚಿವೆ ಶ್ರೀ ಮಠಕ್ಕೆ ಭೇಟಿ ನೀಡಿ ಸ್ವಾಗತಿ ಸಮಿತಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯೋತ್ಸವಕ್ಕೆ ರಾಜ್ಯ ಸರಕಾರಹಾಗೂ ಜಿಲ್ಲಾಡಳಿತದಿಂದ ಪೂರ್ಣ
ಪ್ರಮಾಣದ ಸಹಕಾರ ನೀಡಲಾಗು ವುದು. ಮುಂದಿನ ಉಡುಪಿ ಭೇಟಿ ವೇಳೆ ಜಿಲ್ಲಾಡಳಿತದ ವತಿಯಿಂದ ಪರ್ಯಾಯೋತ್ಸವ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದರು.

ಪುತ್ತಿಗೆ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಶ್ರೀಕೃಷ್ಣ ಕರುಣಿಸಿದ್ದಾನೆ. ಪುತ್ತಿಗೆ ಮಠ ದೇಶ, ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ಶ್ರೀಗಳಿಂದ ಹಿಂದೂ ಸಂಸ್ಕೃತಿಯ ಶ್ರೇಷ್ಠತೆಯನ್ನು ವಿಶ್ವಾದ್ಯಂತ ಪಸರಿಸುವ ಕೆಲಸ ನಡೆಯುತ್ತಿದೆ. ಶ್ರೇಷ್ಠ ಹಿಂದೂ ಸಂಸ್ಕೃತಿಯನ್ನು ಉಳಿಸಿ, ಬೆಳಸುವ ಕರ್ತವ್ಯ ನಮ್ಮದು. ಯಾವುದೇ ರಾಜಕೀಯ ತರದೇ ಭಕ್ತಿಭಾವದಿಂದ ಪರ್ಯಾಯೋತ್ಸವದಲ್ಲಿ ಪಾಲ್ಗೊ ಳ್ಳೋಣ. ದೇಶ ವಿದೇಶಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ಸಕಲ ವ್ಯವಸ್ಥೆ ಮಾಡೋಣ, ವೈಯಕ್ತಿಕ ನೆಲೆಯಲ್ಲಿ, ರಾಜ್ಯ ಸರಕಾರ, ಜಿಲ್ಲಾಡಳಿತದ ನೆಲೆಯಲ್ಲೂ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ರಘುಪತಿ ಭಟ್‌ ಮಾತನಾಡಿ, ಪರ್ಯಾಯೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ, ಸಾಮಾಜಿಕ ಉತ್ಸವವಾಗಿ ನಡೆಯುತ್ತದೆ. ಪರ್ಯಾ ಯೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಮಹಾ ಪೋಷಕರ ನೆಲೆಯಲ್ಲಿ ಜತೆಗೆ ಇರಬೇಕು ಎಂದು ಮನವಿ ಮಾಡಿದರು.

Advertisement

ಸಮಿತಿಯ ಕೋಶಾಧಿಕಾರಿ ರಂಜನ್‌ ಕಲ್ಕೂರ, ಉಪಾಧ್ಯಕ್ಷರಾದ ಪ್ರಸಾದ್‌ರಾಜ್‌ ಕಾಂಚನ್‌, ಜಯಕರ ಶೆಟ್ಟಿ ಇಂದ್ರಾಳಿ, ದಿನೇಶ್‌ ಪುತ್ರನ್‌, ರಮೇಶ್‌ ಕಾಂಚನ್‌, ಪದಾಧಿಕಾರಿಗಳಾದ ಶ್ರೀಪತಿ ಭಟ್‌ ಉಚ್ಚಿಲ, ಭಾಸ್ಕರ ರಾವ್‌ ಕಿದಿಯೂರು, ವಿಜಯರಾಘವ ರಾಜ್‌, ಎಂ.ಎಲ್‌. ಸಾಮಗ, ಕೆ. ರವೀಂದ್ರ ಆಚಾರ್ಯ, ಕೆ. ರಘುಪತಿ ರಾವ್‌, ಹಯವದನ ಭಟ್‌, ಬಿ. ಕುಶಲ ಶೆಟ್ಟಿ, ಶೇಷಶಯನ, ವಿಷ್ಣುಮೂರ್ತಿ ಉಪಾಧ್ಯಾಯ ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ| ಬೆಳಪು ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿ, ಶ್ರೀ ಮಠದ ವಿದ್ವಾನ್‌ ಡಾ| ಬಿ. ಗೋಪಾಲಾಚಾರ್ಯ ಪ್ರಸ್ತಾವನೆಗೈದು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next