Advertisement

Janata Darshan: ಅಧಿಕಾರಿಗಳು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಬೇಕು: ಹೆಬ್ಬಾಳ್ಕರ್

12:42 PM Sep 25, 2023 | Team Udayavani |

ಮಣಿಪಾಲ: ಅಧಿಕಾರಿಗಳು ಹೃದವಂತಿಕೆಯಿಂದ ಜನರ ಸಮಸ್ಯೆ ಬಗೆಹರಿಸಬೇಕು. ಜನತಾದರ್ಶನದ ಎಲ್ಲ ಕಡತಗಳು ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚಿಸಿದರು.

Advertisement

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಜನತಾದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರಿಗಳು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಬೇಕು. ಕಾನೂನಿನನ್ವಯ ಯಾವುದಕ್ಕೆಲ್ಲ ಪರಿಹಾರ ನೀಡಲು ಸಾಧ್ಯವೋ ಅದೆಲ್ಲಕ್ಕೂ ತತ್ ಕ್ಷಣವೇ ಪರಿಹಾರ ಸೂಚಿಸುವ ಕೆಲಸ ಆಗಬೇಕು ಎಂದರು.

ಕಂದಾಯ, ಅರಣ್ಯ, ಪೊಲೀಸ್, ಸಮಾಜ ಕಲ್ಯಾಣ ಮೊದಲಾದ ಇಲಾಖೆಗಳಲ್ಲಿ ಸಾಕಷ್ಟು ಕಡತ ಬಾಕಿ ಇರುತ್ತದೆ. ಕಡತವು ಒಂದು ಟೇಬಲ್ ನಿಂದ ಇನ್ನೊಂದು ಟೇಬಲ್ ಗೆ ಹೋಗುತ್ತಿರಬಾರದು. ಎಲ್ಲದಕ್ಕೂ ವಿಲೇವಾರಿ ಮೂಲಕ ಪರಿಹಾರ ನೀಡಬೇಕು ಎಂದು ನಿರ್ದೇಶಿಸಿದರು.

Advertisement

ಜಿ. ಪಂ ಸಿಇಒ ಪ್ರಸನ್ನ ಎಚ್., ಎಸ್ ಪಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಮಮತಾದೇವಿ, ಉಪವಿಭಾಗ ಆಯುಕ್ತೆ ರಶ್ಮಿ ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶಿಲ್ದಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Goa: ಮೀಸಲಾತಿ ನೀಡಿ ಮಹಿಳೆಯರಿಗೆ ಗೌರವ ನೀಡುವ ಕೆಲಸ ಬಿಜೆಪಿ ಮಾಡಿದೆ: ಗೋವಾ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next