ಬೆಂಗಳೂರು: ವಿದೇಶಕ್ಕಿಂತ ಭಾರತದಲ್ಲಿಯೇ ಅಪಘಾತ ಪ್ರಮಾಣ ಜಾಸ್ತಿಯಿದೆ. ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಪಘಾತಗಳು ಆಗುತ್ತಿದೆ. ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಅಪಘಾತಗಳು ನಡೆಯುತ್ತಿದೆ. ಈ ಅಪಘಾತಗಳ ನೋವುಂಡವರಲ್ಲಿ ನಾನೂ ಒಬ್ಬ ಎಂದು ಸಾರಿಗೆ ಸಚಿವರೂ ಆಗಿರುದ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಸಾರಿಗೆ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಪಘಾತಗಳಿಂದ ತಮಗಾದ ಕಹಿ ಅನುಭವಗಳನ್ನು ಹೇಳಿಕೊಂಡರು.
ಇದನ್ನೂ ಓದಿ:ರಾಜ್ಯಸಭೆ ವಿರೋಧದ ಪಕ್ಷ ನಾಯಕ ಸ್ಥಾನಕ್ಕೆ ಖರ್ಗೆ, ಗುಲಾಂ ನಬಿ ಫೆ.15ಕ್ಕೆ ನಿವೃತ್ತಿ
ನಮ್ಮ ಚಿಕ್ಕಪ್ಪ ಬಸ್ ಅಪಘಾತದಲ್ಲಿ ತೀರಿ ಹೋದರು. ಮೂರು ತಿಂಗಳ ಹಿಂದೆ ನನ್ನ ವಾಹನಕ್ಕೂ ಅಪಘಾತವಾಗಿತ್ತು. ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿತ್ತು. ಲಾರಿ ಬಂದು ನನ್ನ ವಾಹನಕ್ಕೆ ಢಿಕ್ಕಿ ಹೊಡೆದಿತ್ತು. ವೆಹಿಕಲ್ ನೋಡಿದ ಬಳಿಕ ನಾನು ಉಳಿದಿದ್ದೆ ಆಶ್ಚರ್ಯ ಎಂದೆನಿಸಿತ್ತು ಎಂದು ಸವದಿ ಹೇಳಿಕೊಂಡರು.
ಎಲೆಕ್ಟಿಕಲ್ ವೆಹಿಕಲ್ ತೆಗೆದು ಕೊಳ್ಳುವವರಿಗೆ ರಸ್ತೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದೇವೆ. ಪರಿಸರ ಮಾಲಿನ್ಯ ಕಡಿಮೆ ಮಾಡಲು ಈ ನಿರ್ಧಾರ ಮಾಡಿದ್ದೇವೆ ಎಂದು ಲಕ್ಷ್ಮಣ ಸವದಿ ಹೇಳಿದರು.