ಧಾರವಾಡ: ಹಿರಿಯ ಕವಿ ನಾಡೋಜ ಚನ್ನವೀರ ಕಣವಿ,ಭಾಷಾ ವಿದ್ವಾಂಸ ಪಂಚಾಕ್ಷರಿ ಹಿರೇಮಠ ಅವರ ನಿವಾಸಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು. ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ ಹಿನ್ನೆಲೆ ಸಚಿವರು ಸಾಹಿತಿ ಕಣವಿ ಅವರ ಮನೆಗೆ ಭೇಟಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ 370 ಕಾಯಿದೆ ರದ್ದು ಮಾಡಿದ ಹಿನ್ನೆಲೆ ನಾವೆಲ್ಲ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಕಾಯಿದೆ ರದ್ಧತಿ ಹಾಗೂ ಒಂದು ರಾಷ್ಟ್ರ ಒಂದು ಧ್ವಜದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಿದ್ದೇವೆ ಎಂದರು.
ಹಿಂದಿ ಭಾಷೆ ವಿಚಾರವಾಗಿ ಅಮಿತ್ ಷಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಒಂದು ಭಾಷೆಯಾಗಿ ಹಿಂದಿ ಕಲಿಯಬೇಕು ಎಂದಿದ್ದಾರೆ ಹೀಗಾಗಿ ಆ ಬಗ್ಗೆ ಗೊಂದಲ ಬೇಡ ನಮ್ಮ ನಿಲುವು ಕನ್ನಡಕ್ಕೆ ಪ್ರಥಮ ಆದ್ಯತೆ ಇರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಡುಪಿ ಉಸ್ತುವಾರಿ ಕೈ ತಪ್ಪಿದೆ ಎನ್ನುವ ವಿಚಾರಕ್ಕೆ ಮಾತನಾಡಿದ ಅವರು, ಶಾಸಕರೆಲ್ಲ ಹೋಗಿ ಸಿಎಂ ಭೇಟಿ ಮಾಡಿದ್ದಾರೆ ಎನ್ನುವುದು ಹಿನ್ನೆಲೆ ಸ್ವಾಭಾವಿಕವಾಗಿ ತಮ್ಮ ಕ್ಷೇತ್ರದ ಬಗ್ಗೆ ಭೇಟಿ ಮಾಡುವುದು ರೂಢಿ ಆದರೆ ಏನು ಮಾಡಿದ್ದಾರೆ ಗೊತ್ತಿಲ್ಲ, ಇವತ್ತು ಹೋದ ನಂತರ ಎಲ್ಲವನ್ನು ನೋಡಿ ಸರಿ ಮಾಡ್ತೇವಿ. ದೊಡ್ಡ ಜಿಲ್ಲೆಯಾಗಿರುವ ಹಿನ್ನೆಲೆ ನನಗೆ ಒಂದೇ ಜಿಲ್ಲೆ ಕೊಟ್ಟಿರಬಹುದು. ಆ ಜಿಲ್ಲೆಯ ಶಾಸಕನಾದ ಕಾರಣ ದಕ್ಷಿಣ ಕನ್ನಡ ಕೊಟ್ಟಿದ್ದಾರೆ. ಕಾರ್ಯಕರ್ತನಾಗಿ ನನ್ನ ಕೆಲಸ ನಾನು ಮಾಡುವೆ ಎಂದು ಭರವಸೆ ನೀಡಿದರು.
ಸದ್ಯ 17 ಸಂಪುಟ ಆಗಿದೆ ಮುಂದೆ ವಿಸ್ತರಣೆಯಾದಾಗ ಮತ್ತೆ ಕೆಲವರಿಗೆ ಆದ್ಯತೆ ಕೊಡ್ತಾರೆ. ಸಿದ್ದರಾಮಯ್ಯ ಆಡಳಿತ ಪಕ್ಷದ ಲೋಪದೋಷ ನೋಡಿ ಟೀಕೆ ಮಾಡುವುದು ಸಹಜ ಅವರೇನು ಹೊಗಳ್ತಾರೆ ಅಂತಾ ನಾವು ಭಾವಿಸಿಲ್ಲ, ಅವರ ಟೀಕೆಗಳಿಗೆ ತಕ್ಕ ಉತ್ತರ ಕೊಡುವ ನಿಟ್ಟಿನಲ್ಲಿ ನಾವ ಕೆಲಸ ಮಾಡಿ ತೋರಿಸ್ತೇವಿ ಡಿಕೆಶಿ ಇಡಿ ವಿಚಾರ ಬಿಜೆಪಿಗೆ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದರು.