Advertisement

ಮಕ್ಕಳ ಶೈಕ್ಷಣಿಕ ಭವಿಷ್ಯ ಬಹಳ ಮುಖ್ಯ

05:04 PM Jun 04, 2022 | Team Udayavani |

ಮಳವಳ್ಳಿ: ಮಕ್ಕಳ ಶೈಕ್ಷಣಿಕ ಭವಿಷ್ಯದ ಬಹಳ ಮುಖ್ಯವಾಗಿದ್ದು, ಸದ್ಯದಲ್ಲಿಯೇ ಪಠ್ಯಪರಿಷ್ಕರಣೆ ವಿವಾದವನ್ನು ಸಿಎಂ ಬಸವರಾಜುಬೊಮ್ಮಯಿ ಅವರು ಬಗೆಹರಿಸಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

Advertisement

ಪಟ್ಟಣದ ಶಾಂತಿ ಶಿಕ್ಷಣ ಸಂಸ್ಥೆ ಮತ್ತು ಭಗವಾನ್‌ ಬುದ್ಧ ಶಿಕ್ಷಣ ಸಂಸ್ಥೆಗಳಲ್ಲಿ ದಕ್ಷಿಣಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ವಿ.ರವಿಶಂಕರ್‌ ಪರ ಮತಯಾಚನೆ ಮಾಡಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ಪಠ್ಯ ಪರಿಷ್ಕರಣೆಯಲ್ಲಿ ಪುಸ್ತಕ ಮುದ್ರಣ ಸಂಬಂಧ ಸಣ್ಣಪುಟ್ಟ ತಪ್ಪುಗಳಿದ್ದು ಹಾಗೂ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಅದನ್ನು ದೊಡ್ಡ ವಿವಾದ ಮಾಡುವ ಅಗತ್ಯವಿಲ್ಲ, ಅಲ್ಲದೇ, ಸಮಸ್ಯೆಯನ್ನು ಸದ್ಯದಲ್ಲಿಯೇ ಸಿಎಂ ಹಾಗೂ ಶಿಕ್ಷಣ ಸಚಿವರು ಬಗೆಹರಿಸಲಿದ್ದು, ಯಾವುದೇ ಕಾರಣಕ್ಕೂ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಲು ಬಿಡುವುದಿಲ್ಲ.ಸೂಕ್ತ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಕೆಲವೇ ಅಂತರದಲ್ಲಿ ಸೋಲು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳಿಗೆ ನಮ್ಮ ಅಭ್ಯರ್ಥಿಯಾದ ವೈ.ವಿ.ರವಿಶಂಕರ್‌ ಅವರನ್ನು ಹೊಲಿಕೆ ಮಾಡಿದರೆ ತುಂಬಾ ಉತ್ತಮರಾಗಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಕೆಲವೇ ಅಂತರದಲ್ಲಿ ಸೋತಿದ್ದರೂ ಮತದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಅವರು ಪದವೀಧರರ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ ಎಂದು ತಿಳಿಸಿದರು.

ಅವರ ಆಟ ನಡೆಯಲ್ಲ: ನಮ್ಮ ಅಭ್ಯರ್ಥಿ ಚುನಾವಣೆಯಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಲಿದ್ದು,ಜಿಲ್ಲೆಯಲ್ಲಿ ಅತಿಹೆಚ್ಚಿನ ಮತದಾರರಿದ್ದಾರೆ. ವೈ.ವಿ.ರವಿಶಂಕರ್‌ ಅವರು 40ವರ್ಷಗಳಿಂದ ಸೇವೆ ಮಾಡಿಕೊಂಡು ಬಂದಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ಅವರಂತೆ ಹಣವಂತರಲ್ಲ, ಚುನಾವಣೆಯಲ್ಲಿ ಹಣ ಕೆಲಸ ಮಾಡುವುದಿಲ್ಲ. ಸೇವೆಯೇಕೈಹಿಡಿಯುತ್ತದೆ. ಆನ್‌ಲೈನ್‌ ಮೂಲಕ ಮತದಾರರಿಗೆ ಹಣ ನೀಡಲು ವಿರೋಧಿಗಳು ಮುಂದಾಗಿದ್ದು, ಅವರ ಆಟ ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದರು.

Advertisement

ನಮ್ಮಲ್ಲಿ ಯಾವುದೇ ಗೊಂದಲವಿಲ್ಲ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರ ಹೆಸರಿನಲ್ಲಿ ಕೆಲವರು ತಪ್ಪು ಸಂದೇಶ ನೀಡುತ್ತಿದ್ದು, ಯಾವುದೇ ಕಾರಣಕ್ಕೂಅವರಿಗೆ ಅಸಮಾಧಾನವಾಗಿಲ್ಲ, ಅವರು ವಿಧಾನ ಪರಿಷತ್‌ ಟಿಕೆಟ್‌ ಕೇಳಿ ಅರ್ಜಿ ಹಾಕಿರಲಿಲ್ಲ, ಅವರಿಗೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ಭವಿಷ್ಯವಿದೆ. ಹಳೆಯ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಯ ವಿಚಾರದಲ್ಲಿ ಅಮಿತ್‌ ಶಾ ಅವರು ವಿಜಯೇಂದ್ರ ಅವರಿಗೆ ಹೆಚ್ಚಿನ ಜವಾಬ್ದಾರಿ ಯನ್ನು ನೀಡಿದ್ದೂ ಅಲ್ಲದೇ, ಸರ್ಕಾರದಲ್ಲೂ ಅವರಿಗೆ ಗೌರವವಿದೆ. ಇನ್ನೆರಡು ದಿನಗಳಲ್ಲಿಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪಅವರ ಜೊತೆ ವಿಜಯೇಂದ್ರ ಅವರು ಚುನಾವಣಾ ಪ್ರಚಾರ ಮಾಡಲಿದ್ದು, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ: ನಂತರ ಭಗವಾನ್‌ ಬುದ್ಧ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,ಅತಿಥಿ ಉಪನ್ಯಾಸಕರ ವೇತನವನ್ನು ನಮ್ಮಸರ್ಕಾರ ಹೆಚ್ಚಳ ಮಾಡಿದೆ. ಮತಗಳು ಬೇರೆಕಡೆ ಹೋಗದಂತೆ ಎಲ್ಲರೂ ಕಾರ್ಯನಿರ್ವಹಿಸುವ ಮೂಲಕ ನಮ್ಮ ಅಭ್ಯರ್ಥಿಯ ಗೆಲುವಿಗೆಮುಂದಾಗಬೇಕು ಎಂದು ಹೇಳಿದರು. ಮಾಜಿ ಸಚಿವ ಬಿ.ಸೋಮಶೇಖರ್‌ ಮಾತನಾಡಿದರು. ಶಾಂತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪುಟ್ಟರಾಜು ಅವರು ಸಚಿವ ಕೆ.ಸಿ.ನಾರಾಯಣ ಗೌಡರನ್ನು ಅಭಿನಂದಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್‌. ಕೃಷ್ಣ, ರೈತ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಯಮದೂರು ಸಿದ್ದರಾಜು,ಪುರಸಭೆ ಸದಸ್ಯರಾದ ರವಿ, ಜಗದೀಶ್‌, ರಾಜಣ್ಣ, ಮುಖಂಡರಾದ ಹಲಸಹಳ್ಳಿಅಶೋಕ್‌, ಕೆ.ಸಿ.ನಾಗೇಗೌಡ, ಮಹೇಶ್‌, ಕ್ಯಾತನಹಳ್ಳಿ ಅಶೋಕ್‌, ಕನ್ನಹಳ್ಳಿ ಪ್ರಸಾದ್‌, ತಾಲೂಕು ಘಟಕದ ಯುವ ಮೋರ್ಚಾ ಅಧ್ಯಕ್ಷ ಮೋಹನ್‌ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next