Advertisement

ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿದೆ, ವಿಶೇಷ ಕ್ರಮದ ಅವಶ್ಯಕತೆಯಿದೆ: ಸುಧಾಕರ್

01:06 PM Apr 18, 2021 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಬೆಂಗಳೂರಿಗೆ ವಿಶೇಷ ಕ್ರಮದ ಅವಶ್ಯಕತೆಯಿದೆ. ಇದರ ಅನಿವಾರ್ಯತೆ ಉದ್ಭವವಾಗಿದೆ ಎಂದು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಮುದಾಯಕ್ಕೆ ಹರಿಡಿದೆ. ಕೇಂದ್ರ ಸರ್ಕಾರ ಕೂಡಾ ಇದನ್ನು ಸ್ಪಷ್ಟಪಡಿಸಿದೆ. ನಮಗೂ ಇದರ ಅನುಭವ ಆಗಿದೆ ಎಂದರು.

ಐಸಿಯು ಬೆಡ್ ಕೊರತೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವ ಬೆಡ್ ಗಿಂತ ಹೆಚ್ಚು ರೋಗಿಗಳು ಬಂದರೆ ಐಸಿಯು ಬೆಡ್ ಸಮಸ್ಯೆ ಆಗವುದು ಸಹಜ. ಈಗಾಗಲೇ ‌ಝೋನಲ್ ವೈಸ್ ನೋಡಲ್ ಅಧಿಕಾರಿಗಳ‌ನ್ನು ನೇಮಕ ಮಾಡಿದ್ದೇವೆ. ನಿತ್ಯ ಐಸಿಯು ಬೆಡ್ ಹೆಚ್ಚಳಕ್ಕೆ ಕ್ರಮ ವಹಿಸುತ್ತಿದ್ದೇವೆ. ನಮ್ಮ ಜನರ ತಪ್ಪಿನಿಂದ ಇವತ್ತು ಇಷ್ಟು ಸೋಂಕು ಹೆಚ್ಚಳವಾಗಿದೆ. ನಮ್ಮಲ್ಲೂ ಕೆಲ ನ್ಯೂನತೆಯಿದೆ. ಅದನ್ನು ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಗಮನಿಸಿ: ಜೆಇಇ ಮುಖ್ಯ ಪರೀಕ್ಷೆ ಮುಂದೂಡಿಕೆ

ಸಿಎಂ ಬಿಎಸ್ ವೈ ಆರೋಗ್ಯದ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರ ಜೊತೆ ಮಾತಾಡಿದ್ದೇನೆ. ಇವತ್ತು ಆಸ್ಪತ್ರೆಗೆ ಭೇಟಿ ಕೊಡುತ್ತೇನೆ. ರಾಜ್ಯದ ವಿವರ ಅವರಿಗೆ ನೀಡುತ್ತೇನೆ. ಸಭೆ, ‌ಕೊರೊನಾ ಬಗ್ಗೆ ಮಾಹಿತಿ ಕೊಡಲು ಹೋಗುತ್ತೇನೆ. ತಜ್ಞರು ಕೊಟ್ಟ ವರದಿ ಬಗ್ಗೆ ಸಿಎಂ ಜೊತೆ ಮಾತಾಡಿ ಸಲಹೆ ತೆಗೆದುಕೊಳ್ಳುತ್ತೇನೆ. ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ಅವರೂ ಸಲಹೆ ಕೊಟ್ಟಿದ್ದಾರೆ. ಅದನ್ನು ಸಿಎಂ ಜೊತೆ ಮಾತಾಡುತ್ತೇನ ಎಂದು ಸುಧಾಕರ್ ಹೇಳಿದರು.

Advertisement

ಆಕ್ಸಿಜನ್ ಕೊರತೆ ಇಲ್ಲ: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಕೆಲ‌ವು ಖಾಸಗಿ ಆಸ್ಪತ್ರೆಯವರ ಬಳಿ ಕೊರತೆ ಆಗಿರಬಹುದು. ಆದರೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಖಾಸಗಿಯವರು ಹಣ ಪಾವತಿ ಮಾಡದೆ ಇರುವುದರಿಂದ ಅವರಿಗೆ ಆಕ್ಸಿಜನ್ ಸಿಕ್ಕಿರೋದಿಲ್ಲ. ಇದಕ್ಕೆ ಆಕ್ಸಿಜನ್ ಕೊರತೆ ಎನ್ನುವುದು ಸರಿಯಲ್ಲ. ನಾನು ಫನಾ ಅವರೆ ಜೊತೆ ಮಾತಾಡಿದ್ದೇನೆ. ಕಡಿಮೆ ಆಕ್ಸಿಜನ್ ಇರುವ ಕಡೆ ಜಂಬೂ ಆಕ್ಸಿಜನ್ ಕೊಟ್ಟಿದ್ದೇವೆ. ಆಕ್ಸಿಜನ್ ಕೊರತೆ ಇಲ್ಲ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.

800 ಮೆಟ್ರಿಕ್ ಟನ್ ಉತ್ಪಾದನೆ ಮಾಡುವ ಶಕ್ತಿ ನಮ್ಮಲ್ಲಿದೆ. ಈಗಾಗಲೇ ನಮಗೆ 300 ಮೆಟ್ರಿಕ್ ಟನ್ ಗೆ ಕೇಂದ್ರದಿಂದ ಅಲಾಟ್ ಆಗಿದೆ. ಇನ್ನು ಹೆಚ್ಚು ಆಕ್ಸಿಜನ್ ಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ನಮಗೆ ಈಗ 200 ಮೆಟ್ರಿಕ್ ಟನ್ ಆಕ್ಸಿಜನ್ ಬೇಕು. ನಮ್ಮ ಬಳಿ ಈಗ 300 ಮೆಟ್ರಿಕ್ ಟನ್ ಇದೆ. ಕೊರತೆ ಇಲ್ಲ ಎಂದರು.

ಇದನ್ನೂ ಓದಿ:ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ನಿಧನ

Advertisement

Udayavani is now on Telegram. Click here to join our channel and stay updated with the latest news.

Next