Advertisement

ಮೈಸೂರು: ವೈದ್ಯಕೀಯ ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

02:23 PM Sep 27, 2022 | Team Udayavani |

ಮೈಸೂರು: ಇದೇ ಮೊದಲ ಬಾರಿಗೆ ದಸರಾ ಮಹೋತ್ಸವ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಸೆ.27ರಿಂದ 9 ದಿನಗಳ ಕಾಲ ಏರ್ಪಡಿಸಿರುವ ವೈದ್ಯಕೀಯ ವಸ್ತು ಪ್ರದರ್ಶನವನ್ನು ಆರೋಗ್ಯ ಸಚಿವ ಡಾ.ಕೆ.‌ಸುಧಾಕರ್ ಉದ್ಘಾಟಿಸಿದರು.

Advertisement

ವಸ್ತು ಪ್ರದರ್ಶನದಲ್ಲಿ ದೇಹದ ರಚನೆ ಹೇಗಿರುತ್ತದೆ? ಕಾಯಿಲೆ ಬಂದಾಗ ಯಾವ ರೀತಿ ಇರುತ್ತದೆ? ಎನ್ನುವುದನ್ನು ಸಾಕ್ಷೀಕರಿಸುವ ಅಂಗಾಗಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು.

ಬಳಿಕ ಮಾತನಾಡಿದ ಅವರು ದಸರಾ ಮಹೋತ್ಸವ ಸಂದರ್ಭದಲ್ಲಿ ಮೊದಲ ಬಾರಿಗೆ ವೈದ್ಯಕೀಯ ವಸ್ತು ಪ್ರದರ್ಶನ ಆಯೋಜಿಸಲಾಗಿದೆ, ಸಾರ್ವಜನಿಕರು ವೀಕ್ಷಿಸಿ ಪ್ರಯೋಜನ ಪಡೆಯಬೇಕು. ಇದರಿಂದ ಜನ ಸಾಮನ್ಯರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಲಿದೆ ಎಂದರು.

ಇದನ್ನೂ ಓದಿ:ಮುಂದಿನದು ಭಯೋತ್ಪಾದಕರ ಬೆಂಬಲಿಗರು ರಾಷ್ಟ್ರಭಕ್ತರ ನಡುವಿನ ಚುನಾವಣೆ : ಕೋಟ

ಹಾಗೆಯೇ ಆರೋಗ್ಯ ಕಾಪಾಡುವಂತಹ ಪ್ರಮುಖ ಅಂಶಗಳನ್ನು ದೇಹದ ಅಂಗಾಂಗಗಳ ಮೂಲಕವೇ ವಿವರಿಸಲಾಗುತ್ತದೆ. ಇದಕ್ಕೆ ದೇಹ ದಾನದ ಪ್ರಯೋಜನಗಳನ್ನು ತಿಳಿಸಿಕೊಡಲಾಗುತ್ತದೆ ಎಂದು ವಿವರಿಸಿದರು.

Advertisement

ಆರೋಗ್ಯ ದಸರಾ ಎಂಬ ಆಲೋಚನೆ ಕೋವಿಡ್ ಎಂಬ ಸಂಕಷ್ಟದ ಕಾಲದಲ್ಲಿ ಅನುಭವಿಸಿದ ಸಮಸ್ಯೆ ಮತ್ತು ಸವಾಲುಗಳಿಂದ ಬಂದಿದೆ.  ಈ ಆರೋಗ್ಯ ದಸರಾ ಏರ್ಪಡಿಸಿ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next