Advertisement

ಕೊವ್ಯಾಕ್ಸಿನ್ ಲಸಿಕೆ ಪಡೆದ ಜನಪ್ರತಿನಿಧಿಗಳು

07:35 PM Mar 03, 2021 | Team Udayavani |

ಶಿವಮೊಗ್ಗ: ಕೇಂದ್ರ ಸರ್ಕಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಕೋ-ವ್ಯಾಕ್ಸಿನ್‌ ಲಸಿಕೆ ನೀಡಲು ಅಭಿಯಾನ ಶಿವಮೊಗ್ಗ ಜಿಲ್ಲೆಯಲ್ಲೂ ಪ್ರಾರಂಭವಾಗಿದ್ದು, ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮೀ ಈಶ್ವರಪ್ಪ, ಮಾಜಿ ಶಾಸಕರಾದ ಭಾನುಪ್ರಕಾಶ್‌, ಆರ್‌.ಎಸ್‌. ಎಸ್‌ ಮುಖಂಡರಾದ ಪಟ್ಟಾಭಿರಾಮ್‌, ಎ.ಜೆ. ರಾಮಚಂದ್ರ, ವಿಜಯೇಂದ್ರ ಸೂಳಿಕೆರೆ ಮೊದಲಾದವರು ಜಿಲ್ಲಾ ಆಯುರ್ವೇದಿಕ್‌ ಕಾಲೇಜಿನಲ್ಲಿ ಲಸಿಕೆಯನ್ನು ಪಡೆದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, 60 ವರ್ಷ ದಾಟಿದ ಎಲ್ಲಾ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮತ್ತು ಖಾಸಗೀ ಆಸ್ಪತ್ರೆಯಲ್ಲಿ 250 ರೂ.ಗಳನ್ನು ನೀಡಿ ಲಸಿಕೆ ಪಡೆಯಬಹುದಾಗಿದೆ. 45 ರಿಂದ 59 ವರ್ಷದೊಳಗಿನ ನಾಗರಿಕರಿಗೆಆರೋಗ್ಯ ಸಮಸ್ಯೆಯಿದ್ದಲ್ಲಿ ವೈದ್ಯರ ಪ್ರಮಾಣ ಪತ್ರವನ್ನು ನೀಡಿ ಪಡೆಯಬೇಕಾಗುತ್ತದೆ. ಇದಕ್ಕೆ ಆನ್‌ಲೈನ್‌ ಮೂಲಕ ಕೂಡ ನೋಂದಣಿ ಮಾಡಬಹುದು. ಸರ್ಕಾರ ಜಿಲ್ಲೆಯಲ್ಲಿ 18 ಕೇಂದ್ರಗಳನ್ನು ಗುರುತಿಸಿದ್ದು, ವಯಸ್ಸಿನ ದಾಖಲೆ ಪತ್ರ ನೀಡಿ ಪಡೆಯಬಹುದಾಗಿದೆ ಎಂದರು.

ಲಸಿಕೆ ಪಡೆಯುವಾಗ ಯಾವುದೇ ರೀತಿಯ ನೋವನ್ನು ನಾನು ಅನುಭವಿಸಿಲ್ಲ. ಭಯ ಪಡುವ ಅಗತ್ಯವಿಲ್ಲ. ದೇಶದ ವಿಜ್ಞಾನಿಗಳು ಕೊರೊನಾದಂತಹ ಮಹಾಮಾರಿಗೆ ಲಸಿಕೆಯನ್ನು ಕಂಡು ಹಿಡಿದಿದ್ದು, ಮೊದಲ ಲಸಿಕೆ ಪಡೆದ ನಂತರ 45 ದಿನಗಳಲ್ಲಿ ಇನ್ನೊಂದು ಲಸಿಕೆ ಪಡೆಯಬೇಕಾಗಿದ್ದು, ಲಸಿಕೆ ಪಡೆದ ನಂತರ ಸ್ಥಳದಲ್ಲೇ ಅರ್ಧ ಗಂಟೆ ವೈದ್ಯರ ನಿಗಾದಲ್ಲಿ ರಬೇಕಾಗುತ್ತದೆ. ಅಡ್ಡ ಪರಿಣಾಮಗಳ ಘಟನೆಗಳು ಬಹಳ ಕಮ್ಮಿ ಇದ್ದು, ಯಾರೂ ಕೂಡ ಲಸಿಕೆ ಪಡೆಯಲು ಹಿಂಜರಿಯಬೇಕಿಲ್ಲ. ನಾಗರೀಕರು ಲಸಿಕೆಯನ್ನು ಪಡೆದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಎಚ್‌.ಒ ಡಾ| ರಾಜೇಶ್‌ ಸುರಗೀಹಳ್ಳಿ, ಆರ್‌.ಸಿ.ಎಚ್‌.ಒ. ನಾಗರಾಜ್‌ ನಾಯ್ಕ, ಡಾ| ಶ್ರೀಧರ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next