Advertisement
ದೂರದ ಪ್ರದೇಶಗಳಿಂದ ಮಾಸಾಶನ ಸಹಿತ ಹಲವು ಉದ್ದೇಶಗಳಿಗಾಗಿ ಕಲಾವಿದರು ಕನ್ನಡ ಭವನಕ್ಕೆ ಭೇಟಿ ನೀಡುತ್ತಾರೆ.ಆದರೆ ಇವರಲ್ಲಿ ಹಲವರಿಗೆ ತಮಗೆ ಸಿಗುವ ಸವಲತ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಇಲಾಖೆಯ ಯಾವ ಅಧಿಕಾರಿಗಳನ್ನು ಭೇಟಿ ಮಾಡಬೇಕು ಎಂಬ ಬಗ್ಗೆ ತಿಳಿವಳಿಕೆ ಇರುವುದಿಲ್ಲ.ಇಂತಹ ಕಲಾವಿದರುಗಳಿಗೆ ಸಹಾಯವಾಣಿ ಕೇಂದ್ರ ಅಗತ್ಯ ನೆರವು ನೀಡಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಹಲವು ಪುಸ್ತಕಗಳು ಸಹಿತ 1ಲಕ್ಷದ 5 ಸಾವಿರ ಪುಸ್ತಕಗಳನ್ನು ಸಚಿವೆ ಜಯಮಾಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ|ಸತೀಶ್ ಕುಮಾರ ಎಸ್.ಹೊಸಮನಿ ಅವರಿಗೆ ಹಸ್ತಾಂತರಿಸಿದರು. ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐದು ವರ್ಷಗಳಷ್ಟು ಹಳೆಯದಾದ ವಿವಿಧ ಲೇಖಕರ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಇಲಾಖೆ ವ್ಯಾಪ್ತಿಯ ಪ್ರಾಧಿಕಾರಗಳಲ್ಲಿರುವ ಎಲ್ಲಾ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ನೀಡುವ ಭರವಸೆಯನ್ನು ಸಚಿವೆ ಜಯಾಮಾಲಾ ನೀಡಿದರು.