Advertisement

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪುನರ್ ಆರಂಭಿಸಲು ಸಚಿವರ ಸೂಚನೆ

09:44 AM Sep 04, 2019 | Team Udayavani |

ಬೆಂಗಳೂರು : ಶಿಕ್ಷರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನರ್ ಆರಂಭಿಸಲು ಸಚಿವ ಸುರೇಶ್ ಕುಮಾರ್ ಸೂಚನೆ.
ಕಡ್ಡಾಯ ವರ್ಗಾವಣೆ ಎಂಬ ಪದವನ್ನು ಮುಂದಿನ ದಿನದಲ್ಲಿ ಬದಲಾಯಿಸಲು ತೀರ್ಮಾನ. ಕಡ್ಡಾಯ ವರ್ಗಾವಣೆ ಎಂಬ ಪದವೇ ಗಾಬರಿ ಹುಟ್ಟಿಸಿತ್ತದೆ.

Advertisement

ಕಡ್ಡಾಯ ವರ್ಗಾವಣೆಗೆ ಪ್ರಾಥಮಿಕ ಶಾಲೆಯಿಂದ 4084 ಶಿಕ್ಷಕರಲ್ಲಿ 713 ಹುದ್ದೆ, ಪ್ರೌಢಶಾಲೆಗೆ 1234 ಶಿಕ್ಷಕರಲ್ಲಿ 345 ಹುದ್ದೆ ಕೊರತೆ ಇದೆ. 1058 ಶಿಕ್ಷಕರು ವರ್ಗಾವಣೆ ಆಗಿಲ್ಲ. 4260 ಶಿಕ್ಷಕರು ವರ್ಗಾವಣೆ ಆಗಿದ್ದಾರೆ.

ಕಡ್ಡಾಯ ವರ್ಗಾವಣೆಗೆ ಕೋರ್ಟನಲ್ಲಿ ತಡೆ ನೀಡಿಲ್ಲ. 2007ನಿಯಮದಂತೆ ಕಡ್ಡಾಯ ವರ್ಗಾವಣೆ ಮಾಡಲಿದ್ದೇವೆ. ಈವರೆಗೆ 16066 ಶಿಕ್ಷಕರ ವರ್ಗಾವಣೆ ಆಗಿದೆ.

4260 ಹೆಚ್ಚುವರಿ, 3777 ಕೋರಿಕೆ ವರ್ಗಾವಣೆ ಆಗಿದೆ. ಅಂತರ್ ಘಟಕ ವರ್ಗಾವಣಿಯ 14076 ಅರ್ಜಿ ಪರಿಶೀಲನಾ ಹಂತದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next