Advertisement
ಜಿಲ್ಲೆಯಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲದಿದ್ದರೂ, ಸಂಭವನೀಯ ಕೋವಿಡ್ 3ನೇ ಅಲೆ ತಡೆಗಟ್ಟಿ, ಸೋಂಕನ್ನು ಸಮರ್ಪಕವಾಗಿನಿರ್ವಹಣೆ ಮಾಡುವತ್ತ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕಿದೆ.
ಯಾಗಿ ಮುಂದುವರಿಯಲಿದ್ದು, 3ನೇ ಅಲೆ ತಡೆ ಮತ್ತು ನಿರ್ವಹಣೆಯೇ ಅವರ ಮುಂದಿರುವ ದೊಡ್ಡ ಸವಾಲು. ಸಚಿವ ಎಸ್.ಟಿ. ಸೋಮಶೇಖರ್ ಈ ಹಿಂದೆಯೂ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಆದರೆ, ಕೋವಿಡ್ 2ನೇ ಅಲೆ ಸಂದರ್ಭ ಹಿಂದಿನ ಜಿಲ್ಲಾಧಿಕಾರಿಯ ಕೆಲ ನಿರ್ಧಾರಗಳು ಹಾಗೂ ಅವರ ವೈಫಲ್ಯದಿಂದ ಸೋಂಕು ಹರಡುವಿಕೆ ನಿಯಂತ್ರಣ ತಪ್ಪಿ, ಸಮುದಾಯಕ್ಕೆ ಹರಡಿದ್ದಲ್ಲದೇ 2 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗುವಂತಾಯಿತು. ಇಂತಹ ಕಠಿಣ ಸಂದರ್ಭದಲ್ಲೂ ಎದೆಗುಂದದೆ ಇತರೆ ಅಧಿಕಾರಿಗಳ ನೆರವಿನೊಂದಿಗೆ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದ ಸಚಿವ ಸೋಮಶೇಖರ್, ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಹಾಗೂ ಆಕ್ಸಿಜನ್ ಸಮಸ್ಯೆ ಗಂಭೀರ ಪರಿಸ್ಥಿತಿಗೆ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಅಂತಹದ್ದೆ ಪರಿಸ್ಥಿತಿಯನ್ನು ಸಂಭವನೀಯ ಕೋವಿಡ್ 3 ಅಲೆ ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಸೋಂಕು ಹರಡದಂತೆಕೈಗೊಳ್ಳಬೇಕಾದ ಮುಂಜಾಗ್ರತಾಕ್ರಮಗಳು, ಸೋಂಕಿತರ ಚಿಕಿತ್ಸೆಗೆ ಅಣಿ ಮಾಡಿಕೊಳ್ಳುವುದು ಸೇರಿದಂತೆ ಸಮರೋಪಾದಿಯಲ್ಲಿ 3ನೇ ಅಲೆ ತಡೆ ಮತ್ತು ನಿರ್ವಹಣೆಗೆ ಸಿದ್ಧತೆ ನಡೆಸಬೇಕಿದೆ.
Related Articles
ಅಂತಾರಾಜ್ಯ ಗಡಿಗಳಲ್ಲಿ ಭದ್ರತೆ ಹೆಚ್ಚಿಸಿ, ಜನರ ಓಡಾಟದ ಮೇಲೆ ನಿಗಾ ಇರಿಸಲಾಗಿದೆ. ಆದರೆ, ನಿತ್ಯ 20 ಸಾವಿರಕ್ಕೂ ಹೆಚ್ಚು ಮಂದಿ
ಮೈಸೂರಿಗೆ ಭೇಟಿ ನೀಡುತ್ತಿರುವ ಈ ಹೊತ್ತಿನಲ್ಲಿ ಪ್ರವಾಸಿಗರು, ಹೊರ ರಾಜ್ಯಗಳಿಂದ ಬರುವವರ ಮೇಲೆ ಮತ್ತಷ್ಟು ಕಟ್ಟೆಚ್ಚರ ವಹಿಸಬೇಕಿದೆ.
Advertisement
ಈ ನಿಟ್ಟಿನಲ್ಲಿ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬರುತ್ತಿರುವ ಸೋಮಶೇಖರ್ ಅವರು, ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಅಖಾಡಕ್ಕಿಳಿಯ ಬೇಕಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಜೊತೆಗೆ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸೋಂಕು ನಿಯಂತ್ರಿಸಲು ಯೋಜನೆ ರೂಪಿಸಬೇಕಿದೆ.
2ನೇ ಅಲೆಯಲ್ಲಿ ಕಲಿತ ಪಾಠ 3ನೇ ಅಲೆ ತಡೆಗೆ ನೆರವಾಗಲಿಜಿಲ್ಲೆಯಲ್ಲಿ 2ನೇ ಅಲೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ಜನರನ್ನುಕಾಡಿತ್ತು. ಪ್ರತಿದಿನ 2 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿ, ಆಕ್ಸಿಜನ್, ಐಸಿಯು ಬೆಡ್, ಆಂಬುಲೆನ್ಸ್ ಗೂ ಪರದಾಡುವಂತಾಗಿತ್ತು. ಸಕಾಲದಲ್ಲಿ ಚಿಕಿತ್ಸೆ ಸಿಗದೇ ನಿತ್ಯ20-30 ಮಂದಿ ಸಾವನ್ನಪ್ಪುತ್ತಿದ್ದರು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲೂ (ಪಿಎಚ್‌ಎಸ್)ಕೋವಿಡ್ ಮಿತ್ರ ಕೇಂದ್ರಗಳನ್ನು ತೆರೆದು ಚಿಕಿತ್ಸೆ, ತಪಾಸಣೆ ವ್ಯವಸ್ಥೆ ಮಾಡಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿಪಿಸಿಆರ್ ಟೆಸ್ಟ್‌ಗಳನ್ನು ಮಾಡಲಿಲ್ಲ. ಹೀಗಾಗಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು
ಗುರುತಿಸಲು ಆಗಲಿಲ್ಲ. ಇದರಿಂದ ಸೋಂಕಿನ ಸರಪಳಿಯನ್ನು ತಂಡರಿಸಲು ಸಾಧ್ಯವಾಗಲಿಲ್ಲ. ದಿನೆ ದಿನೇ ಏರುಗತಿಯಲ್ಲಿ ಸಾಗುತ್ತಾ ಸೋಂಕಿನ ಸಂಖ್ಯೆ2 ಸಾವಿರ ಸಾಗುತ್ತಾ ಗರಿಷ್ಠ 2,700ಕ್ಕೆ ತಲುಪಿತ್ತು.ಕೋವಿಡ್ ಪಾಸಿಟಿವಿಟಿ ಶೇ.55ರಷ್ಟು ಏರಿಕೆಯಾಗಿ ಹಳ್ಳಿ ಹಳ್ಳಿಗಳಲ್ಲೂ ಕೋವಿಡ್ ಆವರಿಸಿಕೊಂಡಿತ್ತು. ಜ್ವರ, ಶೀತ,ಕೆಮ್ಮು ಸೇರಿದಂತೆ ಸೋಂಕಿನ ಲಕ್ಷಣ ಕಂಡರೂ ಕೋವಿಡ್ ಮಿತ್ರ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಿ ಅವರನ್ನು ಮನೆಗೆಕಳುಹಿಸಲಾಗುತ್ತಿತ್ತು. ಹೀಗಾಗಿ ಬಹುತೇಕಕಡೆ ಮನೆ ಮಂದಿಯೆಲ್ಲ ಸೋಂಕಿಗೆ ತುತ್ತಾಗುವಂತಾಯಿತು. ಬಹುತೇಕ ಸೋಂಕಿತರಿಗೆ ಹೋಮ್ ಐಸೋಲೇಷನ್ ವ್ಯವಸ್ಥೆ (ಮನೆ ಆರೈಕೆ)ಕಲ್ಪಿಸಲಾಗಿತ್ತು. ಇಲ್ಲಿ ಸರಿಯಾಗಿ ನಿಯಮಗಳು ಪಾಲನೆಯಾಗಲಿಲ್ಲ.ಕಡೆಗೆ ಹಳ್ಳಿಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದಾಗ ಪೊಲೀಸರನ್ನು ಬಳಸಿಕೊಂಡು ಮನೆ ಆರೈಕೆಯಲ್ಲಿದ್ದ ಸೋಂಕಿತರನ್ನು ಬಲವಂತವಾಗಿ ಕೋವಿಡ್‌ಕೇರ್ ಸೆಂಟರ್‌ಗಳಿಗೆ ದಾಖಲಿಸಲಾಯಿತು. ಈ ಅವ್ಯವಸ್ಥೆ ಮರುಕಳುಹಿಸದಂತೆ ನೋಡಿಕೊಳ್ಳಬೇಕಿದೆ. ಸಚಿವರು ಕೈಗೊಳ್ಳಬೇಕಿರುವ ತುರ್ತು ಕ್ರಮಗಳು
ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಲಸಿಕೆ ವಿತರಣೆ ಆಗುವಂತೆ ನೋಡಿಕೊಳ್ಳುವುದು, ಗ್ರಾಮೀಣ ಭಾಗದಲ್ಲಿ ಕೋವಿಡ್‌ಟೆಸ್ಟ್ ಹೆಚ್ಚಿಸುವುದು, ಮಕ್ಕಳ ಹಾರೈಕೆಗೆ ವಿಶೇಷ ತಂಡವನ್ನು ತರಬೇತು ಮಾಡುವುದು, ಸೋಂಕಿಗೆ ತುತ್ತಾದ ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ಚಿಕಿತ್ಸಾ ವಾರ್ಡ್ ತೆರೆಯುವುದು, ಜನರ ಅನಗತ್ಯಓಡಾಟಕ್ಕೆಬ್ರೇಕ್ ಹಾಕುವುದು, ವಾಣಿಜ್ಯ ಕೇಂದ್ರ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು, ಕೇರಳ ಗಡಿಭಾಗದಲ್ಲಿ ಹೆಚ್ಚಿನ ನಿಗಾ ಇರುವುದು ಸೇರಿದಂತೆ ಹಲವು ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವ ಮೂಲಕ ಮೈಸೂರು ಜಿಲ್ಲೆಯನ್ನು ಸೋಂಕಿನಿಂದ ಪಾರು ಮಾಡಬೇಕಿದೆ ಜಿಲ್ಲೆಯಲ್ಲಿ ಹೇಗಿದೆ ಸದ್ಯದ ಪರಿಸ್ಥಿತಿ?
ಪ್ರಸ್ತುತ ಜಿಲ್ಲೆಯಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಿದ್ದರೂ, ನಿತ್ಯ 100 ರಿಂದ 150 ಪ್ರಕರಣಗಳು ವರದಿಯಾಗುತ್ತಿದೆ. ಹಾಗೆಯೇ 2ರಿಂದ 5 ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆಬಂದಿದ್ದರೂ, ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಲಸಿಕೆ ವಿತರಣೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದು, ಜಿಲ್ಲೆಯಲ್ಲಿ ಇದುವರೆಗೂ 17ಲಕ್ಷಕ್ಕೂ ಅಧಿಕ ಡೋಸ್ ನೀಡಲಾಗಿದೆ. 2ನೇ ಡೋಸ್ ನೀಡಲು ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ಪೂರೈಕೆ ಮಾಡಬೇಕಿದೆ. -ಸತೀಶ್ ದೇಪುರ