Advertisement

ತಮಿಳುನಾಡಿಗೆ ಹೊಗೇನಕಲ್‌ ನಲ್ಲಿ ಯೋಜನೆ ಮಾಡಲು ಬಿಡುವುದಿಲ್ಲ: ಕಾರಜೋಳ

01:19 PM Jan 21, 2022 | Team Udayavani |

ಬೆಂಗಳೂರು: ಯಾವುದೇ ಯೋಜನೆಯನ್ನು ಜಂಟಿ ಗಡಿ ಪ್ರದೇಶದಲ್ಲಿ ಕೈಗೊಳ್ಳುವಂತಿಲ್ಲ. ನಾವು ತಮಿಳುನಾಡಿಗೆ ಹೊಗೇನಕಲ್ ಎರಡನೇ ಹಂತದ ಯೋಜನೆ ಜಾರಿ ಮಾಡಲು ಬಿಡುವುದಿಲ್ಲ ಎಂದು ಜಲ ಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಗೇನಕಲ್ ಎರಡನೇ ಹಂತದ ಯೋಜನೆ ಅನುಷ್ಠಾನ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಹೇಳಿಕೆಗೆ ಗೋವಿಂದ ಕಾರಜೋಳ ವಿರೋಧ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಂಗಳೂರು: ಹಣಕ್ಕಾಗಿ ಜ್ಯೋತಿಷಿಯೊಬ್ಬರ ಹನಿ ಟ್ರ್ಯಾಪ್ ಮಾಡಿದ್ದ ದಂಪತಿಗಳ ಬಂಧನ 

ತಮಿಳುನಾಡು ಮುಖ್ಯಮಂತ್ರಿಯವರು ಹೊಗೇನಕಲ್ ಯೋಜನೆ 2ನೇ ಹಂತವನ್ನು ಕೈಗೆತ್ತಿಕೊಳ್ಳಲು 4,600 ಕೋಟಿ ವೆಚ್ಚದ ಡಿ.ಪಿ.ಆರ್. (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವುದಾಗಿ ಘೋಷಿಸಿರುವುದು ಪತ್ರಿಕಾ ವರದಿಯ ಮೂಲಕ ಗಮನಕ್ಕೆ ಬಂದಿದೆ. ಕಾವೇರಿ ಕಣಿವೆಯಲ್ಲಿ ನ್ಯಾಯಾಧಿಕರಣ ಹಾಗೂ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳಲ್ಲಿನ ನೀರಿನ ಹಂಚಿಕೆಗಳ ಅನ್ವಯವಾಗಿ ತಮಿಳುನಾಡು ರಾಜ್ಯವು ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ, ಸದರಿ ಯೋಜನೆಯು ವಿವರಗಳನ್ನು ನ್ಯಾಯಾಧಿಕರಣ ಅಥವಾ ಸರ್ವೋಚ್ಛ ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸದೇ ಇರುವ ತಮಿಳುನಾಡಿನ ಯಾವುದೇ ಯೋಜನೆಯನ್ನು ಕರ್ನಾಟಕ ಸರ್ಕಾರ ವಿರೋಧಿಸುತ್ತದೆ ಎಂದರು.

ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಎಲ್ಲಾ ಕಾನೂನಾತ್ಮಕ ಕ್ರಮಗಳ ಮೂಲಕ ಆಕ್ಷೇಪಿಸಲಿದೆ. ತಮಿಳುನಾಡು ಪ್ರಕಟಿಸಿರುವ ಯೋಜನೆ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳ ಭೌಗೋಳಿಕ ವ್ಯಾಪ್ತಿಯಲ್ಲಿ ಇರುವುದರಿಂದ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ವಿವಿಧ ಆಯಾಮಗಳಲ್ಲಿ ಹಾಗೂ ಕಾನೂನಾತ್ಮಕ ಪರಿಶೀಲನೆಗೆ ಒಳಪಡಬೇಕಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next