ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೊಮ್ಮನಹಳ್ಳಿ ವಲಯದಲ್ಲಿನ ಕೋನೇನ ಅಗ್ರಹಾರ ಕೆರೆಯ ಸಮಗ್ರ ಅಭಿವೃದ್ಯ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಿದ್ದಾರೆ. ತಮ್ಮ ಸಂಸದರ ನಿಯಿಂದ ಕೆರೆಯ ಸಮಗ್ರ ಅಭಿವೃದ್ಗೆ ಹಣಕಾಸು ನೆರವು ನೀಡಲು ತೀರ್ಮಾನಿಸಿರುವ ಅವರು ಶುಕ್ರವಾರ ಈ ಕುರಿತು ಬಿಬಿಎಂಪಿ ಅಕಾರಿಗಳೊಂದಿಗೆ ಸಭೆ ನಡೆಸಿದರು.
ಕೆರೆಯ ಸದ್ಯದ ಪರಿಸ್ಥಿತಿ, ಕೈಗೊಳ್ಳಬೇಕಾದ ಅಭಿವೃದ್ ಕಾರ್ಯಕ್ರಮಗಳು ಮತ್ತು ಅಭಿವೃದ್ ಕಾಮಗಾರಿಗಳಿಗೆ ತಗಲುವ ವೆಚ್ಚದ ಕುರಿತಂತೆ ಮಾಹಿತಿ ಪಡೆದರು. ನಗರದ ಕೆರೆಗಳನ್ನು ಉಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಕೈಗೊಂಡಿವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಕಾರಿಗಳು ಮುಂದಾಗಬೇಕು ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಆಡಳಿತಗಳು ಕೆರೆಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ನಗರದ ಜಲಮೂಲಗಳನ್ನು ಉಳಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಸಂಸದರ ನಿಯಿಂದ ಕೋನೇನ ಅಗ್ರಹಾರ ಕೆರೆಯನ್ನು ಸಮಗ್ರ ಅಭಿವೃದ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಎಂದು ಹೇಳಲಾಗಿದೆ.
ಇಂದು ಕೆರೆಗೆ ಸಚಿವ ಭೇಟಿ: ಸಭೆಯಲ್ಲಿ ಕೋನೇನ ಅಗ್ರಹಾರ ಕೆರೆಗೆ ಸಂಬಂಸಿದ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್, ಕೆರೆಯ ಪರಿಸ್ಥಿತಿಯನ್ನು ಖುದ್ದು ಪರಿಶೀಲನೆ ನಡೆಸಲು ತೀರ್ಮಾನಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಬಿಬಿಎಂಪಿ ಅಕಾರಿಗಳೊಂದಿಗೆ ಕರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬೊಮ್ಮನಹಳ್ಳಿ ವಲಯದ ಕೋನೇನ ಅಗ್ರಹಾರ ಕೆರೆಯನ್ನು ತಮ್ಮ ಸಂಸದರ ನಿಯಿಂದ ಅಭಿವೃದ್ಪಡಿಸಲು ಮುಂದಾಗಿದ್ದಾರೆ. ಕೆರೆಯ ಸಮಗ್ರ ಅಭಿವೃದ್ಗೆ ಸುಮಾರು 2 ಕೋಟಿ ವೆಚ್ಚವಾಗಲಿದ್ದು, ಸಂಸದರ ನಿಯಿಂದ ಅಭಿವೃದ್ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ಸಚಿವರ ಈ ನಿರ್ಧಾರ ಸ್ವಾಗತಾರ್ಹ.
-ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು