Advertisement
ರಾಜ್ಯ ಸರಕಾರದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಕಾಸರಗೋಡು ಜಿಲ್ಲೆ ರೂಪೀಕರಣಗೊಂಡು 34ನೇ ವರ್ಷದ ಸಂದರ್ಭದಲ್ಲಿ ಕಾಸರಗೋಡು ಕಲೆಕ್ಟರೇಟ್‌ನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಈಗಾಗಲೇ ಕೋಟಿಗಟ್ಟಲೆ ರೂಪಾಯಿ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ. ಅಭಿವೃದ್ಧಿಯಾಗದ ವಲಯಗಳಿಗೆ ಪ್ರತ್ಯೇಕ ವಿಶೇಷ ಆದ್ಯತೆ ನೀಡಲಾಗುವುದು. ಕೈಗಾರಿಕೆಯನ್ನು ಆರಂಭಿಸಲು ಅಡ್ಡಿಯಾ
ಗುವ ಧೋರಣೆಗಳನ್ನು ನೀಗಿಸಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ಮತ್ತಷ್ಟು ಯೋಜನೆಗಳು ಲಭಿಸುವಂತೆ ಮಾಡಲಾಗು ವುದು ಎಂದರು. ಕಾಸರಗೋಡು ಸಂಸದ ಪಿ. ಕರುಣಾಕರನ್, ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಂತಾದವರು ಶುಭಹಾರೈಸಿದರು. ಕಾಸರಗೋಡಿನ ಅನಿವಾಸಿ ಸಮೂಹ ಅಭಿವೃದ್ಧಿ ಸಾಧ್ಯತೆ ಎಂಬ ವಿಷಯದಲ್ಲಿ ನೋರ್ಕಾ ಮಾಜಿ ಸಿಇಒ ಕೆ.ಟಿ.ಬಾಲಕೃಷ್ಣನ್, ಆಹಾರ ಸಂಸ್ಕರಣಾ ವಲಯದಲ್ಲಿ ಕೈಗಾರಿಕೆಗಳ ಸಾಧ್ಯತೆ ಎಂಬ ವಿಚಾರದಲ್ಲಿ ಕೇರಳ ದಿನೇಶ್ ಬೀಡಿ ಸಂಸ್ಥೆಯ ಅಧ್ಯಕ್ಷ ಸಿ.ರಾಜನ್, ಪ್ರವಾಸೋದ್ಯಮಗಳ ಸಾಧ್ಯತೆಗಳ ಕುರಿತು ಬಿಆರ್‌ಡಿಸಿ ಎಂಡಿ ಟಿ.ಕೆ.ಮನ್ಸೂರ್, ಉನ್ನತ ಶಿಕ್ಷಣ ವಲಯ ಎಂಬ ವಿಷಯದಲ್ಲಿ ಕೇರಳ ಕೇಂದ್ರ ವಿಶ್ವವಿದ್ಯಾಲಯ ಉಪಕುಲಪತಿ ಡಾ| ಪ್ರೊ| ಜಿ.ಗೋಪಕುಮಾರ್ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು ಸ್ವಾಗತಿಸಿ, ಜಿಲ್ಲಾ ವಾರ್ತಾಧಿಕಾರಿ ಇ.ವಿ.ಸುಗತನ್ ವಂದಿಸಿದರು. ಜಿಲ್ಲೆಯ ಅಭಿವೃದ್ಧಿಗೆ ವಿವಿಧ ಸೂತ್ರ
ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಪ್ಯಾಕೇಜ್‌ಗಳ ಅನುಷ್ಠಾನ ಅಗತ್ಯ. ಅಲ್ಲದೆ ಹಲವು ಸೂತ್ರಗಳನ್ನು ರೂಪಿಸಿ ಅದರಂತೆ ಮುಂದುವರಿಯಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ಶಿಕ್ಷಣ, ಉದ್ಯೋಗ, ಕೃಷಿ, ಕೈಗಾರಿಕೆ ಅಲ್ಲದೆ ಉದ್ಯೋಗ ಸಂಬಂಧಿತ ಎಲ್ಲಾ ವಲಯಗಳನ್ನು ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಬೇಕು. ಜಿಲ್ಲಾ ಪ್ರಗತಿಗೆ ಜನರ ಸಹಭಾಗಿತ್ವವೂ ಅಷ್ಟೇ ಆವಶ್ಯಕವಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚೆಚ್ಚು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಲೆನಾಡು ಹೆದ್ದಾರಿಯನ್ನು ಅತಿ ಶೀಘ್ರದಲ್ಲಿ ಪೂರ್ತಿಗೊಳಿಸಬೇಕು. ಜಿಲ್ಲೆಯಲ್ಲಿ ಗಲಭೆ, ಹಿಂಸಾಚಾರ ಇತ್ಯಾದಿ ನಡೆಯದಂತೆ ಗಮನಿಸಬೇಕು. ಎಲ್ಲರಿಗೂ ಭೂಮಿ ಮತ್ತು ಮನೆ ಎಂಬ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು.