ನೆಲಮಂಗಲ: ಕುರುಬ ಸಮುದಾಯ ಸೇರಿದಂತೆ ರಾಜ್ಯದ ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡಲು ಮುಖ್ಯಮಂತ್ರಿ ಗಳಿಂದ ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು.
ಬೆಂಗಳೂರು ಉತ್ತರ ತಾಲೂಕಿನ ಮಾದವಾರದ ಬಿಐಇಸಿಯಲ್ಲಿ ಫೆ.7ರಂದು ನಡೆಯಲಿರುವ ಬೃಹತ್ ಸಮಾವೇಶದ ಸ್ಥಳ ಪರಿಶೀ ಲನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿsದರು. ಏಕಾಏಕಿ ಎಸ್‌ಟಿ ಮೀಸಲಾತಿ ನೀಡುವುದಾಗಿ ಘೋಷಣೆ ಮಾಡಲು ಬರುವುದಿಲ್ಲ. ಕುಲಶಾಸ್ತ್ರ, ಜನಜಾಗೃತಿ ಜತೆ ದಾಖಲೆ ನೀಡುವ ಮೂಲಕ ವ್ಯವಸ್ಥಿತವಾಗಿ ಸಂವಿಧಾನ ಬದ್ಧವಾಗಿ ಎಸ್‌ಟಿ ಮೀಸ ಲಾತಿ ಪಡೆಬೇಕು. ಈ ಕೆಲಸ ಮಾಡುತ್ತೇವೆ. ಕೇಂದ್ರಕ್ಕೆ ಮನವಿ ಮಾಡಿ ಸಂಸತ್ತಿನ ಗಮನಕ್ಕೆ ತರುತ್ತೇವೆ ಎಂದರು.
ಹಿಂದೂ ಸಮಾಜದಲ್ಲಿ ಕುರುಬರಿಗೆ ಎಸ್‌ಟಿ ಮೀಸಲು ಸಿಕ್ಕರೆ ನ್ಯಾಯಸಿಗಲಿದ್ದು, ಸ್ವಾಮೀಜಿಯವರಿಂದ ಆರಂಭವಾಗಿರುವ ಹೋರಾಟ ನ್ಯಾಯ ಸಿಗುವವರೆಗೂ ನಿಲ್ಲುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರು.
ಇದನ್ನೂ ಓದಿ :ಶೇ.50ರಷ್ಟು ಅತಿಥಿ ಉಪನ್ಯಾಸಕರಿಗೆ ಕೋಕ್
ಕುರುಬರ ಶಕ್ತಿ ಪ್ರದರ್ಶನ : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಹು ದೊಡ್ಡ ಕುರುಬರ ಶಕ್ತಿ ಪ್ರದರ್ಶನವಾಗುತ್ತಿದ್ದು, ಎಸ್‌ಟಿ ಸಿಗು ವ ವರೆಗೂ ಹೋರಾಟ ನಿರಂತರ. ಹಿಂದೂ ಸಮಾಜದಲ್ಲಿ ಕುರುಬರಿಗೆ ಎಸ್‌ಟಿ ಮೀಸಲು ಸಿಕ್ಕರೆ ನ್ಯಾಯ ಸಿಗಲಿದ್ದು, ಸ್ವಾಮೀಜಿ ಯವರಿಂದ ಆರಂಭವಾಗಿರುವ ಹೋರಾಟ ನ್ಯಾಯ ಸಿಗುವವರೆಗೂ ನಿಲ್ಲುವುದಿಲ್ಲ. ಈ ವಿಚಾರವಾಗಿ 60ಲಕ್ಷ ಕುರುಬ ಸಮುದಾಯ ಜನರು ಒಟ್ಟಾಗಿ ಇರಲಿ ದ್ದೇವೆ ಎಂದರು.