Advertisement

ಸಚಿವ ಈಶ್ವರಪ್ಪಗೆ ಘೇರಾವ್‌: ಗುತ್ತಿಗೆದಾರ ವಿರುದ್ದ ಕ್ರಮಕ್ಕೆ ಆಗ್ರಹ

11:23 AM Oct 21, 2021 | Team Udayavani |

ಶಹಾಬಾದ: ನಗರದಿಂದ ತೊನಸನಹಳ್ಳಿ (ಎಸ್‌) ಗ್ರಾಮದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಹೋಗುವಾಗ ನಗರದ ಕನಕ ವೃತ್ತದಲ್ಲಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಸಚಿವರಾದ ಕೆ.ಎಸ್‌.ಈಶ್ವರಪ್ಪನ ಅವರಿಗೆ ಘೇರಾವ್‌ ಹಾಕಿ ನಗರದ ಬಸವೇಶ್ವರ ವೃತ್ತದಿಂದ ಮರಗೋಳ ಕಾಲೇಜಿನವರೆಗೆ ನಡೆದ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು, ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಕೇವಲ ಅರ್ಧ ಕಿಮೀ ರಸ್ತೆ ನಿರ್ಮಾಣಕ್ಕೆ ಸುಮಾರು 5 ಕೋಟಿ ರೂ. ಅನುದಾನ ಒದಗಿಸಿದರೂ ಗುತ್ತಿಗೆದಾರ ಸಂಪೂರ್ಣ ಕಳಪೆ ಕಾಮಗಾರಿ ಮಾಡಿದ್ದಾನೆ. ಅಲ್ಲದೇ ಡಾಂಬರೀಕರಣ ಮಾಡಿದ ದಿನವೇ ಡಾಂಬರ್‌ ಕಿತ್ತು ಹೋಗಿದೆ. ರಸ್ತೆಯಲ್ಲೂ ನೂರಾರು ತೆಗ್ಗು ಗುಂಡಿಗಳಾಗಿವೆ. ರಸ್ತೆ ಎಂಬುದೇ ಮಾಯವಾಗಿದೆ. ಆ ರಸ್ತೆಗೆ ಈಗಾಗಲೇ ರಾಜಕೀಯವಾಗಿ ಒತ್ತಡ ಹಾಕಿ ಬಿಲ್‌ ಮಾಡಿಕೊಳ್ಳಲು ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದ್ದರಿಂದ ಬಿಲ್‌ ತಡೆಹಿಡಿಯಬೇಕು. ಅಲ್ಲದೇ ಗುತ್ತಿಗೆದಾರನ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಿಎಸ್‌ಪಿಯ ಅಧ್ಯಕ್ಷ ಶಿವಶಾಲಕುಮಾರ ಪಟ್ಟಣಕರ್‌, ಉಪಾಧ್ಯಕ್ಷ ಆಂಜನೇಯ ಕುಸಾಳೆ, ಕಾರ್ಯದರ್ಶಿ ಪುನೀತ ಹಳ್ಳಿಕರ್‌, ಶೇಖ ಬಾಬು ಉಸ್ಮಾನ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next