ಬೆಂಗಳೂರು: ”ನಾನು ಮಹಾತ್ಮಾ ಗಾಂಧೀಜಿ ಅವರ ಅನುಯಾಯಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ,ಕಿವಿಗೆ ಹತ್ತಿ ಇಟ್ಟುಕೊಂಡಿದ್ದೇನೆ”.ಇದು ವಿದೇಶ ಪ್ರವಾಸದಿಂದ ಮರಳಿದ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿದ ಮಾರ್ಮಿಕ ಹೇಳಿಕೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 12 ಗಂಟೆಯ ವೇಳೆಗೆ ಬಂದಿಳಿದ ಅವರು ಸುದಿಗಾರರೊಂದಿಗೆ ಮಾತನಾಡಿದರು.
ನನಗೆ ಎಲ್ಲಾ ಗೊತ್ತಿದೆ, ಚುನಾವಣಾ ಫಲಿತಾಂಶದ ಎಲ್ಲಾ ಅಪ್‌ಡೇಟ್‌ಗಳು ಗೊತ್ತಾಗುತ್ತಿತ್ತು.ನಾನು ಮಹಾತ್ಮಾ ಗಾಂಧೀಜಿ ಅವರ ಅನುಯಾಯಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ,ಕಿವಿಗೆ ಹತ್ತಿ ಇಟ್ಟುಕೊಂಡಿದ್ದೇನೆ ಎಂದು ಹೇಳಿ ಮುಂದುವರಿದರು.
ಚುನಾವಣಾ ಫಲಿತಾಂಶ ಪ್ರಕಟವಾಗುವ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದು ಬಹುವಾಗಿ ಚರ್ಚೆಯಾಗಿತ್ತು, ಸೋಲಿನ ಅರಿವಿದ್ದೇ ಅವರು ವಿದೇಶಕ್ಕೆ ತೆರಳಿದ್ದರು ಎಂದೂ ಹೇಳಲಾಗಿತ್ತು.
ರಾಜ್ಯದ 28 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ ಡಿ.ಕೆ.ಶಿವಕುಮಾರ್ ಅವರಸಹೋದರ ಡಿ.ಕೆ.ಸುರೇಶ್ ಅವರು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ರಾಜ್ಯದಲ್ಲಿ ಗೆಲುವು ಸಾಧಿಸಿದ ಏಕಮಾತ್ರ ಕ್ಷೇತ್ರ ಇದಾಗಿದೆ.