ಕಲಬುರಗಿ: ಮುಂಗಾರು ಕೈ ಕೊಟ್ಟಿರುವ ಹಿಂಗಾರು ಬೆಳೆಗಳನ್ನಾದರೂ ಸಹಾಯಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿತ್ತು, ಆದರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಹಿಂಗಾರು ಸಹ ಕೈ ಕೊಡುವ ಆತಂಕ ಕಾಡುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಮಳೆ ಅಭಾವದಿಂದ ಹಾನಿಗೊಳಗಾದ ಬೆಳೆಗಳನ್ನು ವೀಕ್ಷಿಸಿ, ಕಂಗಾಲಾಗಿರುವ ರೈತರನ್ನು ಮಾತನಾಡಿಸಿದ ಅವರು, ಹಿಂಗಾರು ಸಹ ಕೆಟ್ಟ ಪರಿಸ್ಥಿತಿ ಇರುವುದರಿಂದ ರೈತರಿಗೆ ಶೀಘ್ರ ಪರಿಹಾರ ದೊರಕಿಸಲಾಗುವುದು ಎಂದರು.
ಇದನ್ನೂ ಓದಿ:Asian Games: 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಬೇಟೆ; Video
ಈಗಾಗಲೇ ರಾಜ್ಯದ ಹಲವು ಕಡೆ ಕೆಟ್ಟ ಪರಿಸ್ಥಿತಿವಿದ್ದು, ಬೆಳೆಗಳು ಹಸಿರಾಗಿ ಕಾಣುತ್ತಿವೆ. ಆದರೆ ಯಾವುದೇ ಬೆಳವಣಿಗೆಯಿಲ್ಲ. ಹೀಗಾಗಿ ರೈತ ಕಷ್ಟದಲ್ಲಿರುವುದು ಸರ್ಕಾರಕ್ಕೆ ಮನವರಿಕೆಯಿದೆ. ಪ್ರಮುಖವಾಗಿ ಹೆಚ್ಚಿನ ನಿಟ್ಟಿನ ಪರಿಹಾರ ದೊರಕಿಸಿ ಕೊಡಲು ಕೇಂದ್ರದ ಮೇಲೆ ಒತ್ತಡ ಹಾಕಲಾಗುವುದು ಎಂದರು.
ಸಚಿವರು ಮಳೆ ಅಭಾವದಿಂದ ಬಾಡಿರುವ ತೊಗರಿ, ಹತ್ತಿ ಹಾಗೂ ಇತರ ಬೆಳೆಗಳನ್ನು ವೀಕ್ಷಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ಅಧಿಕಾರಿಗಳು ಹಾಜರಿದ್ದರು.