ಕೊಪ್ಪಳ: ಕೇಂದ್ರ ಸರ್ಕಾರ ಜಾರಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ನೊಂದವರಿಗೆ ಪೌರತ್ವ ಕೊಡುತ್ತೇವೆಯೇ ವಿನಃ ಕಿತ್ತುಕೊಳ್ಳಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ಹೇಳಿದರು.
ಕೊಪ್ಪಳದಲ್ಲಿ ರವಿವಾರ ಮನೆ ಮನೆಗೆ ಭೇಟಿ ನೀಡಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ನೀಡಿ ಕರಪತ್ರ ವಿತರಿಸಿ ಮನವಿ ಮಾಡಿದರು.
ಜನತೆಗೆ ಪೌರತ್ವ ಕೊಡುಲು ಈ ಕಾಯ್ದೆ ಜಾರಿ ಮಾಡಿದೆ. ಆದರೆ ಇದನ್ನು ಕೆಲವರು ವಿರೋಧ ಮಾಡುತ್ತಿದ್ದಾರೆ. ಈ ಕುರಿತು ಜನರಲ್ಲಿ ನಾವು ಜಾಗೃತಿ ಮೂಡಿಸುತ್ತೇವೆ. ಪ್ರತಿ ಮನೆಗೆ ಭೇಟಿ ನೀಡಿ ಕಾಯ್ದೆ ಕುರಿತು ನಾವು ಹೇಳುತ್ತೇವೆ.
ಆದರೆ ಕರ್ನಾಟಕದಲ್ಲಿ ಮಂಗಳೂರಿನಲ್ಲಿ ನಡೆದ ಗಲಾಟೆ ನಡೆದು ಪರಿಸ್ಥಿತಿ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾವ ರೀತಿ ಗಲಾಟೆ ನಡೆದಿದೆ ಎನ್ನುವುದನ್ನು ಮಾಧ್ಯಮಗಳು ರಾಜ್ಯದ ಜನತೆ ಮುಂದೆ ಬಿಚ್ಚಿಟ್ಟಿವೆ ಎಂದರು.
ನಾವು ಪ್ರತಿಭಟನೆ ನಡೆಸುವವರಿಗೆ ತಡೆ ಮಾಡಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಸೋಮಶೇಖರರಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ ಬಗ್ಗೆ ನಾನು ನೋಡಿಲ್ಲ. ಯಾರೇ ಆಗಲಿ ಪ್ರಚೋದನಾತ್ಮಕ ಹೇಳಿಕೆ ನೀಡುವುದು ತರವಲ್ಲ. ಆ ರೀತಿ ಮಾತನಾಡಬಾರದು. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿಚರ್ಚೆ ನಡೆಸುತ್ತದೆ. ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.