ಮಾಗಡಿ: ಇಲ್ಲಿನ ಪುರಾಣಪ್ರಸಿದ್ಧ ಮತ್ತು ಹೆಸರಾಂತ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವನ್ನು 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಸಿ.ಎನ್ ಅಶ್ವಥನಾರಾಯಣ ಹೇಳಿದ್ದಾರೆ.
ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಅಭಿವೃದ್ಧಿಗೆ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಇದರಂತೆ ಪ್ರವಾಸೋದ್ಯಮ ವಿಷನ್ ಗ್ರೂಪ್ ನೀಡಿರುವ ಸಲಹೆ ಪ್ರಕಾರ ರಂಗನಾಥ ದೇಗುಲವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು
ಬಿಜೆಪಿ ಸರ್ಕಾರವು ರಾಜ್ಯದ ಶ್ರದ್ಧಾಕೇಂದ್ರಗಳ ಸಂರಕ್ಷಣೆಗೆ ಮತ್ತು ಪುನಶ್ಚೇತನಕ್ಕೆ ಬದ್ಧವಾಗಿದೆ. ಇದು ನಮ್ಮ ಪಕ್ಷದ ಮೂಲ ಆಶಯಗಳಲ್ಲಿ ಒಂದಾಗಿದೆ ಎಂದು ಅವರು ನುಡಿದರು.
ಇದನ್ನೂ ಓದಿ : ಮಂಕಿಪಾಕ್ಸ್ ರೋಗ ಲಕ್ಷಣಗಳನ್ನು ಹೊಂದಿದ್ದ ಕೇರಳದ ಯುವಕ ಸಾವು
ಈ ದೇವಸ್ಥಾನದಲ್ಲಿರುವ ಉದ್ಭವಮೂರ್ತಿ ಮತ್ತು ರಂಗನಾಥನ ಪ್ರತಿಮೆಗಳು ಭಕ್ತರ ಪಾಲಿಗೆ ನೆಮ್ಮದಿಯ ತಾಣಗಳಾಗಿವೆ. ಮಾಗಡಿಯ ಆಕರ್ಷಣೆಯನ್ನು ಹೆಚ್ಚಿಸುವ ರೀತಿಯಲ್ಲಿ ದೇವಸ್ಥಾನದ ಪುಣ್ಯತನ ನಡೆಯಲಿದೆ ಎಂದು ಅವರು ವಿವರಿಸಿದರು.
ಶಾಸಕ ಮಂಜುನಾಥ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು