Advertisement

ಕಾಂಗ್ರೆಸ್ ನದ್ದು ಜಾತಿ ಲೆಕ್ಕಾಚಾರ, ನಮ್ಮದು ಜಾತಿ ಇಲ್ಲದ ರಾಜಕಾರಣ: ಅಶೋಕ್

02:53 PM Sep 23, 2021 | Team Udayavani |

ಬೆಂಗಳೂರು: ಕಾಂಗ್ರೆಸ್ ಯಾವಾಗಲೂ ಜಾತಿ ಲೆಕ್ಕದಲ್ಲಿ ರಾಜಕಾರಣ ಮಾಡುತ್ತ ಬಂದಿದೆ. ಹಿಂದೆ ಧರ್ಮ ಒಡೆಯುವ ಕೆಲಸ ಮಾಡಿತ್ತು. ಕಾಂಗ್ರೆಸ್ ಗೆ ಅಂಟು ಜಾಡ್ಯ. ಅವರು ಜಾತಿ ವಿಭಜನೆ ಮಾಡಲು ಹೋಗಿ ಈ ಸ್ಥಿತಿಗೆ ಬಂದಿದ್ದಾರೆ. ನಮ್ಮದು ಧರ್ಮ ರಾಜಕಾರಣವೆಂದು ಒಪ್ಪಿಕೊಳ್ಳುತ್ತೇನೆ. ಆದರೆ ನಮ್ಮದು ಜಾತಿ ಇಲ್ಲದ ರಾಜಕಾರಣ ಎಂದು ಸಚಿವ ಆರ್.ಅಶೋಕ್ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ನವರು ಐದು ವರ್ಷ ಮಲಗಿರುತ್ತಾರೆ. ಯುದ್ಧ ಕಾಲದಲ್ಲಿ ಹೋರಾಟ ಮಾಡುತ್ತಾರೆ. ನಮ್ಮ ರಾಜ್ಯಾಧ್ಯಕ್ಷರು ಈಗಾಗಲೇ ಹದಿನೈದು ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ. ಯಡಿಯೂರಪ್ಪ ಕೂಡ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದರು.

ಕಾಂಗ್ರೆಸ್ ನವರು ಜೆಡಿಎಸ್ ನವರನ್ನು ಅರ್ಧದಾರಿಯಲ್ಲಿ ಬಿಟ್ಟು ಹೋಗಿದ್ದಾರೆ. ಹೀಗಾಗಿ ಜನರಿಗೆ ಅವರ ಬಗ್ಗೆ ಜನರಿಗೆ ಭಯ ಇದೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯವರು ಅಧ್ಯಕ್ಷರಾಗಲಿದ್ದಾರೆ. ಕಲಬುರ್ಗಿಯಲ್ಲಿ ನಮ್ಮ ಶಕ್ತಿ ಹೆಚ್ಚಾಗಿದೆ. ಕುಮಾರಸ್ವಾಮಿ ಹಾಗೂ ರೇವಣ್ಣ ಜೊತೆ ಮಾತನಾಡಿದ್ದೇನೆ. ನಿರಾಣಿ ಹಾಗೂ ಅಪ್ಪು ಪಾಟೀಲ್ ಅವರ ಜೊತೆ ಮಾತನಾಡಿದ್ದೇನೆ. ಬಿಜೆಪಿಯವರೇ ಮೇಯರ್ ಆಗುತ್ತಾರೆ ಎಂದು ಅಶೋಕ್ ಹೇಳಿದರು.

ಇದನ್ನೂ ಓದಿ:ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

ಪರಿಹಾರ ವಿತರಣೆ: ರಾಜ್ಯದಲ್ಲಿ ಕೋವಿಡ್ ನಿಂದ ಸಾವಿರಾರು ಜನರು ತೀರಿಕೊಂಡಿದ್ದಾರೆ. ಕೆಲವರು ಮಕ್ಕಳನ್ನು, ಮನೆಯ ಯಜಮಾನನನ್ನು ಕಳೆದುಕೊಂಡಿದೆ. ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾದಿಂದ ಮೃತರಾದವರ ಕುಟುಂಬದವರಿಗೆ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡುವ ಯೋಜನೆಗೆ ಚಾಲನೆ 7729 ಅರ್ಜಿಗಳು ಸ್ವೀಕೃತವಾಗಿವೆ. ಅರ್ಜಿ ಪರಿಹಾರ ವಿತರಣೆ ತಂತ್ರಾಂಶ ಅಭಿವೃದ್ಧಿ ಪಡಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.  ಕೇಂದ್ರ ಸರ್ಕಾರ ಕೂಡ ಕೋವಿಡ್ ನಿಂದ ಮೃತಪಟ್ಟ ಎಲ್ಲರಿಗೂ 50 ಸಾವಿರ ನೀಡಲು ನಿರ್ಧರಿಸಿದೆ. ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ವಿಭಾಗದಿಂದ ನೀಡಲಾಗುವುದು. ಸುಮಾರು 200 ಕೋಟಿ ರೂ. ವೆಚ್ಚವಾಗಲಿದೆ ಎಂದರು.

Advertisement

ಇಂದು ಸಾಂಕೇತಿಕವಾಗಿ 10 ಜನರಿಗೆ ಪರಿಹಾರ ವಿತರಣೆ ಮಾಡಲಾಗುವುದು. ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು ವಿತರಣೆ ಮಾಡಲು ಸೂಚನೆ ನೀಡಲಾಗಿದೆ.  ತಂದೆ ತಾಯಿಗಳನ್ನು ಕಳೆದಕೊಂಡ ಮಕ್ಕಳ ಜವಾಬ್ದಾರಿ ನೋಡಿಕೊಳ್ಳಲು ಸರ್ಕಾರ ಬದ್ದವಾಗಿದೆ.  ಬೆಂಗಳೂರಿನಲ್ಲಿ ಒಂದೇ ಕಡೆ ಚೆಕ್ ವಿತರಣೆ ಮಾಡಲಾಗುವುದು ಎಂದು ಅಶೋಕ್ ಹೇಳಿದರು.

ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಡೆಯ ಬಗ್ಗೆ ಶಾಸಕರಿಗೆ ಅಭಿಮಾನ ಇದೆ. ಅವರು ಸರಳ ವ್ಯಕ್ತಿ ಎನ್ನುವುದು ಆರಂಭದಿಂದಲೇ ಗೊತ್ತಾಗಿದೆ.   ಪ್ರತಿಪಕ್ಷವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಮುಂದಿನ ಉಳಿದ ಅವಧಿ ಪೂರ್ಣಗೊಳಿಸಿ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. 140 ಸ್ಥಾನ ಗೆಲ್ಲುತ್ತೇವೆ. ಮುಂದಿನ ಸಿಎಂ ಯಾರು ಆಗುತ್ತಾರೆ ಎಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಚಿವ ಅಶೋಕ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next