Advertisement

ಸಚಿವ ಅನಂತ ಕುಮಾರ್‌ ವಿವಾದಾತ್ಮಕ ಹೇಳಿಕೆ

01:46 AM Jan 28, 2019 | Team Udayavani |

ಮಡಿಕೇರಿ: ‘ಹಿಂದೂ ಹುಡುಗಿ ಮೈ ಮುಟ್ಟಿದ ಕೈ ಇರಬಾರದು, ಪೌರುಷ ಇದ್ದರೆ ಇತಿಹಾಸ ಬರೆಯಿರಿ’ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

Advertisement

ಕೊಡಗಿನ ಮಾದಾಪುರದಲ್ಲಿ ಪರಿವರ್ತನ ಟ್ರಸ್ಟ್‌, ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಸಾಮಾಜಿಕ ಸಮರಸತಾ ಸಮಾವೇಶ, ಹಿಂದೂ ಐಕ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ‘ಇತಿಹಾಸ ಬರೆಯುತ್ತೀರೋ ಅಥವಾ ಓದುತ್ತೀರೋ? ಇತಿಹಾಸ ಬರೆಯಲು ಮುಂದಾಗಬೇಕು. ಪೌರುಷ ಇದ್ದರೆ ಇತಿಹಾಸ ಬರೆಯಿರಿ. ದೇವರಿಗೆ ದುರ್ಬಲರೇ ಬೇಕಾಗಿದ್ದು, ಅದಕ್ಕೆ ಕುರಿ-ಕೋಳಿ ಬಲಿ ಕೊಡಲಾಗುತ್ತದೆ. ಆನೆ ಹುಲಿಯನ್ನು ಬಲಿ ಕೊಡ್ತಾರಾ? ದುರ್ಬಲರಾಗದೆ ಶೌರ್ಯ ವ್ಯಕ್ತಿಗಳಾಗಿ ಬೆಳೆಯಿರಿ. ಹಿಂದೂ ಸಮಾಜ ಒಟ್ಟಾಗಿ ನಿಲ್ಲದೇ ಇದ್ದರೆ ಮುಂದೆ ಕಷ್ಟವಾಗುತ್ತದೆ. ನೀವು ಕುರಿ-ಕೋಳಿಗಳಾಗಬೇಡಿ’ ಎಂದು ಕರೆ ನೀಡಿದ್ದಾರೆ.

ಐತಿಹಾಸಿಕ ಕಟ್ಟಡಗಳಾದ ಕುತುಬ್‌ ಮಿನಾರ್‌, ತಾಜ್‌ ಮಹಲ್‌ಗ‌ಳ ಬಗ್ಗೆಯೂ ಸಚಿವರು ವಿವಾದಾತ್ಮಕ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಕುತುಬ್‌ ಮಿನಾರ್‌ ಕಟ್ಟಿದ್ದು ಮುಸಲ್ಮಾನರಲ್ಲ. ಅದು ನಿರ್ಮಾಣವಾಗಿದ್ದು ಜೈನರ ಕಾಲದಲ್ಲಿ. ತಾಜ್‌ ಮಹಲ್‌ ರಾಜಾ ಜಯಸಿಂಹನಿಂದ ಖರೀದಿಸಿದ ಕಟ್ಟಡ. ಹಲಫ‌ನಾಮದಲ್ಲಿ ಷಹಜಹಾನ್‌ ಸ್ವತಃ ಇದನ್ನು ಹೇಳಿದ್ದಾನೆ. ತೇಜೋ ಮಹಾಲಯ ಇದ್ದುದು ಜಯಸಿಂಹನಿಂದ ಖರೀದಿಸಿದ ಬಳಿಕ ತಾಜ್‌ ಮಹಲ್‌ ಆಯ್ತು ಎಂದು ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next