Advertisement

ಮುಂದೆ ಮತ್ತೆ ಸಂಪುಟ ಪುನಾರಚನೆ ಆಗಬೇಕು, ಇತರರಿಗೂ ಖಾತೆ ನೀಡಬೇಕು: ಆನಂದ್ ಸಿಂಗ್

11:43 AM Jan 29, 2021 | Team Udayavani |

ಬೆಂಗಳೂರು: ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆಯಾಗಬೇಕು. ಆಗ ಇತರರಿಗೂ ಖಾತೆ ನೀಡಬೇಕು. ಆಗ ಬೇರೆ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಅಥವಾ ಬೇರೆಯವರಿಗೆ ಬಿಟ್ಟುಕೊಡಲು ಸೂಚಿಸಿದರೆ, ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜೀನಾಮೆ ನೀಡುತ್ತೇನೆಂದು ಮಾಧ್ಯಮದಲ್ಲಿ ಬಹಳಷ್ಟು ಊಹಾಪೂಹದ ಸುದ್ದಿ ಬಂದಿದೆ. ಸಚಿವ ಸ್ಥಾನ ಬದಲಿಸಿದಾಗ ಅಸಮಾಧಾನವಾಗಿದ್ದು ಸಹಜ. ಆದರೆ ನನಗೆ ಅಸಮಾಧಾನವಿಲ್ಲ. ಸಿಎಂ ಜೊತೆ ಮಾತುಕತೆ ಮಾಡಿದ್ದೇನೆ ಎಂದರು.

ಇದನ್ನೂ ಓದಿ:ಸದನ ಸಲಹಾ ಸಮಿತಿ ಬಹಿಷ್ಕಾರಕ್ಕೆ ಸಿದ್ದರಾಮಯ್ಯ ಪತ್ರ: ಚರ್ಚೆ ಮಾಡೋಣ ಎಂದ ಬೊಮ್ಮಾಯಿ

ಎಲ್ಲರಿಗೂ ಸಮಾಧಾನ ಮಾಡಲು ಬದಲಾವಣೆ ಸಹಜ. ಖಾತೆ ದೊಡ್ಡದು, ಚಿಕ್ಕದು ಎಂದೇನಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸಿ, ಮುಖ್ಯಮಂತ್ರಿಗಳಿಗೆ ಸಹಕಾರ ಕೊಡಬೇಕು. ಸರ್ಕಾರಿ ಕೆಲಸ ದೇವರ ಕೆಲಸ ಅಂತ ವಿಧಾನಸೌಧದಲ್ಲಿ ಬರೆದಿದ್ದಾರೆ ಎಂದು ಸಚಿವ ಸಿಂಗ್ ಹೇಳಿದರು.

ಅರಣ್ಯ ಇಲಾಖೆ ಖಾತೆ ನೀಡಿದ್ದಾಗ ಅನೇಕ ಕೆಲಸ ಮಾಡಿದ್ದೇನೆ. ಡೀಮ್ಡ್ ಫಾರೆಸ್ಟ್ ಮಾಡಲಾಗಿದೆ. ಅರವಿಂದ ಲಿಂಬಾವಳಿ ಅವರು ಓಡಾಡಿದರೆ ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದ ಅವರು ಪರಿಸರ ಖಾತೆ ಕೊಟ್ಟಿದ್ದು, ಅದನ್ನೂ ನಿಭಾಯಿಸಿದೆ. ಹಜ್ ಮತ್ತು ವಕ್ಫ್ ಖಾತೆಯನ್ನೂ ನೀಡಿದ್ದಾರೆ. ಅದನ್ನ ನಿಭಾಯಿಸಿಕೊಂಡು ಹೋಗುತ್ತೇನೆ ಎಂದರು.

Advertisement

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ಜಂಟಿ ಅಧಿವೇಶನದ ರಾಷ್ಟ್ರಪತಿ ಭಾಷಣಕ್ಕೆ ಬಹಿಷ್ಕಾರ: ಎಚ್ ಡಿ ದೇವೇಗೌಡ

ನಾನಗೆ ಯಾವುದೇ ಅಸಮಾಧಾನವಿಲ್ಲ. ಯಾವುದೇ ಖಾತೆ ನೀಡಿದರೂ ಅಸಮಧಾನವಿಲ್ಲ. ಇಂದೇ ಖಾತೆ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ಆನಂದ್ ಸಿಂಗ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next