Advertisement

ಬೆಂಗಳೂರು : ಹುಣಸೋಡು, ಹಿರೇನಾಗವಲ್ಲಿ ಜಿಲೆಟಿನ್‌ ಸ್ಫೋಟ ಪ್ರಕರಣಗಳ ಬಳಿಕ ನಿಯಮ ಪಾಲನೆಗೆ ಒತ್ತು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಹುತೇಕ ಉಪ ಖನಿಜಗಳ ಗಣಿ ಚಟುವಟಿಕೆ ಸ್ಥಗಿತಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ರಾಯಧನ ಸಂಗ್ರಹದಲ್ಲಿ 300 ಕೋಟಿ ರೂ. ಖೋತಾ ಆಗುವ ಸಾಧ್ಯತೆ ಇದೆ!

Advertisement

ಉಪ ಖನಿಜ ಗುತ್ತಿಗೆದಾರರು ಗಣಿ ಸುರಕ್ಷಾ ಮಹಾ ನಿರ್ದೇಶನಾಲಯ(ಡಿಜಿಎಂಎಸ್‌)ದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದು, ಉಪಖನಿಜ ಗಣಿಗಾರಿಕೆ ಬಹುತೇಕ ಸ್ಥಗಿತಗೊಂಡಿದೆ. ಸಮಸ್ಯೆ ನಿವಾರಿಸಲು ಇಲಾಖೆ ಕಸರತ್ತು ಮುಂದುವರಿಸಿದೆ.

ಗ್ರಾನೈಟ್‌, ಇತರ ಉಪ ಖನಿಜಗಳಿಗೆ ಸಂಬಂಧಿಸಿ ಸುಮಾರು 2,500 ಗಣಿ ಗುತ್ತಿಗೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 3,650 ಕೋ.ರೂ. ರಾಯಧನ ರೂಪದಲ್ಲಿ ಸಂಗ್ರಹವಾಗುವ ನಿರೀಕ್ಷೆ ಇತ್ತು. ಕಳೆದ ಫೆಬ್ರವರಿ ಅಂತ್ಯಕ್ಕೆ 3,200 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಆದರೆ ಪ್ರಸ್ತುತ ಗಣಿಗಾರಿಕೆ ನಿಂತು ರಾಯಧನ ಸಂಗ್ರಹದಲ್ಲಿ ಗುರಿ ಸಾಧನೆ ಆಗದೆ ಇರುವ ಸಾಧ್ಯತೆಯಿದೆ.

ನಿಯಮ ಪಾಲನೆಗೆ ಒತ್ತು
ಗಣಿಗಾರಿಕೆಯಲ್ಲಿ ಪಾಲಿಸಬೇಕಾದ ಸುರಕ್ಷಾ ಕ್ರಮ, ನಿಯಮ ಪಾಲನೆಗೆ ಇಲಾಖೆ ನಿರ್ದೇಶನ ನೀಡಿದರೂ ಗುತ್ತಿಗೆದಾರರು ಗಮನ ನೀಡುತ್ತಿರಲಿಲ್ಲ. ಆದರೆ ಸ್ಫೋಟಗಳ ಬಳಿಕ ಎಲ್ಲರೂ ಎಚ್ಚೆತ್ತಿದ್ದಾರೆ. ಅಧಿಕಾರಿಗಳು ಎಚ್ಚರ ವಹಿಸಲಾರಂಭಿಸಿದ್ದು, ಗಣಿ ಚಟುವಟಿಕೆ ನಿಯಂತ್ರಣಕ್ಕೆ ಬರಲಾರಂಭಿಸಿದೆ.

ಗಣಿ ಚಟುವಟಿಕೆಗಳಲ್ಲಿ ಸುರಕ್ಷಾ ಕ್ರಮಗಳ ಪಾಲನೆಗೆ ಒತ್ತು ನೀಡಲಾಗಿದೆ. ಗುತ್ತಿಗೆದಾರರು ಮುಚ್ಚಳಿಕೆ, ಡಿಜಿಎಂಎಸ್‌ಗೆ ಸಲ್ಲಿಸಿರುವ ಅರ್ಜಿ ಪ್ರತಿ ಸಹಿತ ಆಯ್ದ ದಾಖಲೆ ಸಲ್ಲಿಸಲು ಅವಕಾಶ ನೀಡಿ, 90 ದಿನಗಳೊಳಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ.

Advertisement

-ಮುರುಗೇಶ್‌ ನಿರಾಣಿ, ಗಣಿ ಸಚಿವ

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next