Advertisement

ಬೇಬಿಬೆಟ್ಟದ ಸುತ್ತ ಮಾರ್ಚ್ 24ರವರೆಗೆ ಎಲ್ಲ ರೀತಿಯ ಗಣಿಗಾರಿಕೆ ನಿಷೇಧ

08:59 PM Jan 27, 2021 | Team Udayavani |

ಮಂಡ್ಯ: ಪಾಂಡವಪುರ ತಾಲೂಕಿನ ಬೇಬಿಬೆಟ್ಟ ಸೇರಿದಂತೆ ವಿವಿಧೆಡೆ ಇರುವ ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್‌ಗಳನ್ನು ಜ.25ರಿಂದ ಮಾರ್ಚ್ 24ರವರೆಗೆ ನಿಷೇಧಿಸಿ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಆದೇಶ ಹೊರಡಿಸಿದ್ದಾರೆ.

Advertisement

ಪಾಂಡವಪುರ ತಾಲೂಕಿನ ಬೇಬಿ, ಬೇಬಿಬೆಟ್ಟದ ಕಾವಲ್, ಕಣಿವೆಕೊಪ್ಪಲು, ಹೊನಗಾನಹಳ್ಳಿ, ಕಟ್ಟೇರಿ, ಕೆ.ಮಲ್ಲೇನಹಳ್ಳಿ, ಮಲ್ಲಿಗೆರೆ, ಡಿಂಕಾ, ಅಲ್ಲಹಳ್ಳಿ, ಬಿಂಡಹಳ್ಳಿ, ಬಸ್ತಿಹಳ್ಳಿ, ಮಾಡ್ರಳ್ಳಿ, ಬನ್ನಂಗಾಡಿ, ಚಿನಕುರುಳಿ, ಕಾಮನಾಯ್ಕನಹಳ್ಳಿ, ತಿರುಮಲಾಪುರ, ಗುಮ್ಮನಹಳ್ಳಿ ಹಾಗೂ ಮೊಳೆಸಂದ್ರ ಗ್ರಾಮಗಳ ವ್ಯಾಪ್ತಿಯಲ್ಲಿ ಯಾವುದೇ ತರಹದ ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್ ಚಟುವಟಿಕೆಗಳನ್ನು ನಡೆಸದಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

23 ಜಲ್ಲಿ ಕ್ರಷರ್‌ಗಳಿಗೆ ಸಿ ಫಾರಂ:
ಕಲ್ಲು ಗಣಿ ಗುತ್ತಿಗೆ ಮಾಡಲು ಹಾಗೂ ಜಲ್ಲಿ ಕ್ರಷರ್‌ಗಳ ಅನುಮತಿ ಪಡೆದಿರುವ ಬಗ್ಗೆ ಸಂಬoಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದಿದ್ದು, ಅದರಂತೆ 9 ಪ್ರಕರಣಗಳಲ್ಲಿ ಕಲ್ಲು ಗಣಿ ಗುತ್ತಿಗೆ ಅವಧಿ ವಿಸ್ತರಣೆಯಾಗಿರುವ ಮತ್ತು ಇ.ಸಿ. ಪಡೆದಿರುವ ಪ್ರಕರಣಗಳಿವೆ. 2013ರಂತೆ ಹೊಸ ತಿದ್ದುಪಡಿ ನಿಯಮದಂತೆ ಜಲ್ಲಿ ಕ್ರಷರ್ ಸ್ಥಾಪಿಸಲು ಕೋರಿ ಸಲ್ಲಿಸಿರುವ ಒಟ್ಟು 24 ಅರ್ಜಿಗಳಿವೆ. ಇದರಲ್ಲಿ 23 ಪ್ರಕರಣಗಳು ಫಾರಂ-ಸಿ ಪಡೆದಿದ್ದಾರೆ. ಫಾರಂ-ಸಿ ಪಡೆದ ಒಟ್ಟು 23 ಜಲ್ಲಿ ಕ್ರಷರ್‌ಗಳನ್ನು ವೈಯಕ್ತಿಕವಾಗಿ ಮತ್ತು ಪ್ರತ್ಯೇಕವಾಗಿ ಪರಿಶೀಲಿಸಿ ವರದಿ ಸಲ್ಲಿಸಲಾಗಿದೆ.

ಇದನ್ನೂ ಓದಿ:ರಾಜ್ಯದ ಒಂದಿಂಚು ಜಾಗವನ್ನೂ ಬಿಡೆವು, ನಮ್ಮನ್ನು ಕೆಣಕಿದರೆ ಪರಿಣಾಮ ನೆಟ್ಟಗಿರಲ್ಲ :ನಾರಾಯಣಗೌಡ

ದಾಖಲೆ ನೀಡದ ಮಾಲೀಕರು:
ಜಲ್ಲಿ ಕ್ರಷರ್ ಮಾಲೀಕರಿಗೆ ಕ್ರಷರ್ ನಡೆಸಲು ಎಲ್ಲಿಂದ ಕಚ್ಚಾ ವಸ್ತುಗಳನ್ನು ಎಷ್ಟು ಪ್ರಮಾಣದಲ್ಲಿ ಅಮದು ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎಲ್ಲ ದಾಖಲಾತಿಗಳನ್ನು ಎರಡು ದಿನದೊಳಗೆ ಸಲ್ಲಿಸುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಇದುವರೆಗೂ ಯಾರೊಬ್ಬರೂ ಸಹ ಮಾಹಿತಿ ನೀಡಿಲ್ಲ. ಆದರೆ ಕಚ್ಚಾವಸ್ತುವನ್ನು ಮದ್ದೂರು ಮತ್ತು ಬಿಡದಿಯಿಂದ ಅಮದು ಮಾಡಿಕೊಳ್ಳುತ್ತಿರುವ ಬಗ್ಗೆ ತಿಳಿಸಿದ್ದಾರೆ. ಆದರೆ ಇದಕ್ಕೆ ಸೂಕ್ತ ದಾಖಲೆ ನೀಡಿಲ್ಲ.

Advertisement

ಗಣಿಗಾರಿಕೆ ಕುರುಹು:
ಸ್ಥಳ ಪರಿಶೀಲನಾ ಸಮಯದಲ್ಲಿ ಮೇಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಗಣಿಗಾರಿಕೆ ಮಾಡಿರುವ ಕುರುಹುಗಳು ಇದ್ದು, ಆ ಸಂದರ್ಭದಲ್ಲಿ ಗಣಿಗಾರಿಕೆ ನಡೆಸಲು ಸ್ಥಳದಲ್ಲಿದ್ದ 7 ಹಿಟಾಚಿ, 4 ಲಾರಿ ಸೀಜ್ ಮಾಡಿ ಕಾನೂನು ಕ್ರಮಕ್ಕಾಗಿ ಪೊಲೀಸ್ ಇಲಾಖೆಯ ವಶಕ್ಕೆ ನೀಡಲಾಗಿದೆ. ವಾಹನಗಳ ಮೇಲೆ ಪಿಸಿಆರ್ ಕಾನೂನು ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಕೆಗೆ ತಿಳಿಸಲಾಗಿದೆ.

ಪದೇ ಪದೇ ಉಲ್ಲಂಘನೆ:
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಹುಣಸೋಡು ಘಟನೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಎಲ್ಲ ಗ್ರಾಮಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ಉಲ್ಲಂಘನೆಯಾಗುತ್ತಿದ್ದು, ಅಲ್ಲದೆ, 80 ವರ್ಷಗಳ ಐತಿಹಾಸಿಕ ಕೃಷ್ಣರಾಜಸಾಗರ ಜಲಾಶಯ ಸುರಕ್ಷತೆ, ಈ ಪ್ರದೇಶದಲ್ಲಿ ವಾಸ ಮಾಡುವ ಸಾರ್ವಜನಿಕರ ನೆಮ್ಮದಿ ಹಾಗೂ ಶಾಂತಿಯ ದೃಷ್ಟಿಯಿಂದ ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next