ರಾಮನಗರ: ಕಳೆದ 20 ವರ್ಷಗಳಿಂದ ರಾಮನಗರದಲ್ಲಿ ಏನೊಂದು ಅಭಿವೃದ್ಧಿಯಾಗಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ವಿರುದಟಛಿ ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮಾಡಿರುವ ಆರೋಪಗಳಿಗೆ ಜೆಡಿಎಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ಮಾತನಾಡಿದರು.
ಇಕ್ಬಾಲ್ ಹುಸೇನ್ ಗಣಿಗಾರಿಕೆ ದುಡ್ಡು ಅವರಿಂದ ಈ ಮಾತುಗಳನ್ನಾಡಿಸುತ್ತಿದೆ ಎಂದು ತಿರುಗೇಟು ನೀಡಿದರು. 1994ಕ್ಕೂ ಮುನ್ನ ಕಾಂಗ್ರೆಸ್ ಮುಷ್ಠಿಯಲ್ಲಿ ದ್ದ ರಾಮನಗರದ ರಸ್ತೆಗಳು ದೂಳು ಕಾರು ತ್ತಿದ್ದವು. ಮೂಲ ಸೌಕರ್ಯಗಳ ಕೊರತೆ ಕಾಡುತ್ತಿತ್ತು. ಶಾಸಕರಾಗಿದ್ದ ಎಚ್.ಡಿ.ದೇವೇ ಗೌಡರು, ತದನಂತರ ಎಚ್.ಡಿ.ಕುಮಾರಸ್ವಾಮಿ ಮತ್ತು ಇದೀಗ ಅನಿತಾ ಕುಮಾರಸ್ವಾಮಿ ಅವರು ಕೋಟ್ಯಂತರ ರೂ. ವೆಚ್ಚದ ಅಭಿವೃದ್ಧಿ ಕೈಗೊಂಡಿರುವುದು, ಅವರ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು. ಅಭಿ ವೃದ್ದಿ ಮಾಡಿದ್ದರಿಂದಲೇ ಜನ ವಿಶ್ವಾಸವಿಟ್ಟು ಅವರನ್ನು ಪುನರಾಯ್ಕೆ ಮಾಡುತ್ತಿದ್ದಾರೆ ಎಂದರು.
ಇಕ್ಬಾಲ್‌ರದ್ದು ಹಣದಿಂದಲೇ ಲೆಕ್ಕಾಚಾರ: ಇಕ್ಬಾಲ್ ಹುಸೇನ್ ಎಲ್ಲವನ್ನು ಹಣದಿಂದಲೇ ಅಳೆಯುತ್ತಾರೆ. ತಾಲೂಕಿನಲ್ಲಿ ಜೆಡಿಎಸ್ ಮುಖಂಡರಿಗೆ ಆಮಿಷವೊಡ್ಡುವ ಕೆಲಸ ನಡೆ ಯುತ್ತಲೇ ಇದೆ. ತಾಪಂ ಅಧ್ಯಕ್ಷರ ಚುನಾವಣೆ ನಂತರ ಎಪಿಎಂಸಿ ಅಧ್ಯಕ್ಷರ ಚುನಾವಣೆ ಯಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಅಧಿಕಾರ ಹಾಗೂ ಹಣದ ಆಮಿಷವೊಡ್ಡಿ ಜೆಡಿಎಸ್ ನಿಂದ ಅಧಿಕಾರ ಕಸಿದುಕೊಂಡಿದ್ದಾರೆ ಎಂದು ಹರಿಹಾಯ್ದರು. ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಎಂದೂ, ಯಾರಿಗೂ ಅಧಿಕಾರ ಮತ್ತು ಹಣದ ಆಮಿಷವೊಡ್ಡಿಲ್ಲ. ರಾಜಕೀಯ ಕುತಂತ್ರ ಮಾಡಿಲ್ಲ, ದೇವೇಗೌಡರು ಜಾರಿ ಮಾಡಿದ ಕಾನೂನಿನಿಂದಾಗಿ ಸ್ಥಳೀಯ ಸಂಸ್ಥೆ ಗಳಲ್ಲಿ ಎಲ್ಲ ಸಮುದಾಯದವರಿಗೂ ಅಧಿ ಕಾರ ಪ್ರಾಪ್ತಿಯಾಗುತ್ತಿದೆ ಎಂದರು.
ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ: ಸದ್ಯ ಕೋವಿಡ್-19 ಸೋಂಕು ಹರಡುತ್ತಿ ರುವ ಕಾರಣ ಚನ್ನಪಟ್ಟಣ ಶಾಸಕ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರಗಳಿಗೆ ಬರಲಾಗುತ್ತಿಲ್ಲ ನಿಜ. ಆದರೆ ಅವರು ದೂರವಾಣಿ ಮೂಲಕ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜನರ ಬೇಕು ಬೇಡಗಳ ಬಗ್ಗೆ ಕಾಳಜಿವಹಿಸುತ್ತಿದ್ದಾರೆ ಎಂದರು.
ನೀರಿನ ಸಮಸ್ಯೆ ಶೀಘ್ರ ಇತ್ಯರ್ಥ: ನಗರ ನೀರು ಸರಬರಾಜು ಇಲಾಖೆಯಿಂದ ನಗರ ದಲ್ಲಿ ನೀರಿನ ವಿತರಣೆ ಸುಧಾರಿಸಲು ಸುಮಾರು 10 ಕೋಟಿ ರೂ. ಕಾಮಗಾರಿ ನಡೆ ಯುತ್ತಿದೆ. 2050ನೇ ವರ್ಷದವರೆಗೆ ದೃಷ್ಟಿಯಲ್ಲಿಟ್ಟುಕೊಂಡು ಸುಮಾರು 440 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಕ್ಕೆ ಟೆಂಡರ್ ಪಕ್ರಿಯೆ ಪೂರ್ಣಗೊಂಡಿದೆ. ಸದ್ಯ ದಲ್ಲೇ ಜಿಲ್ಲಾ ಕೇಂದ್ರ ರಾಮನಗದ ನೀರಿನ ಸಮಸ್ಯೆ ನೀಗಲಿದೆ ಎಂದರು. ಜೆಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ಸಾಬಾನ್ ಸಾಬ್, ಚಿಕ್ಕವೀರೇಗೌಡ, ಕುಮಾರ್, ಶಂಕರಣ್ಣ, ಎ.ರವಿ, ಪರ್ವಿಜ್ ಪಾಷ, ದೊರೆ15 ಲಕ್ಷ ಗಿಡ ನೆಡುವ ಸ್ವಾಮಿ ಪ್ರಸಾದ್ ಹಾಜರಿದ್ದರು.