Advertisement

Mining Company; ರಾಜ್ಯಗಳಿಗೆ ಗಣಿ ತೆರಿಗೆ ಅಧಿಕಾರ: ಸರ್ವೋಚ್ಚ ನ್ಯಾಯಾಲಯ ಅಸ್ತು

01:17 AM Jul 26, 2024 | Team Udayavani |

ಹೊಸದಿಲ್ಲಿ: ಗಣಿಗಾರಿಕೆ ಮತ್ತು ಖನಿಜಗಳ ಬಳಕೆ ಮೇಲೆ ತೆರಿಗೆ ಹಾಕುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆ. ಗಣಿ ಕಂಪೆನಿಗಳು ಕೇಂದ್ರ ಸರಕಾರಕ್ಕೆ ಕಟ್ಟುವ ರಾಯಧನವು ತೆರಿಗೆಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ 1989ರಲ್ಲಿ ಸರ್ವೋಚ್ಚ ಪೀಠ ನೀಡಿದ್ದ ತೀರ್ಪು ಸರಿಯಲ್ಲ ಎಂದು ಹೊಸ ತೀರ್ಪಿನಲ್ಲಿ ಹೇಳಲಾಗಿದೆ.

Advertisement

ಈ ತೀರ್ಪು ಪೂರ್ವಾನ್ವಯವಾಗುತ್ತದೆಯೇ ಎಂದು ಜು. 31ರಂದು ಸರ್ವೋಚ್ಚ ಪೀಠ ಇತ್ಯರ್ಥ ಮಾಡಲಿದೆ. 1957ರ ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯಡಿ ರಾಜ್ಯ ಸರಕಾರಗಳು ಗಣಿ ಕಂಪೆನಿಗಳಿಗೆ ತೆರಿಗೆ ವಿಧಿಸುವುದು ಸರಿಯೋ, ತಪ್ಪೋ ಎಂಬ ಚರ್ಚೆ ಬಹಳ ಹಿಂದಿನಿಂದಲೂ ಇದೆ. 1989ರಲ್ಲಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ಗಣಿ ಕಂಪೆನಿಗಳು ಪಾವತಿಸುವ ರಾಯಧನ ಒಂದು ಮಾದರಿಯ ತೆರಿಗೆ. ಹೀಗಾಗಿ ರಾಜ್ಯ ಸರಕಾರಗಳಿಗೆ ಪ್ರತ್ಯೇಕವಾಗಿ ತೆರಿಗೆ ವಿಧಿಸುವ ಅಧಿಕಾರವಿಲ್ಲ ಎಂದಿತ್ತು.

ನ್ಯಾಯಪೀಠ ಹೇಳಿದ್ದೇನು?
-ಕೇಂದ್ರಕ್ಕೆ ಗಣಿ ಕಂಪೆನಿಗಳು ಪಾವತಿಸುವ ರಾಯಧನ ತೆರಿಗೆಯಲ್ಲ. ಹೀಗಾಗಿ ರಾಜ್ಯ ಸರಕಾರಗಳಿಗೆ ತೆರಿಗೆ ಹೇರುವ ಅಧಿಕಾರವಿದೆ.
-ಸಂಸತ್ತು ಬೇಕಾದರೆ ಸಂವಿಧಾನದ ಪ್ರಕಾರ ತೆರಿಗೆ ಮೇಲೆ ಮಿತಿಗಳನ್ನು ಹಾಕಬಹುದು. ಆದರೆ ಗಣಿ ಕಾಯ್ದೆಯನ್ನು ಬಳಸಿ ರಾಜ್ಯ ಸರಕಾರಗಳ ತೆರಿಗೆ ಅಧಿಕಾರವನ್ನು ನಿರಾಕರಿಸುವಂತಿಲ್ಲ

 

Advertisement

Udayavani is now on Telegram. Click here to join our channel and stay updated with the latest news.

Next