ಬೆಂಗಳೂರು: ರುದ್ರಭೂಮಿ ಹಾಗೂ ವಿದ್ಯುತ್ ಚಿತಾಗಾರಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕನಿಷ್ಠ ವೇತನ ಪಾವತಿ ಸಲು ಬಿಬಿಎಂಪಿ ಆದೇಶಿಸಿದೆ.
ಪಾಲಿಕೆ ವ್ಯಾಪ್ತಿಯ ಹಲವು ವಿದ್ಯುತ್ ಚಿತಾಗಾರ ಹಾಗೂ ರುದ್ರಭೂಮಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕನಿಷ್ಠ ವೇತನ ನೀಡದೆ. ಕಳೆದ ಒಂದು ವರ್ಷದಿಂದ ವೇತನ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮತ್ತು ಅವರ ಆರೋಗ್ಯವನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ
“ಉದಯವಾಣಿ’ ಫೆ.24ರಂದು “ಮುಕ್ತಿಧಾಮಗಳ ಬರಕ್ಕೆ ಮುಕ್ತಿ ಎಂದು?’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಾಲಿಕೆಯ ಅಧಿಕಾರಿಗಳು ವರದಿ ಪ್ರಕಟವಾದ ದಿನವೇ ಈ ಸಂಬಂಧ ಸಭೆ ನಡೆಸಿದ್ದಾರೆ. ಪಾಲಿಕೆ ವ್ಯಾಪ್ತಿಯ ಎಲ್ಲ ವಿದ್ಯುತ್‌ಚಿತಾಗಾರ ಹಾಗೂ ರುದ್ರಭೂಮಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಗಳಿಗೆ ಎಚ್‌ಆರ್‌ಎಂಎಸ್ ಮೂಲಕ ನೇರವಾಗಿ ವೇತನ ಪಾವತಿ ಮಾಡು ವಂತೆ ವಲಯವಾರು ಆರೋಗ್ಯಾ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅಲ್ಲದೆ, ಸಿಬ್ಬಂದಿಗಳ ಕಾರ್ಮಿಕರ ಭವಿಷ್ಯ ನಿಧಿ (ಪಿಎಫ್) ಆರೋಗ್ಯ ವಿಮಾ ಖಾತೆ (ಇಎಸ್‌ಐ) ತೆರೆಯುವಂತೆ ಮತ್ತು ಇದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ವಿದ್ಯುತ್‌ಚಿತಾಗಾರ ,ರುದ್ರಭೂಮಿ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಗಳಿಂದ ಪಡೆದು ಕ್ರಮವಹಿಸಲು ಸೂಚನೆ ನೀಡಲಾಗಿದೆ.
ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವುದು ಆಡಳಿತ ವರ್ಗದ ಕರ್ತವ್ಯ. ಕಾರ್ಮಿಕ ಕಾನೂನಿನಲ್ಲಿಯೂ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಈ ಹಿಂದಿನ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪಾಲಿಕೆ ಕ್ರಮ ಕೈಗೊಂಡಿದೆ.
ರವೀಂದ್ರ ಸುರಪುರ, ವಿಶೇಷ ಆಯುಕ್ತ (ಯೋಜನೆ), ಬಿಬಿಎಂಪಿ